ಕರವೇ ನಲ್ನುಡಿ ಮಾಸಪತ್ರಿಕೆಯ ಮೂರನೇ ವರ್ಷದ ರಾಜ್ಯೋತ್ಸವ ವಿಶೇಷ ಕಥಾಸ್ಪರ್ಧೆಯಲ್ಲಿ ಕೇಶವ ಕುಡ್ಲ ಅವರ ಪಾಪಕೂಪಂ ಕ್ರಿಮಿಭೋಜನಂ ಕಥೆ ಪ್ರಥಮ ಬಹುಮಾನ ಗಳಿಸಿದೆ. ದ್ವಿತೀಯ ಬಹುಮಾನ ಟಿ.ಕೆ.ದಯಾನಂದ್ ಹಾಗು ಅಮರೇಂದ್ರ ಶೆಟ್ಟಿ ಆರ್. ಅವರುಗಳಿಗೆ ನೀಡಲಾಗಿದ್ದು, ಎಸ್.ಕೃಷ್ಣಸ್ವರ್ಣಸಂದ್ರ ತೃತೀಯ ಬಹುಮಾನ ಪಡೆದಿದ್ದಾರೆ.
ಕೇಶವ ಕುಡ್ಲ ಅವರ ‘ಪಾಪಕೂಪಂ ಕ್ರಿಮಿ ಭೋಜನಂ,
ಟಿ.ಕೆ.ದಯಾನಂದ್ ಅವರ ‘ಬಳೆಶೆಟ್ಟರ ಮಗಳ ಪಲಾಯನವೂ, ಫಕೀರಸಾಬನ ಕೋತಿ ಸರ್ಕಸ್ಸೂ…,
ಅಮರೇಂದ್ರ ಶೆಟ್ಟಿ ಆರ್. ಅವರ ‘ದೇವರೆಂಬ ದುಃಖಾತ್ಮನೂ, ಭಕ್ತನೆಂಬ ಮಹಾತ್ಮನೂ…
ಹಾಗು ಎಸ್.ಕೃಷ್ಣಸ್ವರ್ಣಸಂದ್ರ ಅವರ ‘ಗುಡ್ಡೆಬಾಡು ಕಥೆಗಳಿಗೆ ಕ್ರಮವಾಗಿ ಈ ಬಹುಮಾನಗಳು ಲಭಿಸಿವೆ.
ಪ್ರಥಮ ಬಹುಮಾನ ೨೫,೦೦೦ ರೂ, ದ್ವಿತೀಯ ಬಹುಮಾನ ೧೫,೦೦೦ ರೂ. ಹಾಗು ತೃತೀಯ ಬಹುಮಾನವಾಗಿ ೧೦,೦೦೦ ರೂ ನಗದು ನೀಡಿ ಬೆಂಗಳೂರಿನಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಬಹುಮಾನ ವಿಜೇತರನ್ನು ಸತ್ಕರಿಸಲಾಗುವುದು.
ಕೆ. ಶಿವಲಿಂಗಪ್ಪ ಹಂದಿಹಾಳು (ಮತ್ತೆ ಮಳೆ ಬಂತು), ವಿಶ್ವನಾಥ ಪಾಟೀಲ ಗೋನಾಳ (ಒಳಗೆ ಸುಳಿದಾಡುವ ಆತ್ಮ), ಜ್ಯೋತಿ ಬಿ. ಕುಲಕರ್ಣಿ (ಹೀಗೊಂದು ಸಿನಿಮಾ ಕಥೆ), ಸಂಪತ್ ಕುಮಾರ್ ಡಿ. (ಮುಟ್ಟಿಸಿಕೊಂಡವರು), ಫಕೀರ-ಶ್ರೀಧರ ಬನವಾಸಿ (ಕ್ಷಣ ಕತ್ತಲೆಯ ಭಯ), ತೊಡಿಕಾನ ಅಬ್ದುಲ್ಲಾ (ಶೈತಾನನ ಪೊರಕೆ ಕಡ್ಡಿಗಳು), ಮಹಂತೇಶ ನವಲಕಲ್ (ಪಂಚಾವರಂ ಎಂಬ ದಂಡಕಾರಣ್ಯದೊಳಗೆ), ಹನುಮಂತ ಹಾಲಿಗೇರಿ (ಎಲ್ಲೆಲ್ಲೂ ಕಾಂಕ್ರೀಟ್ ಹಕ್ಕಿಯ ಮೊಟ್ಟೆಗಳು), ಮಂಗಳಾ ಪ್ರಸಾದ್ (ಮಂಡಲ), ಬಸವಣ್ಣೆಪ್ಪ ಪ. ಕಂಬಾರ (ಧರೆಗೆ ದೊಡ್ಡವರು), ಬೇಲೂರು ರಾಮಮೂರ್ತಿ (ಕಥೆಯೊಳಗಿನ ಕಥೆಗಾರ) ತೀರ್ಪುಗಾರರ ಮೆಚ್ಚುಗೆ ಪಡೆದಿದ್ದಾರೆ.
ಹೆಸರಾಂತ ಕಥೆಗಾರ ಕೇಶವ ಮಳಗಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದು, ಎಲ್ಲ ಕಥೆಗಳು ಕರವೇ ನಲ್ನುಡಿ ಮಾಸಪತ್ರಿಕೆಯಲ್ಲಿ ಪ್ರಕಟಗೊಳ್ಳಲಿವೆ.
(ದಿನೇಶ್ ಕುಮಾರ್ ಎಸ್.ಸಿ)
ಪ್ರಧಾನ ಸಂಪಾದಕ






0 Comments