ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ತಟ್ಟೆಯಲ್ಲಿ ಇದೇ ಇರಬೇಕೆಂದು ಹೇಳಲು ನೀವು ಯಾರು? ಬಂದರೆ ನಿಮಗೂ ತಟ್ಟೆಯಲ್ಲಿ ಉಣ ಬಡಿಸುತ್ತೇವೆ..

ಮುಂದಿನ ವಾರ ಯುಗಾದಿ ಅಮಾವಾಸ್ಯೆಗೆ ಕಪ್ಪಡಿ ಜಾತ್ರೆ ಕೊನೆಗೊಳ್ಳಲಿದೆ. ಸರಕಾರ ಎಂದಿನಂತೆ ಪ್ರಾಣಿ ಬಲಿನಿಷೇಧವನ್ನು ನಿಷೇಧ ಮಾಡಿದೆ!!.

ಮಾಂಸಾಹಾರ ಪ್ರಸಾದದ ಜಾತ್ರೆಗಳಲ್ಲಿ  ಈ ರೀತಿಯ ನಿಷೇಧ ನಿಲ್ಲಬೇಕು ಎಂದು ರಾಜೇಂದ್ರ ಪ್ರಸಾದ್ ಆಗ್ರಹಿಸಿದ್ದರು. ಅದಕ್ಕೆ ಶ್ರೀವತ್ಸ ಕಂಚಿನಮನೆ ಹಾಗೂ ಗೀತಾ ಕಲ್ಮನೆ ಅವರು ಪ್ರತಿಕ್ರಿಯೆ ನೀಡಿದರು. ಇದಕ್ಕೆ ರಾಜೇಂದ್ರ ಪ್ರಸಾದ್ ಉತ್ತರ ನೀಡಿದ್ದಾರೆ.

ಮಾಂಸಾಹಾರ ಬೇಕೇ ಬೇಡವೇ? ಏನನ್ನಿಸುತ್ತಿದೆ ನಿಮಗೆ

ಬನ್ನಿ ಚರ್ಚೆಯಲ್ಲಿ ಭಾಗವಹಿಸಿ

ನಿಮ್ಮ ಕಾಮೆಂಟ್ ಗಳನ್ನು avadhimag@gmail.com ಗೆ ಕಳುಹಿಸಿ

ರಾಜೇಂದ್ರ ಪ್ರಸಾದ್ 

 

quotes

 

 

* ಮೊದಲಿಗೆ ತಿನ್ನೋ ಚಪಲ : ನೀವೇನೂ ಮನೆಯಲ್ಲಿ ಸಗಣಿ ತಿನ್ನುತ್ತಿರೇನು ? ಅಥವಾ ಬರೀ ನೀರು ಕುಡಿದು ಜೀವಿಸಿದ್ದೇರೇನು ? ನೀವು ಚಾಪಲ್ಯ ಗೆದ್ದದ್ದು ಹೇಗೆ? ಸ್ವಲ್ಪ ವಿವರಿಸಿ ಸ್ವಾಮಿ. ಮೊಸರು ಅವಲಕ್ಕಿ, ಮಜ್ಜಿಗೆ ಹುಳಿ ಇತ್ಯಾದಿ ಮಾಡಲು ಕರು ಕುಡಿಯಬೇಕಾದ ಹಾಲನ್ನು ನೀವು ಕಿತ್ತುಕೊಂಡೇ ತಾನೇ ಮಾಡುವುದು. ಆವಾಗ ಹಸುವಿಗೂ ಅದರ ಕರುವಿಗೂ ಮಾಡುವ ಮೋಸ, ನಿಮ್ಮ ಚಾಪಲ್ಯ ಕಂಡು ನಿಮಗೆ ಹೇಸಿಗೆಯಾಗಿಲ್ಲವೇ ?.

* ನಮ್ಮ ತಟ್ಟೆಯಲ್ಲಿ ಇದೇ ಇರಬೇಕೆಂದು ಹೇಳಲು ನೀವು ಯಾರು ? ಮಾಂಸಾಹಾರ ಮನುಷ್ಯನ ಸ್ವಭಾವಿಕ ಆಹಾರಕ್ರಮಗಳಲ್ಲಿ ಒಂದು. ನಾವು ತಿನ್ನುತ್ತೇವೆ ಬಂದರೆ ನಿಮಗೂ ತಟ್ಟೆಯಲ್ಲಿ ಉಣ ಬಡಿಸುತ್ತೇವೆ. ಜಾತಿ ಕಾರಣಕ್ಕೆ ಪಂಕ್ತಿಯಿಂದ ಎಬ್ಬಿಸುವ ದರಿದ್ರರು ನಾವಲ್ಲ.
ನೀವು ನಿಮ್ಮ ಜಾತ್ರೆಯಲ್ಲೊ ಮನೆಯಲ್ಲೊ ಬೇಕಾದ್ದು ಮಾಡಿ ತಿನ್ನಿರಿ.. ಎಂದಾದರೂ ನಾವು ಅದನ್ನು ಇಣುಕಿ ನೋಡಿ ಇದು ತಿನ್ನಿ, ಇದು ಬೇಡ ಎಂದಿದ್ದು ಉಂಟೇ?!

* ಮೇಲೆ ಉಲ್ಲೇಖಿಸಿರುವ ಎರಡೂ ಜಾತ್ರೆಗಳಲ್ಲಿ ಎಲ್ಲೂ ಬಲಿಪೀಠವಿಲ್ಲ, ಬಲಿಗಂಬವೂ ಇಲ್ಲ ಇಲ್ಲಿ ಪ್ರಾಣಿಯನ್ನು ದೇವರಿಗೆ ಬಲಿ ಕೊಡುವುದೂ ಇಲ್ಲ.
ಜಾತ್ರೆ ಬರುವ ಲಕ್ಷಾಂತರ ಜನ ಅವರ ಬಿಡಾರಗಳಲ್ಲಿ ಅಡುಗೆ ಮಾಡುತ್ತಾರೆ.. ಊಟ ಮಾಡುತ್ತಾರೆ. ಬಿಡಾರದ ಬಳಿ ಬಂದ ಎಲ್ಲಾ ಜಾತಿಯ ಜನರಿಗೂ ತಮ್ಮ ಜೊತೆಯೆ ಊಟಕ್ಕೆ ಬಡಿಸುತ್ತಾರೆ. ಇಲ್ಲಿಯ ದೇವರಿಗೆ ಅಲಂಕಾರ, ರಥಗಳಿಲ್ಲ. ದುಡ್ಡು ಸುಲಿಯುವ ಪುರೋಹಿತರು ಮೊದಲೇ ಇಲ್ಲ. ಇಲ್ಲಿ ಯಾರೂ ವೈಭವದಿಂದ ಬದುಕುವಂತಿಲ್ಲ. ಎಲ್ಲರೂ ಸಮಾನವಾಗಿ ಬದುಕಬೇಕು. ಬಿಡಾರವನ್ನು ಹಾಕಿಕೊಂಡೇ ಜಾತ್ರೆಯ ದಿನಗಳಲ್ಲಿ ಬದುಕಬೇಕು.

ಕಡೆಗೆ ಒಂದು ಮಾತು :
ನಮ್ಮ ಜಾತ್ರೆಯಲ್ಲಿ ಎಲ್ಲ ಜಾತಿಯ ಜನರೂ ಇದ್ದಾರೆ.
ಎಲ್ಲ ಜನರೂ ಮಾಂಸ ತಿನ್ನುತಾರೆ.
ಅದು ನಮ್ಮ ಆಹಾರ ಕ್ರಮ.
ಇದನ್ನು ವಿರೋಧಿಸುವ ನಿಮಗೆ ಆತ್ಮ ಸಾಕ್ಷಿ ಅನ್ನುವುದು ಇದ್ದರೆ ಮೊದಲು ಹಾಲಿನ ಪದಾರ್ಥ ಬಳಸುವುದು ಬಿಡಿ, ನಿಮ್ಮ ಜಾನುವಾರಗಳಿಗೆ ನಿಮ್ಮ ಕೊಟ್ಟಿಗೆಯಿಂದ ಸ್ವಾತಂತ್ರ್ಯ ಕೊಡಿ. ಇಲ್ಲವಾದರೆ ನಿಮ್ಮ ತಟ್ಟೆಯಲ್ಲಿರುವುದನ್ನು ತಿಂದು ಬದುಕಿ ಬೇರೆಯವರ ತಟ್ಟೆ ನೋಡಲು ಹೋಗಬೇಡಿ

‍ಲೇಖಕರು admin

1 April, 2016

1 Comment

  1. ಅಜಯ್

    ನಿಷೇಧ ಮಾಡಿರುವುದು ಸರ್ಕಾರ ತಾನೆ? ನೀವೇಕೆ ಸಸ್ಯಾಹಾರಿಗಳ ಮೇಲೆ ಉರಿದು ಬೀಳುತ್ತಿದ್ದೀರಿ? ಜಾತ್ರೆಗೆ ಸಂಬಂಧವಿಲ್ಲದ ವಿಷಯಗಳನ್ನು ಪ್ರಸ್ತಾಪಿಸಿದ್ದೀರಿ? ಇದೇನಾ ತಟ್ಟೆಯ ಕಾಳಜಿ?!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading