ಮಂಡ್ಯ ರಮೇಶ
ಕನ್ನಡದ ಹೆಮ್ಮೆಯ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಪ್ರಖ್ಯಾತ ‘ನಮ್ಮ ಊರಿನ ರಸಿಕರು’ ಈಗ ತೆರೆಗೆ ಬರಲು ಸಿದ್ಧವಾಗುತ್ತಿವೆ! ಕಿರುತೆರೆಯ ನಟಿ-ನಿರ್ದೇಶಕಿ ನಂದಿತಾ ನಿರ್ದೇಶಿಸುತ್ತಿರುವ ಯೋಜನೆಯಲ್ಲಿ ಬಿ ಸುರೇಶ್, ಪಿ ಶೇಷಾದ್ರಿ, ಶಶಿಕುಮಾರ್, ರಾಜೇಶ ನಟರಂಗ, ಸುಜಯ್ ಶಾಸ್ತ್ರಿ ಸುಂದರ್ ವೀಣಾ, ರಮೇಶ್ ಪಂಡಿತ್, ಶೃಂಗ, ರವಿ ಕುಮಾರ್… ಜೊತೆಗೆ ನಾನೂ ಸೇರಿದಂತೆ ರಂಗಭೂಮಿಯ ದೊಡ್ಡ ದಂಡೇ ಇದೆ!
ಪ್ರಖ್ಯಾತ ಅಶೋಕ ಕಶ್ಯಪರ ಕ್ಯಾಮರಾ ಕಣ್ಣಿನಲ್ಲಿ, ಹೊಸಮನೆ ಮೂರ್ತಿ ಕಲಾ ನಿರ್ದೇಶನದಲ್ಲಿ, ಮಂಗಳ ವಸ್ತ್ರವಿನ್ಯಾಸದಲ್ಲಿ, ಅನೇಕ ಪ್ರತಿಭಾವಂತ ಎಳೆಯರ ನಟನೆ ಜೊತೆಗೆ ಚಿತ್ರೀಕರಣ ಸಾಗಿದೆ.



















0 Comments