ಒಂದು ವಿಶಿಷ್ಟ ಪ್ರಶಸ್ತಿಗೆ 20 ವರ್ಷ…
‘ಮಹಿಳಾ ದಿನ’ದ ಸಂದರ್ಭದಲ್ಲಿ ನಾಗೇಶ ಹೆಗಡೆಗೆ ಪ್ರಶಸ್ತಿ ಸಿಕ್ಕ ಒಂದು ಹಳೇ ಕತೆ ಇದು.
ಆಗಿನ್ನೂ ಮಹಿಳಾ ದಿನಾಚರಣೆಗೆ ಇಷ್ಟೊಂದು ಅಬ್ಬರದ ಪ್ರಚಾರ ಇರಲಿಲ್ಲ. ಬೆಂಗಳೂರಿನ ‘ಗಿಲ್ಡ್ ಆಫ್ ವಿಮೆನ್ ಅಚೀವರ್ಸ್’ ಎಂಬ ಸಂಸ್ಥೆ ಯಶಸ್ವೀ ಮಹಿಳೆಯ ಹಿಂದಿರುವ ಗಂಡನನ್ನು ಗುರುತಿಸಿ ‘Helpful Husband Award’ ಎಂಬ ಪ್ರಶಸ್ತಿಯನ್ನು ಅದೇತಾನೆ ಕೊಡಲು ಆರಂಭಿಸಿದ್ದರು.
ಖರೇ ಹೇಳುತ್ತೇನೆ, ಅಲ್ಲಿ ನನ್ನ ಪಾತ್ರ ಏನೇನೂ ಇರಲಿಲ್ಲ.
ತೀರ್ಪುಗಾರ್ತಿಯರ ಎದುರು ಮಹಿಳೆಯರೇ ತಂತಮ್ಮ ಗಂಡಂದಿರನ್ನು ಹಾಡಿ ಹೊಗಳಿ, ಪ್ರಬಂಧ, ನಿಬಂಧ, ಕವನಗಿವನ ಬರೆದು ಚರ್ಚಾಸ್ಪರ್ಧೆಯಲ್ಲಿ ಜಿದ್ದಾಜಿದ್ದಿ ಕಾದಾಡಿ, ತಮ್ಮ ಗಂಡಂದಿರಿಗೆ ಪ್ರಶಸ್ತಿ ಕೊಡಿಸುವ ಪೈಪೋಟಿ ಅದಾಗಿತ್ತಂತೆ. ನನ್ನ ಪತ್ನೀಮಣಿಗೆ ಈ ಪ್ರಶಸ್ತಿ ಸಿಕ್ಕಿಬಿಡ್ತು!
ಅವಳಿಗಲ್ಲ, ಅವಳ ಯತ್ನದಿಂದಾಗಿ ನನಗೆ ಪ್ರಶಸ್ತಿ !
Actually ಸಿಕ್ಕಿದ್ದು ನನಗಲ್ಲ, ಇವಳಿಗೆ.
ಅಥವಾ ನನಗೇ ಇರಬಹುದು.
ಗೊಂದಲ ಪರಿಹಾರ ಆಗಿಲ್ಲ ಇನ್ನೂ….





0 Comments