ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನಾನಿನ್ನು ಶಬರಿಯಾಗುತ್ತೇನೆ..’

೨೦೧೬ ರಲ್ಲಿ ಗೋಪಾಲ ವಾಜಪೇಯಿ ಸಂಭ್ರಮಪಟ್ಟು ಬರೆದದ್ದು

ನಂಗಿವತ್ತು ಕೇಕೆ ಹಾಕಿ ಕುಣಿದುಬಿಡುವಷ್ಟು ಸಂತೋಷವಾಗಿದೆ…

‘ಹೂಮಳೆ’ಯ ಕವಿ, ಸೋದರ ವಾತ್ಸಲ್ಯದ ಹಿರಿಯ ಬಿ.ಎ. ಸನದಿ ಅವರು ಇವತ್ತು ಮಧ್ಯಾಹ್ನ ಊಟದ ಹೊತ್ತಿಗೆ ಫೋನ್ ಮಾಡಿದರು.

ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದಾರಂತೆ ಆ ೭೫ರ ಹಿರಿಯ.

ಅವರ ಮಾತೆಂದರೆ ಹಾಗೆ… ಅದು ಪ್ರೀತಿಯ ಧಾರೆ… ನನಗಂತೂ ಇನ್ನು ಊಟವೇ ಬೇಡವೆನಿಸಿತು.

ಸನದಿಯವರನ್ನು ನಾನು ಮೊದಲ ಸಲ ಭೇಟಿಯಾದದ್ದು 1978ರಲ್ಲಿ. ಮುಂಬಯಿ ಆಕಾಶವಾಣಿಯಲ್ಲಿ. ಆಗವರು ಅಲ್ಲಿ ಉನ್ನತ ಅಧಿಕಾರಿ. ಆದರೆ ಅದಾವುದನ್ನೂ ತಲೆಗೇರಿಸಿಕೊಳ್ಳದೇ ತುಂಬಾ ಆತ್ಮೀಯತೆಯಿಂದ ಮಾತಾಡಿದರು. ಮಧ್ಯಾಹ್ನದ ಊಟಕ್ಕೂ ಕರೆದೊಯ್ದರು. ಕನ್ನಡಿಗರೆಂದರೆ ಅವರಿಗೆ ‘ಮನೆಯ ಜನ.’

ಆಗ ಜತೆಯಾದ ಇನ್ನೊಬ್ಬರೆಂದರೆ ಕನ್ನಡ-ಮರಾಠಿ ಭಾಷಾ ತಜ್ಞ ಡಾ. ಅ. ರಾ. ತೋರೋ ಅವರು.

”ಮುಂದಿನ ಸಲ ಬೆಂಗಳೂರಿಗೆ ಬಂದಾಗ ಮನೆಗೆ ಬರುತ್ತೇನೆ” ಎಂದಿದ್ದಾರೆ ಸನದಿ ಅಣ್ಣ.

ನಾನಿನ್ನು ಶಬರಿಯಾಗುತ್ತೇನೆ.

 

‍ಲೇಖಕರು g

31 March, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading