ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಶಾಲಾ ಲೈಬ್ರರಿಗೆ ಪುಸ್ತಕ ಕೊಡಿ

ವಿಮಲ್ ಕುಮಾರ್ ನೆಲ್ಯಾಡಿ

 
ಸರಕಾರಿ ಶಾಲೆಯೊಂದರ ಶಿಕ್ಷಕ ನಾನು, 350 ವಿದ್ಯಾರ್ಥಿಗಳಿದ್ದಾರೆ ನಮ್ಮ ಶಾಲೆಯಲ್ಲಿ. . . ನಮ್ಮಲ್ಲಿ ಪ್ರತ್ಯೇಕ ಲೈಬ್ರರಿಯಿಲ್ಲ,ಇರುವ ತರಗತಿಯೊಂದರಲ್ಲಿ ಲೈಬ್ರರಿ ಮಾಡಿ ಓದುವ ಸಂತೋಷವನ್ನು ಮಕ್ಕಳಿಗೆ ಕರುಣಿಸುತಿದ್ದೇವೆ. .
ಮೊನ್ನೆ ಪರೀಕ್ಷೆ ಮುಗಿದ ನಂತರ ಕತೆ ಪುಸ್ತಕ ಓದಿ ಎಂದು ವಿದ್ಯಾರ್ಥಿಗಳಿಗೇಳಿದೆ.  ಸಾರ್ ಹಳೆಯ ಪುಸ್ತಕಗಳೆಲ್ಲ ಓದಿಯಾಗಿದೆ, ಹೊಸ ಪುಸ್ತಕ ಇಲ್ಲ ಎಂದಳು ವಿದ್ಯಾರ್ಥಿನಿ ಒಬ್ಬಳು. . ಅವಳ ಮಾತು ಸತ್ಯವು ಆಗಿತ್ತು. ನಮ್ಮ ಶಾಲೆಯ ಲೈಬ್ರರಿಗೆ ಹೊಸ ಪುಸ್ತಕಗಳು ಬೇಕಾಗಿದೆ.

ಆತ್ಮಿಯರೆ , ನಾನೊಂದು ತೀರ್ಮಾನ ಮಾಡಿದ್ದೇನೆ, ಪ್ರತಿ ವರ್ಷ ನನ್ನ ,ನನ್ನ ಆತ್ಮಿಯರ ಹುಟ್ಟು ಹಬ್ಬದ ದಿನ ಅವರ ಹೆಸರಲ್ಲಿ ಕನಿಷ್ಟ ಒಂದು ಪುಸ್ತಕವನ್ನಾದರು ಶಾಲಾ ಲೈಬ್ರರಿಗೆ ನೀಡುತ್ತೇನೆ ಮತ್ತು ಆ ಮೂಲಕ ಉಡುಗರೆಯೊಂದು ಮತ್ತೆ ಮತ್ತೆ ಮಕ್ಕಳ ಕೈಯಲ್ಲಿ ಜೀವ ಪಡೆಯುವಂತೆ ಮಾಡ ಬಯಸುತ್ತೇನೆ
ನಿಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ನಿಮ್ಮ, ನಿಮ್ಮಗೆಳೆಯ ಗೆಳತಿ, ಅಣ್ಣ ,ಅಕ್ಕ ತಮ್ಮ ತಂಗಿ . . ಅಮ್ಮ ಅಪ್ಪ. . ಹೀಗೆ ನೀವು ಅತ್ಯಂತ ಪ್ರೀತಿಯಿಂದ celebrate ಮಾಡುವ ಹುಟ್ಟು ಹಬ್ಬ,ಮದುವೆ. . . ನಾಮಕರಣ ಗ್ರಹ ಪ್ರವೇಶ. . ಹೀಗೆ ನಿಮ್ಮ ಅತಿ ದೊಡ್ಡ ಸಂಭ್ರಮದ ನೆನಪಿಗೆ , ನೀವು miss ಮಾಡಿಕೊಂಡ ನಿಮ್ಮವರ ನೆನಪಲ್ಲಿ ಅವರ ಹೆಸರು , ವಿಳಾಸದೊಂದಿಗೆ ಒಂದು ಪುಸ್ತಕವಾದರು ಸರಿ ಕಳಿಸಿ ಕೊಡ್ತೀರ ನಮ್ಮ ಶಾಲೆಗೆ, ನಮ್ಮ ಮಕ್ಕಳಿಗೆ ಓದೋಕೆ. . .
pls, . ನಿಮ್ಮ ಸಂಭ್ರಮ ಶಾಶ್ವತವಾಗಲಿ
ಶಾಲಾ ವಿಳಾಸ
ಆನಂದ ಅಜಿಲ ,ಮುಖ್ಯ ಗುರುಗಳು, ಸ.ಹಿ.ಪ್ರಾ.ಶಾಲೆ ನೆಲ್ಯಾಡಿ, ಪುತ್ತೂರು ತಾಲೂಕು, ದ.ಕ 574229
 

‍ಲೇಖಕರು G

7 October, 2014

11 Comments

  1. C. N. Ramachandran

    ಪ್ರಿಯ ಆನಂದ ಅಜಿಲ ಅವರಿಗೆ:
    ನಮಸ್ಕಾರ. ’ನೆಲ್ಯಾಡಿ’ ಎಂದರೆ ಘಟ್ಟವಿಳಿದ ಕೂಡಲೇ ಮಂಗಳೂರಿಗೆ ಹೋಗುವ ದಾರಿಯಲ್ಲಿ ಸಿಗುವ ಊರು ಅಲ್ಲವೆ. ನೀವು ಅಥವಾ ನಿಮ್ಮ ಮಿತ್ರರು/ವಿದ್ಯಾರ್ಥಿಗಳು ಯಾರಾದರೂ ಯಾವಾಗಲಾದರೂ ಬೆಂಗಳೂರಿಗೆ ಬಂದರೆ, ನನಗೆ ತಿಳಿಸಿ. (೯೮೮ ೬೮೬ ೧೪೯೫). ಒಂದಲ್ಲ, ಒಂದು ನೂರು ಹೊಸ ಪುಸ್ತಕಗಳನ್ನು ನಾನು ಕೊಡುತ್ತೇನೆ. ಸಿ. ಎನ್. ರಾಮಚಂದ್ರನ್

  2. jagadishkoppa@gmail.com

    ಆನಂದ್ ನಮಸ್ಕಾರ, ನೂರು ಪುಸ್ತಕಗಳನ್ನು V.R.L. ಲಾರಿ ಪಾರ್ಸಲ್ ಮೂಲಕ ಪುತ್ತೂರಿಗೆ ಕಳಿಸಿಕೊಟ್ಟರೆ ತೆಗೆದುಕೊಳ್ಳಲು ಸಾಧ್ಯವೆ? ನಿಮ್ಮ ಮೊಬೈಲ್ ನಂಬರ್ ಕೊಡಿ.
    ಜಗದೀಶ್ ಕೊಪ್ಪ ಧಾರವಾಡ.

    • Anonymous

      sir pls send books 9481460546

  3. Vimal Kumar

    ಪತ್ರಿಕೆಯಲ್ಲಿ ನಮ್ಮ ಕೋರಿಕೆಯನ್ನು ಪ್ರಕಟಿಸಿದ ಪತ್ರಿಕಾ ಬಳಗಕ್ಕೆ ವಂದನೆಗಳು. . .
    C.N Ramachandran sir. ., Banglr Manglr ರಸ್ತೆಗೆ ತಾಗಿಕೊಂಡೆ ನಮ್ಮ ಶಾಲೆಯಿದೆ. . . ನಮ್ಮ ಶಾಲಾ ಮಕ್ಕಳಿಗೆ ಪುಸ್ತಕ ನೀಡುವ ನಿಮ್ಮ ಪ್ರೀತಿಗೆ ನಮನಗಳು. .
    Jagadish koppa sir. .ಖಂಡಿತವಾಗಿಯು ಕಳುಹಿಸಿ ಸಾರ್ ಪುತ್ತೂರಿನಿಂದ ಶಾಲೆಗೆ ನಾವು ತರಿಸಿಕೊಳ್ಳುತ್ತೇವೆ. . thank u. .sir 9481460546

  4. Vasanth

    ಆನಂದ್ ರವರೇ,
    ಮೈಸೂರು ಗ್ರಂಥಪಾಲಕರ ಮತ್ತು ಮಾಹಿತಿ ವಿಜ್ಞಾನಿಗಳ ಸಂಘ (ಮೈಲಿಸಾ) ಈ ವಷಱ ಪುಸ್ತಕ ದಸರಾ ಎಂಬ ವಿನೂತನ ಕಾಯಱಕ್ರಮವನ್ನು ಆಯೋಜಿಸಿದೆ. ಈ ಕಾಯಱಕ್ರಮದಡಿಯಲ್ಲಿ ಮೈಸೂರಿನಲ್ಲಿ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಕೊಡಲು ಇಚ್ಚಿಸುವ ದಾನಿಗಳಿಂದ ಪುಸ್ತಕಗಳನ್ನು ಪಡೆದು ಅದನ್ನು ಅವಶ್ಯವಿರುವ ಗ್ರಂಥಾಲಯಗಳಿಗೆ/ಓದುಗರಿಗೆ ಉಚಿತವಾಗಿ ನೀಡುವ ವ್ಯವಸ್ಥೆಮಾಡಲಾಗಿದೆ.
    ಕೆಲ ದಾನಿಗಳು (ಪ್ರೊ. ಚಿದಾನಂದ ಗೌಡ ಸೇರಿದಂತೆ) ಅನೇಕರು ತಮ್ಮಲ್ಲಿರುವ ಪುಸ್ತಕಗಳನ್ನು ದಾನವಾಗಿ ನೀಡಿದ್ದಾರೆ. ಈ ಪುಸ್ತಕಗಳನ್ನು ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಶೀಘ್ರ ಮೈಲಿಸಾ ಮಾಡಲಿದೆ.
    ದಾನಿಗಳು ನೀಡಿದ ಪುಸ್ತಕಗಳ ಪಟ್ಟಿ ಈ ವೆಬ್ ವಿಳಾಸದಲ್ಲಿ ನೀಡಲಾಗಿದ್ದು. http://mylisamysore.weebly.com/book-dasara-2014.html
    ಅವಶ್ಯಕತೆ ಇರುವ ಪುಸ್ತಕಗಳ ಪಟ್ಟಿ ಮತ್ತು ಹೆಚ್ಚಿನ ವಿವರಗಳಿಗೆ
    ಡಾ. ಎನ್ .ಎಸ್. ಹರಿನಾರಾಯಣ
    ಕಾಯಱದಶಿಱಗಳು ಮೈಲಿಸಾ ಇವರನ್ನು ಈ ಮೊಬೈಲ್ ಸಂಖ್ಯೆ ಮೂಲಕ ಸಂಪಕಿಱಸಿ: 9741533380
    ವಸಂತರಾಜು ಎನ್.
    ಮೈಸೂರು.

  5. Dr. Chandra Aithal

    ಆನಂದ ಅಜಿಲ, ವಿಮಲ್ ನೆಲ್ಯಾಡಿ ಅವರೆ,
    ಅಮೆರಿಕೆಯಿಂದ ನನ್ನ ಮಗಳ ಹುಟ್ಟು ಹಬ್ಬದ ಸಲುವಾಗಿ, ಇಲ್ಲಿನ ಒಂದಷ್ಟು ಇಂಗ್ಲಿಷ್ ಪುಸ್ತಕಗಳನ್ನು ಕಳಿಸಬೇಕೆಂದಿದೆ. ನಿಮಗೆ ಅವು ತಲುಪಬೇಕಾದರೆ ಏನು ವ್ಯವಸ್ಥೆ ಗೊತ್ತಾ
    ಚಂದ್ರ ಐತಾಳ

  6. Vimal Kumar

    Dr chandra Aithal ಅವರೇ ನಿಮ್ಮ ತೀರ್ಮಾನಕ್ಕೆ ವಂದನೆಗಳು ,ಆದರೆ ವಿದೇಶದಿಂದ ಪುಸ್ತಕಗಳನ್ನು ಹೇಗೆ ಕಳಿಸಬಹುದು ಎಂಬ ಕುರಿತು ನಮಗೆ ಅರಿವು ಇರುವುದಿಲ್ಲ. .ಅವಧಿ , FB ಓದುಗರು ಯಾರಾದರು ಮಾಹಿತಿ ನೀಡಿ ಸಹಕರಿಸಬಹುದು

  7. Prabhakar M. Nimbargi

    Dear Shri. Anand Ajila,
    I am touched by the concern for your students. I don’t know what type of books your students would prefer to read. So, I wish to send some amount to you through M.O. Can you accept & use for the said purpose? If so, please intimate me either at my e-mail (pnimbargi@rediffmail.com) or mobile (9845562878).
    With regards- Prabhakar Nimbargi

  8. ಗವಿಸಿದ್ಧ ಹೊಸಮನಿ

    ವಿಮಲ್ ನೇಲ್ಯಾಡಿ ಅವರೇ ನಿಮ್ಮ ಕಾರ್ಯ ಕೇಳಿ ತುಂಬಾ ಖುಷಿ ಆಯಿತು.
    ನಾನು ಕೂಡ ಒಂದಷ್ಟು ಪುಸ್ತಕ ಕಳುಹಿಸಿ ಕೊಡುತ್ತೇನೆ.
    ***
    ಮತ್ತು ನನಗೂ ನಿಮ್ಮಂತದ್ದೇ ಕನಸಿದೆ. ನಮ್ಮೂರಲ್ಲಿ ನನ್ನ ಮನೆಯಲ್ಲಿಯೇ ಚಿಕ್ಕ ಗ್ರಂಥಾಲಯ ಮಾಡುವ ಕನಸು. ಈ ಮೂಲಕ ನನ್ನೂರ ಮಕ್ಕಳಿಗೆ ಓದಿಸುವ, ಬರೆಯಿಸುವ, ಗೆಳೆಯರಿಗೆ ಪುಸ್ತಕ ಓದಿಸೋ ಅಭಿರುಚಿ ಬೆಳೆಸುವ ಆಸೆಯಿದೆ. ಧಾರವಾಡದ ನನ್ನ ಮನೆಯಲ್ಲಿ ಸಾಕಷ್ಟು ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ. ಆದರೆ, ನಮ್ಮೂರಿನ ನನ್ನ ಮನೆಯಲ್ಲಿ ಸದ್ಯಕ್ಕೆ ಲೈಬ್ರರಿ ವ್ಯವಸ್ಥೆಯಿಲ್ಲ. ಅದನ್ನು ಮಾಡಿಕೊಳ್ಳುಲು ಉತ್ಸುಕನಾಗಿದ್ದೇನೆ.
    ***
    ಸದ್ಯಕ್ಕೆ ನನಗೆ ಪರಿಚಯ ಇರುವ ಬರೆಹಗಾರರಿಂದ ನಾನು ಕೂಡ ಈಗಿಂದಲೇ ಪುಸ್ತಕ ಸಂಗ್ರಹಿಸಬೇಕು ಅಂದುಕೊಂಡಿದ್ದೇನೆ. ಊರಲ್ಲಿನ ನನ್ನ ಗೆಳೆಯರ ಸಹಕಾರ ಪಡೆದು, ಈಗ ಊರಲ್ಲಿನ ಯಾವುದಾದರೊಂದು ಚಿಕ್ಕ ಮನೆ ಹಿಡಿದು ಅಲ್ಲಿ ಪುಸ್ತಕ ಸಂಗ್ರಹಿಸಿ, ಪುಸ್ತಕ ಓದುವ, ಓದಿಸುವ ಕನಸಿದೆ.
    ಪುಸ್ತಕ ಸಂಗ್ರಹಿಸಿ ಓದಿಸುವ ನಿಮ್ಮಂತವರೇ ನನಗೆ ಸ್ಫೂರ್ತಿ.

  9. Vimal Kumar

    ಗವಿಸಿದ್ದ ಹೊಸಮನಿಯವರೇ ,thank u. . ಓರ್ವ ಶಿಕ್ಷಕನಾಗಿ ನಾನು ಪುಸ್ತಕ ಸಂಗ್ರಹಿಸಿ ಮಕ್ಕಳಿಗೆ ಓದಿಸಲು ಪ್ರಯತ್ನಿಸುವುದು ನನ್ನ ಕರ್ತವ್ಯದ ಭಾಗವೆಂದಷ್ಟೆ ನಂಬಿದ್ದೇನೆ. . ಆದರೆ ಊರಲ್ಲಿ ಗ್ರಂಥಾಲಯ ತೆರೆದು ಪುಸ್ತಕ ಸಂಗ್ರಹಿಸಿ ಓದಿಸಬೇಕೆಂಬ ನಿಮ್ಮ ಕನಸ್ಸು ನಿಜಕ್ಕು ಪ್ರಶಂಸನೀಯ. . ನಿಮಗೆ ಶುಭವಾಗಲಿ. ,

  10. Anonymous

    Dear Shri Anand Ajila, Iam very much touched by the love n concern you have for the development of your students. In these days where the noble profession of teaching is reduced to business, your passion impressed me very much.
    Please let me know what type of books you are interested so that I can do my bit of service to little children.
    G. Narayana – 9880399603

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading