ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಳಿನಾ ಬರೆದ ಸಣ್ಣಕಥೆ ’ಮಾಮ’

ನಳಿನ ಡಿ

ಒಂದು ಇಳಿಸಂಜೆ ನನ್ನ ಕೈಹಿಡಿದಿದ್ದ ಅಮ್ಮ ಮೀನು ಕೊಳ್ಳಲು ಹೊರಟಳು, ಆಗಷ್ಟೇ ಊರಿನಿಂದ ಬಂದ ಮಾಮನಿಗೆ ರಾತ್ರಿ ಬೋಜನಕ್ಕೆ ಅಣಿಮಾಡುವ ಅಂದಾಜು ಅವಳದ್ದು. ಅದೇ ಕೈಯನ್ನು ಹಿಡಿದ ಮಾಮ ಊರಿನಿಂದ ತಂದಿದ್ದ ಕೊಬ್ಬರಿ ಮಿಠಾಯಿ, ಗೊಂಬೆಯ ಆಕಾರದ ಬಿಸ್ಕತ್ತು, ವಿವಿಧ ಬರ್ಫಿಗಳನ್ನು ತೆರೆದಿಟ್ಟು ನನ್ನ ಖುಷಿಯನ್ನು ದುಪ್ಪಟ್ಟಾಗಿಸಿದ. ಅವನ ಹೆಗಲ ಮೇಲೆ ಕುಳಿತು ನಾನು ನಾಲ್ಕೈದು ಅಡಿ ಎತ್ತರದಿಂದ ಸುತ್ತಲೂ ನೋಡುತ್ತಿದ್ದುದು ರಜೆಯ ಸಂಜೆಗಳಲ್ಲಿ ಮಾಮೂಲಿ. ಮುಂದೊಮ್ಮೆ ಅವನಿಗೆ ರೈಲ್ವೆ ಇಲಾಖೆಯಲ್ಲಿ ನೌಕರಿಯಾಯಿತಂತೆ, ಅಲ್ಲಿ ಪೋಲೀಸ್ ಆಗಿದ್ದಾನೆ, ಜೊತೆಯಲ್ಲೊಬ್ಬಳು ಹುಡುಗಿ ಇಟ್ಟುಕೊಂಡಿದ್ದಾನೆ ಎಂಬ ಪುಕಾರು ಕೇಳಿ, ಅಮ್ಮ ಅತ್ತು ಕರೆದು ಅಪ್ಪನನ್ನು ಒಲಿಸಿ ಮಾಮನನ್ನು ಮೈಸೂರು ಬಿಡಿಸಿ ಹರಸಿಕೇರೆಗೆ ಎಳೆತಂದರು. ರೂಟಿನ್ ತಪ್ಪಿದವನಂತೆ ನನ್ನನ್ನು ನಾನು ಇಷ್ಟಪಡುವ ತಿಂಡಿ ತರುವುದನ್ನು ಮರೆತವನಂತೆ ಇದ್ದ ಮಾಮ ಮರಳಿ ಆಗಾಗ ಬಂದು ಹೋಗುತ್ತಿದ್ದ. ಅಮ್ಮನಿಗಿಂತ ಆರು ವರ್ಷಕ್ಕೆ ದೊಡ್ಡವನಂತೆ, ಈಗ ನನಗೆ ಎಂಟು ವರ್ಷ, ಹಾಗಿದ್ದರೂ ಅಜ್ಜ ಮಧುವೆ ಮಾಡಿರಲಿಲ್ಲ. ಅವನು ಬಂದಾಗಲೆಲ್ಲಾ ರೆಡ್ ಕಲ್ಲರಿನ ಜೆಲ್ ಪೇಸ್ಟ್ ತರುತ್ತಿದ್ದ, ದಿನಾ ಬೆಳ್ಳಗಿನ ಕಾಲ್ಗೇಟ್ ನಲ್ಲಿ ಉಜ್ಜಿ ಇದನ್ನು ಕಂಡಾಗ ಮಾರನೇ ದಿನಕ್ಕೂ ಸ್ವಲ್ಪ ಪೇಸ್ಟ್ ಬ್ರಶ್ ನಲ್ಲಿ ಹಾಕಿಟ್ಟುಕೊಂಡಿದ್ದೆ, ದೊಡ್ಡ ಹೆಲ್ತ್  ಸಲಹೆಗಳನ್ನು ನೀಡುತ್ತಾ ಅಮ್ಮನ ಬಳಿ ಹೇಳುತ್ತಿದ್ದ, ‘ರಾತ್ರಿಯೆಲ್ಲಾ ತೆರೆದಿಟ್ಟ ಜೆಲ್ ಪೇಸ್ಟ್ ನಲ್ಲಿ ಬೆಳಿಗ್ಗೆ ಹಲ್ಲುಜ್ಜಬಾರದು’. ಸರಿ ಅವನು ಆ ದಿನ ಊರಿಗೆ ಹೋಗುವಾಗ ಆ ಪೇಸ್ಟೂ ಹೊತ್ತೊಯ್ದ, ಜೊತೆಗೆ ನನ್ನ ಪುಟ್ಟ ಬ್ರಶ್ ಮೇಲಿನ ಪೇಸ್ಟ್ ತೊಳೆಸಿ ಹಾಕಿಸಿದ್ದ.
ಬೇಸಗೆ ರಜೆಗೆಂದು ನನ್ನನ್ನು ಕರೆದುಕೊಂಡು ಅಜ್ಜಿ ಮನೆಗೆ ಹೋಗುತ್ತೀನಿ ಅಂತ ದಿಡೀರ್ ಆಗಿ ಒಂದು ದಿನ ಬಂದಿದ್ದ, ಉದ್ದಲಂಗ ತೊಟ್ಟಿದ್ದ ನನ್ನ ಅನಾಮತ್ತು ಮೇಲಿಂದ ಕೆಳಗೆ ನೋಡಿಕೊಂಡು, ಏಹ್, ಎಷ್ಟುದ್ದ ಬೆಳೆದುಬಿಟ್ಟಿದ್ದಾಳಲ್ಲ?’ ಅಂತ ಕಣ್ಣು ಅರಳಿಸಿದ. ನಂಗ್ಯಾವ ಅರ್ಥಾನೂ ಆಗಲಿಲ್ಲ. ಅಜ್ಜಂಪುರದಲ್ಲಿದ್ದ ಅಮ್ಮ ನನ್ನಮೈತುಂಬಾ ಸ್ವೆಟ್ಟರ್ ಟೊಪ್ಪಿ ಕಾಲುಚೀಲ ಹಾಕಿ, ಬಟ್ಟೆಗಳನ್ನೆಲ್ಲಾ ಏರ್ ಬ್ಯಾಗಿನಲ್ಲಿರಿಸಿ ವಾರಕ್ಕಾಗುವಷ್ಟು ಹೋಮ್ ವಕರ್್ ಭುಕ್ ಪೇರಿಸಿ ಇಟ್ಟಿದ್ದಳು. ಅದನ್ನು ಮಾಮ ತನ್ನ ಎಡಗೈಲಿ ಇರಿಸಿಕೊಂಡು, ಬಲಗೈಯಲ್ಲಿ ನನ್ನ ಎಡಗೈ ಹಿಡಿದು ಹೊಂಟ. ರೈಲು ಹೊಂಟಿತು.
ಯಾರೂ ಇಲ್ಲದ ಕಂಪಾರ್ಟ್ ಮೆಂಟಿನಲ್ಲಿ ನಾವು ಕೂತೆವು, ಜನರೇ ಇಲ್ಲವಲ್ಲಾ ಎಂಬ ಬೇಸರ ನನ್ನ ಕಾಡತಿತ್ತು. ಹೊರಗೆ ಬಯಲು, ಹೊಲ, ಅಲ್ಲಲ್ಲಿ ಬದುವಿನ ಮರಗಳು, ಮೇಯುವ ಹಸುಗಳು, ಬೇಸಾಯದ ನೇಗಿಲು ಹಿಡಿದ ರೈತ, ಕಣ್ಣಿಗೆ ರಾಚುವ ಈರುಳ್ಳಿಯ ಬೆಳೆ, ಕಡೆಗೆ ದಟ್ಟ ಕತ್ತಲೆ ಆವರಿಸತೊಡಗಿತ್ತು. ಸರುಹೊತ್ತಿನಲ್ಲಿ ನನ್ನ ಮೊಲೆ ತುದಿಗಳನ್ನು ಯಾರೋ ನೇವರಿಸುತ್ತಿರುವುದು ಗಮನಕ್ಕೆ ಬಂದು ಕಿರುಚಿಕೊಂಡೆ, ಮಾಮ ಲೈಟು ಹಾಕಿ ಏನೂ ಗೊತ್ತಿಲ್ಲದವನಂತೆ ನಟಿಸಿ ಯಾರೋ ಹೊರಗೆ ಓಡಿದ ಅಂದುಬಿಟ್ಟ. ನನಗೆ ಭಯವಾಯಿತು. ಅಲ್ಲೇ ಒಂದು ಸ್ಟೇಷನ್ ಬಂದಿತು, ಆತ ಮರಳುವಾಗ ಕತೆಪುಸ್ತಕ ಕೈಲಿತಂದಿದ್ದ, ಕತೆ ಹೇಳುವ ನೆಪದಲ್ಲಿ ಹತ್ತಿರಕ್ಕೆ ಬಂದು ಪುಸ್ತಕ ತೆರೆದು ಚಿತ್ರಗಳನ್ನೆಲ್ಲಾ ಬಣ್ಣಿಸಲು ಶುರುಮಾಡಿದ. ಅವನು ಮತ್ತೆ ಎಂದೆಂದಿಗೂ ಸಿಕ್ಕಿದ್ದ ಮಾಮ ಆಗಿದ್ದ. ಅಮ್ಮನಿಗೆ ಸಣ್ಣಪುಟ್ಟ ಸಹಾಯ ಮಾಡುತ್ತಾ, ಅಮ್ಮನ ಕಷ್ಟ ಕೇಳುತ್ತಾ ಸಮಾಧಾನ ಹೇಳುತ್ತಿದ್ದ ಮಾಮ, ಅಮ್ಮ ಬಟ್ಟೆ ಒಗೆದರೆ ಒಣಗಿಸಲು ಓಡಿಬರುತ್ತಿದ್ದ, ಅಮ್ಮನಿಗೆ ಇನ್ ಲ್ಯಾಂಡ್ ಲೆಟರ್ ನಲ್ಲಿ ಗುಂಡು ಗುಂಡಾಗಿ ಪತ್ರಬರೆಯುತ್ತಿದ್ದ ಮಾಮ, ಎಕ್ಸಿಬಿಶನ್ ಅಂತ ಕರಕೊಂಡೋಗಿ ಐದು ಪೈಸೆ ಖರ್ಚು ಮಾಡದ ಮಾಮ, ಅವನೇ ಬೇರ್ಯಾರು ಅಲ್ಲ.
ಆದರೆ ಅವನ ವರ್ತನೆಯಲ್ಲಿ ಬದಲಾವಣೆ ಎದ್ದುಕಾಣುತ್ತಿತ್ತು. ಅವನು ತನ್ನ ಎಡಗೈಯಲ್ಲಿ ಪುಸ್ತಕ ಹಿಡಿದು ತೊಡೆಯ ಮೇಲಿಟ್ಟುಕೊಂಡು ಕೂತಿದ್ದ, ಹಾಗೆಯೇ ಸರಿದು ನನ್ನನ್ನು ಬಳಸಿ ಬಲಗೈಯನ್ನು ಹೆಗಲ ಮೇಲೆ ಹಚ್ಚಿದ. ನಿದಾನವಾಗಿ ಆತ ನನ್ನ ಬುದ್ಧಿಯನ್ನು ಆಕ್ರಮಿಸತೊಡಗಿದ, ಮಾತಿನ ಚಾಣಾಕ್ಯತನದಿಂದ ಆತನ ಕಥಾಕೌಶಲ ಉಪಯೋಗಿಸಿ ಚಂದಾಮಾಮದ ಕತೆಗಳನ್ನೆಲ್ಲಾ ಒಂದೇ ಉಸುರಿಗೆ ಚಿತ್ರ ತೋರಿಸುತ್ತಾ ಊಸುರಿದ, ಅವನ ಬಲಗೈ ಮಾತ್ರ ತನ್ನಪಾಡಿಗೆ ನನ್ನ ಸ್ವಟರ್ ನೊಳಗೆ ನುಸುಳಿ, ಜಾಕಿಟಿನೊಳಗೆ ತೂರಿ ಎಡಮೊಲೆಯನ್ನು ಮತ್ತೆ ನೇವರಿಸುತ್ತಿತ್ತು. ಅವನು ಮಾಮ, ಆದರೆ ಇಲ್ಲೇನು ಮಾಡುತ್ತಿದ್ದಾನೆ? ಕತೆ ಹೇಳುತ್ತಿದ್ದಾನೆ ಸರಿ, ಆದರೆ ಯಾಕೆ ಮೈಯ್ಯೊಳಗೆ ಕೈಹಾಕುತ್ತಿದ್ದಾನೆ? ಇದು ತಪ್ಪಲ್ವಾ? ಕತೆಯೊಳಗೂ ಮುಳುಗಲಾರದೆ, ಅವನ ಬಲಿಷ್ಟ ಕೈಯಿಂದ ಬಿಡಿಸಿಕೊಳ್ಳಲಾಗದೆ ಸ್ವಲ್ಪಹೊತ್ತು ಹಿಂಸೆ ಅನುಭವಿಸಿದೆ, ನನ್ನನ್ನು ಬಿಡಿಸಲು ಯಾರೋ ಬಂದಂತಾಯಿತು, ಚಕ್ಕುಲಿ ಮಾರುವವನು, ಆತ ಅಲ್ಲಿಯೇ ಎದುರು ಬದಿಯ ಸೀಟಿನಲ್ಲಿ ಕೂತುಕೊಂದ. ಮಾಮ ಸರಕ್ಕನೆ ಇತ ದೂರಕ್ಕೆ ಹೋದ. ನಾನು ಮೇಲುಗಡೆಯ ಸೀಟಿಗೆ ಹೋಗಿ ಅಮ್ಮ ಕೊಟ್ಟ ಬೆಡ್ ಶೀಟ್ ನೊಳಗೆ ತೂರಿ ಬಾಯಿ ಮುಚ್ಚಿ ಅಳಲಾರಂಬಿಸಿದೆ. ಅಮ್ಮ ನನ್ನನ್ನು ಕಳಿಸಬಾರದಾಗಿತ್ತು…. .

ಅದೆಷ್ಟು ಹೊತ್ತಿಗೋ ಆತ ನನ್ನ ಕಾಲನ್ನು ತಟ್ಟಿ ಎಬ್ಬಿಸುತ್ತಿದ್ದ ಅನುಭವವಾಗಿ ಎದ್ದುಕುಳಿತೆ, ಕೊರಳು ಬಿಗಿದಿತ್ತು. ಅವನು ನನ್ನ ಇಳಿಸಿಕೊಳ್ಳಲು ಬಂದ, ನಾನು ಕೈದೂರಕ್ಕೆ ತಳ್ಳಿ ನಾನೇ ಇಳಿದೆ. ಆತ ಲಗೇಜು ಕೈಗೆತ್ತಿಕೊಂಡ. ದಾರಿಯಲ್ಲಿ ಅವನ ಗೆಳೆಯರು, ಪರಿಚಿತ ರೈಲ್ವೆ ಸಿಬ್ಬಂಧಿ ಮಾತನಾಡಿಸುತ್ತಿದ್ದರು, ಎಲ್ಲರಿಗೂ ನನ್ನ ಅಕ್ಕನ ಮಗಳು ಅಂತ ಹೇಳಿಕೋತಿದ್ದು ನನಗೆ ಕೇಳಿಸಿದರೂ, ನನಗದರಲ್ಲಿ ಆಸಕ್ತಿ ಉಂಟಾಗಲಿಲ್ಲ. ಹರಸೀಕೆರೆಯಲ್ಲಿ ರೈಲ್ವೇ ಸ್ಟೇಶನ್ನಿನಲ್ಲಿ ಈತ ನಿಲ್ಲಿಸಿಕೊಳ್ಳುತ್ತಿದ್ದ ಮಾಮೂಲಿ ಅಟ್ಲಾಸ್ ಸೈಕಲ್ ಎತ್ತಿಕೊಂಡು ಬರುತ್ತೇನೆ ಅಂತ ಹೇಳಿ ಹೋದ, ಸ್ಟೇಶನ್ ನಲ್ಲೆಲ್ಲಾ ಕತ್ತಲೆ ಇತ್ತು, ಅಲ್ಲಲ್ಲಿ ಲೈಟು ಜಿರೋ ಕ್ಯಾಂಡಲ್ ತರ ಉರಿಯುತ್ತಿತ್ತು, ಕೆಲವು ಕಡೆ ಜನ ನೆಲದಲ್ಲಿ ಪವಡಿಸಿದ್ದರು, ಅಂತವರ ಪಕ್ಕದಲ್ಲಿ ಗೋಣಿ ಚೀಲಗಳಲ್ಲಿ ಕಟ್ಟಿದ್ದ ಸರಂಜಾಮು ಇರುತ್ತಿತ್ತು. ಅಷ್ಟರಲ್ಲಿ ಟ್ರಿನ್ ಅನ್ನುತ್ತಾ ದೂರದಿಂದ ಬಂದ ಆಕೃತಿ ನನ್ನ ಬಳಿ ಬಂದು ಹಲ್ಲು ಕಿರಿದು ಕರೆಯಿತು, ಅದು ಅವನೇ. ಮಾಮನೆಲ್ಲೋ ಸತ್ತುಹೋದ ಅನ್ನಿಸಿ, ಅಪರಿಚಿತನಂತಿದ್ದ ಆ ಮನುಷ್ಯನನ್ನು ಅವನು ಅಂತ ಕರೆಯಲು ಮನಸ್ಸು ಒಪ್ಪಿತು. ಅಪ್ಪನ ಹೊಟ್ಟೆ ಬಳಸಿ ರಾಣಿಯಂತೆ ಕೂರುತ್ತಿದ್ದ ಯಮಾಹಾ ಬೈಕ್ ಎಲ್ಲಿ, ಈತನ ಸೈಕಲ್ ಎಲ್ಲಿ? ಇದರಲ್ಲಿ ಕೂತು ಅನುಭವವೂ ನನಗಿರಲಿಲ್ಲ. ಮೈಯೆಲ್ಲಾ ಹಿಡಿಯಾಗಿಸಿ ಸೀಟು ಕೆಳಗಿನ ರಿಂಗ್ ಗಳನ್ನು ಎರಡು ಕೈಗಳಲ್ಲಿ ಹಿಡಿದುಕೊಂಡು ಚಳಿಗೆ ನಡುಗುತ್ತಾ, ಹೆದರುತ್ತಾ ಕೂತುಕೊಂಡೆ. ಕುಲುಕಾಟದಲ್ಲಿ ಎಲ್ಲಿ ಬಿದ್ದುಹೋಗುತ್ತೇನೋ ಎನ್ನುವ ಹೆದರಿಕೆ ಇನ್ನಷ್ಟು ಆವರಿಸಿಕೊಂಡಿತು. ಮೈನ್ ರಸ್ತೆಯನ್ನು ದಾಟಿಕೊಂಡು, ಜನನಿಬಿಡವಾದ ರಸ್ತೆಗಳಲ್ಲಿ ಸಾಗಿ ಗಲ್ಲಿಯೊಂದರಲ್ಲಿ ಎಡಕ್ಕೆ ತಿರುಗಿದರೆ ಇತನ ಮನೆ ಇತ್ತು. ಅಜ್ಜಿ ಬಂದು ಬಾಗಿಲು ತೆರೆದಳು, ಬಾರ್ಮಗ ಅಂತ ಬಾಚಿ ತಬ್ಬಿಕೊಂಡಳು. ‘ಅಮ್ಮ ಹೇಗಿದ್ದಾಳೆ’ ಅಂತ ಕೇಳಿದಳು, ನನ್ನಲ್ಲಿ ಉತ್ತರವಿರಲಿಲ್ಲ, ಯಾಕಾರೂ ಬಂದೆನೋ, ಮುಂದೇನಾಗುವುದೋ ಎಂಬ ಭಯ ನಡುಗಿಸುತ್ತಿತ್ತು ನನ್ನ. ಅಜ್ಜಿಯನ್ನು ಅಪ್ಪಿಕೊಂಡವಳು ಬಿಡಲೇ ಇಲ್ಲ, ಹಾಗೆಯೇ ಮಲಗಿದ ನೆನಪು.
ಮಾರನೇ ದಿನ ಅಜ್ಜಿ ನಾನು ಏಳುವ ಹೊತ್ತಿಗಾಗಲೇ ಎದ್ದು ರೊಟ್ಟಿ ಸುಟ್ಟು, ಕಾಪಿಯನ್ನು ಒಲೆ ಹಿತ್ತಲಿನಲ್ಲಿ ಬಿಸಿಗಿಟ್ಟು ಬೀದಿ ನಲ್ಲಿಯಲ್ಲಿ ನೀರು ಹಿಡಿಯಲು ಹೋಗಿದ್ದಳು. ನಾನು ಅವಳನ್ನೇ ಹಿಂಬಾಲಿಸಿದೆ, ಅವಳು ಬಿಂದಿಗೆ ಹೊತ್ತು ಬಂದ ತಕ್ಷಣ, ಸಣ್ಣ ಬಿಂದಿಗೆ ಕೊಡು ಅಂತ ದಂಬಾಲು ಬಿದ್ದು ನಾನು ಹಿಂದಿಂದೆ ಹೊರಟೆ. ಅಷ್ಟರಲ್ಲಿ ಇವನು ಬಂದಿದ್ದ, ಅರ್ಧ ದೂರಕ್ಕೆ ಬಂದವ ಅಜ್ಜಿಯ ಬಿಂದಿಗೆ ಬಿಟ್ಟ, ನನ್ನ ಸಣ್ಣ ಬಿಂದಿಗೆಯನ್ನು ಕೈಯ್ಯಾರೆ ತೆಗೆದುಕೊಂಡ, ನನಗೆ ಇಷ್ಟವಾಗಲಿಲ್ಲ, ನೀರಿನ ಸಹವಾಸವೂ ಬೇಡ ಅಂತ ಕೈಬಿಟ್ಟೆ. ಜಗಲಿ ಮೇಲೆ ಕೂತು ಪಕ್ಕದ ಮನೆ ಮಕ್ಕಳನ್ನು ಗೆಳೆತನ ಮಾಡಿಕೊಂಡೆ, ಗೀತಾ ನನ್ನ ವಯಸ್ಸಿನವಳು, ಅವಳ ತಮ್ಮ ಸುರೇಶ ಐದು ವರ್ಷದವನು. ಇಬ್ಬರೂ ನನ್ನನ್ನು ಅವರ ಮನೆಯೊಳಗೆ ಕರೆದೊಯ್ದರು, ಅವರಮ್ಮ ನನ್ನ ಪರಿಚಯ ಮಾಡಿಕೊಂಡು ಕ್ಷೇಮ ವಿಚಾರಿಸುತ್ತಾ ಕಾಪಿ ಕೊಟ್ಟರು. ಇನ್ನೂ ಹಲ್ಲೇ ಉಜ್ಜಿಲ್ಲದ ನಾನು ಬೇಡ ಎಂದು ಮುಜುಗರ ತೋರಿಸಿ ಅಜ್ಜಿಯ ಬಳಿ ಬಂದುಬಿಟ್ಟೆ. ಅಷ್ಟರಲ್ಲಿ ಈ ಪ್ರಾಣಿ ಸ್ಟೇಶನ್ ಕಡೆಗೆ ಸೈಕಲ್ ತುಳಿದು ಹೋಗಿತ್ತು ಅಂತ ಅಜ್ಜಿ ಹೇಳಿದ ಮೇಲೆ ಗೊತ್ತಾಯಿತು.
ಯಾವಾಗ ಮರಳಿ ಅಮ್ಮನ ಬಳಿ ಕಳಿಸುತ್ತೀಯಾ ಅಂತ ಅಜ್ಜಿಗೆ ದಂಬಾಲು ಬಿದ್ದೆ, ಅವಳಿಗೆ ಹೇಗೆ ವಿವರಿಸಲೂ ನನ್ನ ಬಾಯಿ ಕಟ್ಟುತ್ತಿತ್ತು. ಮಗನೇ ಆಶ್ರಯ ಆಗಿರುವಾಗ, ನನ್ನಿಂದ ಅಜ್ಜಿ ತೊಂದರೆಗೆ ಒಳಗಾಗುವುದು ನನಗೆ ಇಷ್ಟವಿರಲಿಲ್ಲ. ದೇಶಸಂಚಾರಿಯಾದ ಅಜ್ಜನಂತೂ ಅಜ್ಜಿಯ ಕಷ್ಟಕೇಳುವವನಲ್ಲ ಎಂಬುದು ನಾನು ಕೇಳಿದ್ದ, ಕಂಡಿದ್ದ ಸತ್ಯ ಕೂಡಾ ಆಗಿದ್ದುದರಿಂದ ಮಾಮನ ಬಗ್ಗೆ ಅಜ್ಜಿಯ ಬಳಿ ಹೇಳಲಾಗದೆ ಮನಸು ಹಿಂಡಿಕೊಂಡೆ. ಸ್ನಾನ, ತಿಂಡಿ, ಊಟ ಹೊಸ ಗೆಳೆಯರೊಂದಿಗೆ ಆಟ ಯಾವುದೂ ರುಚಿಸಲಿಲ್ಲ. ಮನಸೆಲ್ಲಾ ಕ್ಷೋಬೆಗೊಳಗಾಯಿತು, ನಿದ್ದೆಯಲ್ಲೂ ಎಚ್ಚರವಾಗಿ ಹಿಂಸೆಯಾಗುತ್ತಿತ್ತು. ನಡುರಾತ್ರಿಯಲ್ಲಿ ನನ್ನ ಚಡ್ಡಿಯೊಳಗೆ ಕೈಹಾಕುತ್ತಿದ್ದ ಅನುಭವವಾಯಿತು, ಮನೆಯೆಲ್ಲಾ ಕತ್ತಲೆ ಹೊದಿಕೆ ಸರಿಸಿ ಕಣ್ಬಿಟ್ಟು ನೋಡಬೇಕೆಂಬ ಇಚ್ಛೆ ಇದ್ದರೂ ಭಯದಿಂದ ನಲುಗುತ್ತಿದ್ದೆ. ಆತ ಅಲ್ಲೆಲ್ಲಾ ಟಾರ್ಚ್ ಹಿಡಿದು ನೋಡುತ್ತಿದ್ದುದು ನನ್ನ ಭಯವನ್ನು ಇಮ್ಮಡಿಸಿತು, ಇಡಿ ದೇಹವನ್ನು ಗಟ್ಟಿಯಾಗಿ ಹಿಡಿದುಕೊಂಡೆ, ಏನು ಮಾಡಿಬಿಡುತ್ತಾನೋ, ದೇವರನ್ನು ಮತ್ತೆ ಮತ್ತೆ ಬೇಡಲು ಶುರುಮಾಡಿದೆ, ಆತ ಏಕೆ ಟಾರ್ಚ್ ಹಿಡಿದಿದ್ದಾನೆ, ನನ್ನ ಕಷ್ಟವನ್ನೂ ಸಹಿಸಲೂ ಆಗದೆ, ಚೀರಲೂ ಆಗದೆ ಏನೂ ಗೊತ್ತಿಲ್ಲದವಳಂತೆ ಮಗ್ಗುಲಿಗೆ ತಿರುಗಿಬಿಟ್ಟೆ. ಆತ ನಾಜೂಕಾಗಿ ನನ್ನ ನಿಕ್ಕರನ್ನು ಯಥಾಸ್ಥಿತಿಗೆ ತಂದು ಎದ್ದು ಹೋದ, ಪಕ್ಕದ ರೂಮಿನಲ್ಲಿ ಮಲಗಿದ್ದ ನಾನು ಯಾವಾಗ ಇಲ್ಲಿಗೆ ಬಂದೆ ನನಗೆ ಗೊತ್ತಿರಲಿಲ್ಲ. ಅಷ್ಟರಲ್ಲಿ ಆತ ಬಕೇಟು ಹಿಡಿದು ಹೊರಗಿನ ಶೌಚಾಲಯಕ್ಕೆ ಹೋದ. ನಾನು ಪಕ್ಕದ ಕೋಣೆಯಲ್ಲಿದ್ದ ಅಜ್ಜಿಯ ಹೊದಿಕೆಯೊಳಗೆ ನುಸುಳಿಕೊಂಡೆ.
ನನ್ನನ್ನು ಕರೆದೊಯ್ಯಲು ಮಾರನೇ ದಿನವೇ ಬೆಳಿಗ್ಗೆ ಅಪ್ಪ ಊರಿನಿಂದ ಬಂದಿದ್ದರು, ಅವರು ನನ್ನನ್ನು ಬಿಟ್ಟು ಒಂದಿನವೂ ಇರುತ್ತಿರಲಿಲ್ಲ. ನನ್ನ ಕೂಗು ಅಪ್ಪನಿಗೆ ಮುಟ್ಟಿದೆ ಅನ್ನಿಸಿತು, ಅಜ್ಜಿ ಪ್ರೀತಿಯಿಂದ ಹೊಸ ಬಟ್ಟೆ ಹಾಕಿ ಕಳಿಸಿಕೊಟ್ಟಳು, ಅಪ್ಪನ ಹೆಗಲ ಮೇಲೆ ನಾನು ಮಲಗಿ ನಿದ್ದೆ ಹೋದೆ. ಇದನ್ನೆಲ್ಲಾ ಅಮ್ಮನಿಗೇಳುವ ಮನಸ್ಸಿನಲ್ಲದೆ ಕಿಚ್ಚು ಎದೆಯಲ್ಲೇ ಇಟ್ಟು ಸುಮ್ಮನಾಗಿಬಿಟ್ಟೆ.
ಆತನಿಗೊಬ್ಬಳು ಹೆಂಡತಿ ಬಂದಳು, ದೂರದಲ್ಲಿ ನಿಂತು ಮಧುವೆ ನೋಡಿದ್ದು ಬಿಟ್ಟರೆ ಮತ್ಯಾವತ್ತೂ ಆತನ ಮನೆವರೆಗೂ ಹೋಗಲಿಲ್ಲ.
 

‍ಲೇಖಕರು G

20 July, 2014

3 Comments

  1. vidyashankar

    🙁

    • Anonymous

      thank u

  2. renuka prakash

    chennagi bardidiri munduvaresi..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading