ನಮ್ಮ ಯೋಚನಾ ಲಹರಿ ಅತ್ಯಾಚಾರಿಗಳ ಮನಸ್ಸಿನಂತೆಯೇ ಇದೆಯೇ..

ಪ್ರಸಾದ್ ರಕ್ಷಿದಿ 

ಕಾರ್ನಾಡರ ‘ತುಘಲಕ್’ ನಾಟಕದ ಒಂದು ಸಂದರ್ಭ.

ಅಜೀಝನೆಂಬ ವಂಚಕ ತುಘಲಕ್ ನನ್ನು ಹಾಸ್ಯಾಸ್ಪದ ಸ್ಥಿತಿಯಲ್ಲಿ ಸಿಕ್ಕಿಸಿದ್ದಾನೆ. ಹಲವಾರು ಜನರಿಗೆ ಅತ್ಯುಗ್ರ ಹಿಂಸೆ ಶಿಕ್ಷೆ ನೀಡಿದ ತುಘಲಕ್ ಕೂಡಾ ಅವನನ್ನು ಶಿಕ್ಷಿಸಲಾರ.
ಆಗ ತುಘಲಕ್ ನ ಆಸ್ಥಾನದ ಇತಿಹಾಸಕಾರ – ಈತನೊಬ್ಬನೇ ತುಘಲಕನ್ನು ವಿಮರ್ಶಿಸಿ ಟೀಕಿಸಬಲ್ಲವನು. ತುಘಲಕನ ಹಿಂಸಾಮಾರ್ಗವನ್ನು ವಿರೋಧಿಸಿ ಎಚ್ಚರಿಸಬಲ್ಲವನು.
ಅಜೀಝನ ಸಂದರ್ಭದಲ್ಲಿ ಇವರಿಬ್ಬರ ಸಂಭಾಷಣೆಯನ್ನು ಗಮನಿಸಿ.

ಬರನಿ : ಪ್ರಜೆಗಳನ್ನೇಕೆ ಕಂಗೆಡಿಸಿ ಸಾಯಿಸುತ್ತೀರಿ? ಆ ನೀಚ ಅಗಸನಿಗೆ ಮಾತ್ರ ಬಹುಮಾನ. ಅವನನ್ನು ಕೊಲ್ಲಬೇಕು. ದೇಹಾಂತ ಶಿಕ್ಷೆ ಸಾಲದು. ಚೀಲದಲ್ಲಿ ತುಂಬಿ ಕುದುರೆಯ ಕಾಲಿಗೆ ಕಟ್ಟಿ ಎಳೆಸಬೇಕು. ಅವನ ನಾಲಿಗೆಯನ್ನು ಎಳೆಸಿ ಸಾಯಿಸಿದರೂ ಸಾಲದು..,

ತುಘಲಕ್ : ಬರನಿ ಚಿತ್ರಹಿಂಸೆಯ ಇಷ್ಟು ವಿಧಾನಗಳು ಆ ಅಗಸನಿಗೂ ಗೊತ್ತಿರಲಾರದು ನೋಡು !

ಇದು ಯಾಕೆ ನೆನಪಾಯಿತೆಂದರೆ. ಅತ್ಯಾಚಾರಿಗಳಿಗೆ ನಮ್ಮ ಕಾನೂನು ವಿಧಿಸುವ ಅತ್ಯುಗ್ರ ಶಿಕ್ಷೆಯಾಗಬೇಕೆಂಬ ಬಗ್ಗೆ ಮನುಷ್ಯರಾದವರಲ್ಲಿ ತಕರಾರು ಇರಲಾರದು. ಆದರೆ ನಮ್ಮ ಯೋಚನಾ ಲಹರಿ ಅತ್ಯಾಚಾರಿಗಳ ಮನಸ್ಸಿನಂತೆಯೇ ಯೋಚಿಸುತ್ತಿದೆಯೇ..

ಈ ಪ್ರಶ್ನೆ ಯಾರಿಗೂ ಅಲ್ಲ ನನಗೇ !

‍ಲೇಖಕರು avadhi

December 2, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Pratibha

    ಕಟ್ಟೆಚ್ಚರದ ದಿಟ್ಟ ಹೆಣ್ಣುಮಕ್ಕಳು ನಾವಾಗಿರಲು ಯಾವುದೋ ನಾಯಿಗೆ ಹೆದರಬೇಕಾ . ಇಲ್ಲ ಈ ಸೃಷ್ಠಿಯಲಿ‌ ಹೆಣ್ಣನ್ನು ವೈಭೋಗದ ಸರಕನ್ನಾಗಿ ಕಾಣುವಾ, ಅವಳನ್ನು ಸುಡಲು ಹಿಂಜರಿಯದ ಆ ಹೀನ ಜನರಿಗೆ ಶಿಕ್ಷೆ ಕೊಡುವದೊಂದು ದಾರಿ.

    ಪ್ರತಿಕ್ರಿಯೆ
  2. T S SHRAVANA KUMARI

    ಚಿಂತಿಸುವಂತೆ ಮಾಡಿದ ಸಾಲುಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: