ನಮ್ಮೂರಿಗೆ ಬಂತು ಶಾಪಿಂಗ್ ಮಾಲ್

ಮಾಲ್ ಸಂಸ್ಕೃತಿ

ಸುವರ್ಣ ಸಿ

ಮನೆಗೆಲಸ ಮುಗಿಸಿ ಆಫೀಸಿಗೆ ಹೋಗಬೇಕಾಗಿರುವುದರಿಂದ ಬೆಳಿಗ್ಗೆ ನ್ಯೂಸ್ ಪೇಪರ್ ಹೆಡ್ ಲೈನ್ ಮಾತ್ರ ಕಣ್ಣಾಡಿಸಿ ಆಫೀಸ್ ನಿಂದ ಸಂಜೆ ಮನೆಗೆ ಬಂದ ಮೇಲೆ ನಿಧಾನವಾಗಿ ಕಾಫಿ ಹೀರುತ್ತಾ ದಿನಾಂಕದಿಂದ ಇಡೀದು ಪಬ್ಲಿಷರ್ ವರೆಗೆ ಒಂದೂ ಚೂರು ಬಿಡದಂಗೆ ಪೇಪರ್ ಓದೋದು ನಂದು ಹವ್ಯಾಸ. ಎಂದಿನಂತೆ ಸಂಜೆ ಮನೆಗೆ ಬಂದಾಗ ಕಾಫಿ ಹೀರುತ್ತಾ ಪೇಪರ್ ಓದುತ್ತಾ ಇದ್ದೆ. ಮುಖಪುಟದ ಬಾಟಂನಲ್ಲಿ ಅರ್ಧ ಪೇಜ್ ಒಂದು ಜಾಹೀರಾತು ಇತ್ತು. ಇದು ಯಾವುದಪ್ಪ ಇಷ್ಟು ದೊಡ್ಡ ಜಾಹೀರಾತು ಯಾವುದಾದರೂ ಬಟ್ಟೆ ಅಂಗಡಿಯೋ ಇಲ್ಲ ಚಿನ್ನಬೆಳ್ಳಿ ಅಂಗಡಿಯೋ ಪ್ರಾರಂಭ ಆಗತ್ತಾ ಇದಿಯೇನೋ ಅಂದ್ಕಂಡು ನೋಡದೆ . ಅದರಲ್ಲಿ ನಗರದಲ್ಲಿ ನೂತನ ಮಾಲ್ ನಾಳೆಯಿಂದ ಆರಂಭ ಇನ್ನೂ ಮುಂದೆ ತಮಗೆ ಬೇಕಾದ ಎಲ್ಲಾ ಪದಾರ್ಥಗಳು ಒಂದೇ ಮಳಿಗೆಯಲ್ಲಿ ದೊರೆಯುತ್ತದೆ ಎಂದು ಅಂದವಾಗಿ ಮುದ್ರಿಸಲಾಗಿತ್ತು. ಕೆಳಗೆ ವಿಳಾಸ ಇತ್ತು. ನಾನು ಅದುನ್ನ ಓದಿ ಪರವಾಗಿಲ್ಲ ನಮ್ಮೂರಿಗೂ ಮಾಲ್ ಬಂತು ನಮ್ಮ ಜನ, ನಮ್ಮ ನಗರನು ಮುಂದುವರಿತು ಅಂಥ ಮನಸ್ಸಲ್ಲಿ ಅಂದ್ಕಂಡು ಖುಷಿ ಪಟ್ಟೆ.
ಮರುದಿನ ಸಂಜೆ ಮನೆಯಲ್ಲಿ ಟಿವಿ ನೋಡ್ತಾ ಕೂತಿದ್ದೆ. ನಮ್ಮ ಚಿಕ್ಕಮ್ಮ ಯಾವತ್ತು ಚೂಡಿದಾರ್ ಹಾಕಿಕೊಳ್ಳದವರು ಅವತ್ತು ಚೂಡಿದಾರ್ ಹಾಕ್ಕಂಡು ಫುಲ್ ಮೇಕಪ್ ಮಾಡ್ಕಂಡು ಮನೆಗೆ ಬಂದ್ರು.ಅವರನ್ನ ನೋಡಿ ನನಗೆ ಆಶ್ಚರ್ಯ ಜೊತೆಗೆ ಇವರಿಗೆ ಯಾಕೆ ಈ ಹುಚ್ಚು ಹಿಡಿತು ಒಳ್ಳೆ ಕಾಲೇಜು ಹುಡುಗಿಯರ ತರ ಡ್ರಸ್ ಮಾಡ್ಕಂಡು ಬಂದಿದ್ದಾರಲ್ಲ ಅಂಥ ಮನಸ್ಸಲ್ಲಿ ಅಂದ್ಕಂಡು ನಸುನಗುತ್ತಾ ಓಹೋ ಚಿಕ್ಕಮ್ಮ ಏನ್ ಸಮಾಚಾರ ಒಳ್ಳೆ ಸ್ವೀಟ್ಏಟೀನ್ ತರ ಡ್ರಸ್ ಮಾಡ್ಕಂಡು ಬಂದಬಿಟ್ಟಿದ್ದೀರಾ ಅಂದೆ. ಅದುಕ್ಕೆ ಅವರು ಲೇ ಸುವಿ ಇವತ್ತಿಂದ ನಮ್ಮೂರಲ್ಲಿ ಮಾಲ್ ಶುರು ಆಗಿದೆ ಕಣೆ ಹೋಗಬರೋಣ ಬಾರೆ ಅಂದ್ರು. ಸರಿ ಮಾಲ್ ಗೆ ಹೋಗೋಕೆ ನೀವು ಚೂಟಿದಾರ್ ಹಾಕೋಬೇಕಾ ಮತ್ತೆ ನಾವು ಜಿನ್ಸ್ ಪ್ಯಾಂಟ್ ಹಾಕೋಳೋಕೆ ಆಗುತ್ತಾ ಅಲ್ಲಿ ಎಲ್ಲಾ ಜಿನ್ಸ್ ಪ್ಯಾಂಟ್ ಚೂಟಿಧಾರ್ ಬಾಬ್ ಕಟ್ ಮಾಡ್ಕಂಡು ಕಾರಲ್ಲಿ ಬಂದಿರತ್ತಾರೆ ನಾನು ಸೀರೆ ಹುಡ್ಕಂಡು ಬಂದ್ರೆ ಆ ಮೇಲೆ ಎಲ್ಲಾ ನನ್ನ ನೋಡೋಕೆ ಶುರು ಮಾಡಬಿಡತ್ತಾರೆ ಅದುಕ್ಕೆ ಇವತ್ತು ನಿಮ್ಮ ಚಿಕ್ಕಪ್ಪನ ಹತ್ರ ಪರ್ಮಿಶನ್  ತಗೊಂಡು ಡ್ರಸ್ ಹಾಕ್ಕಂಡು ಬಂದೆ ಕಣೆ ಅಂದ್ರು ನಾನು ಅವರ ಮಾತು ಕೇಳಿ ನಸುನಕ್ಕು ಸುಮ್ಮನಾದೆ.
ಆ ಸಂದರ್ಭದಲ್ಲಿ ನಮ್ಮೂರಿನಲ್ಲಿ ಮಾಲ್ ಅಂಥ ಆರಂಭವಾಗಿದ್ದು ಇದೆ ಮೊದಲು. ಅದು ನಮ್ಮೂರ ಬಿ.ಹೆಚ್.ರಸ್ತೆಯಲ್ಲಿೆ ಹೊಸದಾಗಿ ಕಟ್ಟಿದ್ದ ಐದು ಅಂತಸ್ತಿನ ಕಟ್ಟಡದಲ್ಲಿ ಆರಂಭವಾಗಿತ್ತು.
ನಮ್ಮ ಚಿಕ್ಕಮ್ಮ ಅವರೆಲ್ಲಾ ಹೇಗೋ ಯಾವದೋ ಒಂದು ಸೀರೆಗೆ ಯಾವದೋ ಒಂದು ಬ್ಲೌಸ್ ಹಾಕ್ಕಂಡು ಪರ್ಸಲ್ಲಿ ಒಂದು ಇನ್ನೂರು ರೂಪಾಯಿ ಹಾಕ್ಕಂಡು ಬ್ಯಾಸ್ಕೆಟ್ ಹಿಡ್ಕಂಡು ತರಕಾರಿ, ಅಂಗಡಿ ಸಾಮಾನು ತರೋಕೆ ಹೋಲ್ಸೆಲ್ ಅಂಗಡಿ ಅಂಥ ಪೇಟೆಬೀದಿ ಸುತ್ತಿ ಅಭ್ಯಾಸ . ನಾನು ಬರಿ ಕೈಲಿ ಪರ್ಸ್  ಒಂದು ಹಿಡ್ಕಂಡು ಬಂದಿರೋದು ನೋಡಿ ಅವರಿಗೆ ಆಶ್ಚರ್ಯ ಇದೇನೇ ಬ್ಯಾಸ್ಕೆಟ್ ಕವರ್ ಏನೂ ತಗೊಳ್ಳವೇನೆ ಅಂದ್ರು. ನಾನು ಅವರಿಗೆ ಏನೂ ಹೇಳಲಿಲ್ಲ ಅವರು ಬ್ಯಾಗ್ ಇಡ್ಕಂಡು ಬರ್ಲಿ ಅಂದ್ಕಂಡು ನಾನು ರೆಡಿಯಾಗಿ ನನ್ನ ಹತ್ರ ಇದ್ದ ಕ್ರೆಡಿಟ್ ಕಾರ್ಡ್ ನ ಪರ್ಸ್ ಗೆ ಹಾಕ್ಕೊಂಡು ನನ್ನ ಗಾಡಿಯಲ್ಲೆ ಇಬ್ಬರು ಹೊರಟವಿ. ನನಗೆ ಮೊದಲೆ ಬೆಂಗಳೂರಿಗೆ ಹೋದಾಗಲೆಲ್ಲಾ ಗರುಡ ಮಾಲ್ , ಮಂತ್ರಿಮಾಲ್ ಹೀಗೆ ಅಲ್ಲಿ ಹೋಗಿ ಅಭ್ಯಾಸ ಇತ್ತು. ಆದರೆ ನಮ್ಮ ಚಿಕ್ಕಮ್ಮಂಗೆ ಅಲ್ಲಿ ಎಲ್ಲೂ ಬಂದಿಲ್ಲದೆ ಇದ್ದಿದ್ದರಿಂದ ಮಾಲ್ ಅಂದ್ರೆ ಏನೋ ಒಂದು ಕ್ಯೂರಿಯಾಸಿಟಿ. ಗಾಡಿ ನಿಲ್ಲಸಿ ಬರೋದರೊಳಗೆ ಚಿಕ್ಕಮ್ಮ ಬಾಗಿಲ ಹತ್ರ ನಿಂತಿದ್ದರು. ಬಾಗಲಲ್ಲೆ ನೆವಿಬ್ಲೂ ಪ್ಯಾಂಟ್ , ಸ್ಕೈ ಬ್ಲೂ ಷಟ್ , ತಲೆಗೆ ಒಂದು ಹ್ಯಾಟ್ , ಕೈಯಲ್ಲಿ ಒಂದು ವಿಷಲ್, ಲಾಠಿ ಇಡ್ಕಂಡು ನಿಂತಿದ್ದವನ್ನು ನೋಡಿ ಚಿಕ್ಕಮ್ಮ ಮುಖಮುಖಾ ಅವನ ನೋಡಿ ನನ್ನ ಮುಖ ತಿರುಗಿ ನೋಡಿ ನಸುನಕ್ಕುತು.ಬ್ಯಾಗ್ ಇಟ್ಟಕೊಂಡು ಸೀದಾ ಒಳಕ್ಕೆ ಶೆಟ್ಟರಂಗಡಿಗೆ ಹೋದಂಗೆ ನುಗ್ಗೋಕೆ ಹೋದ ತಕ್ಷಣ ಆತ ತಡದ.ಚಿಕ್ಕಮ್ಮ ಗಾಭರಿಯಾಗಿ ನನ್ನ ಮುಖ ಮತ್ತೊಮ್ಮೆ ತಿರುಗಿ ನೋಡಿತು.

ನಾನು ತಕ್ಷಣ ಅವರ ಹತ್ರ ಹೋಗಿ ಕೈಯಲ್ಲಿ ಇರೋ ಬ್ಯಾಗ ಅನ್ನ ಅಲ್ಲೆ ಇದ್ದ ಕ್ಯಾಬಿನ್ ನಲ್ಲಿ ಇಡುವಂತೆ ಸನ್ನೆ ಮಾಡಿದೆ, ಅವರು ತಕ್ಷಣ ಅಲ್ಲಿ ಇಟ್ಟರು ಇಬ್ಬರು ಬಾಗಿಲು ದೂಡಿ ಒಳ ಹೋದವಿ ಬಾಗಿಲಲ್ಲಿ ಮೈಗೆ ಅಂಟಿದಂತೆ ಟಿ ಷರ್ಟ್ , ಬಿನ್ಸ್ ಪ್ಯಾಂಟ್ , ಮುಖಕ್ಕೆ ಒಂದು ಇಂಚು ಮೇಕಪ್ ಮಾಡಿಕೊಂಡು ಕಣ್ಣು ಪಿಳಿಪಿಳಿ ಬಿಡುತ್ತಾ ನಿಂತಿದ್ದ ಸುಮಾರು 20-22 ಹಾಸು ಪಾಸು ವಯಸ್ಸಿನ ಹುಡುಗಿ ಇಂಗ್ಲಿಷ್ ನಲ್ಲಿ ವೆಲ್ ಕಮ್ ಮೇಡಂ ಬನ್ನಿ ಎಂದು ಸ್ವಾಗತಿಸಿ ಅವಳ ಕೈಯಲ್ಲಿದ್ದ ಬ್ಯಾಗ್ ನ್ನು ನಮ್ಮ ಕೈಗೆ ಕೊಟ್ಟಳು. ಒಂದು ಹೆಜ್ಜೆ ಮುಂದೆ ಇಟ್ಟ ತಕ್ಷಣ ಮತ್ತೊಬ್ಬ ಯುವತಿ ಟ್ರೆ ನಲ್ಲಿ ಎರಡು ಗ್ಲಾಸ್ ಜ್ಯೂಸ್ ಹಿಡಿದು ಕೊಂಡು ಬಂದು ಮುಗುಳುನಗೆ ಬೀರಿ ನಮ್ಮ ಕೈಗೆ ಇಟ್ಟಳು. ಅವರ ನಟಿಸಿದ ನಟನೆ ಆ ವಿದ್ಯುತ್ ಅಲಂಕಾರ ದಿಂದ ವಸ್ತುಗಳೆಲ್ಲಾ ಜಗಮಗಿಸುತ್ತಿರೋದು ನೋಡಿ ನಮ್ಮ ಆಂಟಿ ದಗ್ಗಾದರು. ರೇಷನ್ , ಎಲೆಕ್ಟ್ರಾನಿಕ್ಸ್ ಗೋಡ್ಸ್ , ಸ್ವೀಟ್ಸ್ , ಐಸ್ಕ್ರಿಂ, ತರಕಾರಿ, ಬಟ್ಟೆ, ಸ್ಲೀಪರ್ ಹೀಗೆ ಎಲ್ಲವೂ ಒಂದೇ ಮಳಿಗೆಯಲ್ಲಿ ದೊರೆಯುತ್ತಿರೋದು ನೋಡಿ ನನ್ನ ಕಿವಿಯಲ್ಲಿ ಲೇ ಸುವಿ ನಾವು ನಮ್ಮೂರಲ್ಲಿದ್ದೀವ ಇಲ್ಲ ಯಾವುದೋ ಫಾರಿನ್ ನಲ್ಲಿ ಇದ್ದಿವೋ ಅಂತೇಳಿ ಕೈ ಚಿವುಟಿದರು. ನಾನು ಅಕ್ಕಪಕ್ಕ ಯಾರಾದರೂ ಕೇಳಿಸಿ ಕೊಂಡು ಎಲ್ಲಿ ನಮ್ಮ ಹಾಸ್ಯ ಮಾಡ್ಕಂಡು ನಗತ್ತಾರೋ ಅಂದ್ಕಂಡು ಕಣ್ಣುಮಿಸಿಕಿ ಸುಮ್ಮನೆ ಇರುವಂತೆ ಸನ್ನೆ ಮಾಡಿ ಎಲ್ಲರಂತೆ ನಾನು ಮುಖಬಿಗಿ ಹಿಡ್ಕಂಡು ಮನೆಗೆ ಬೇಕಾದ ಪದಾರ್ಥಗಳನ್ನ ತಗೊಂಡು ಟ್ರ್ಯಾಲಿ ಒಳಗೆ ಹಾಕೊಂಡೆ.
ಅಲ್ಲಿಂದ ತರಕಾರಿ ಸೆಕ್ಷನ್ಗೆ ಇಬ್ಬರು ಹೋದವಿ. ಅಲ್ಲಿ ನಮಗೆ ಬೇಕಾದ ತರಕಾರಿನ ನಾವೆ ಕವರ್ ಒಳಕ್ಕೆ ಹಾಕಿ ತೂಕ ಹಾಕ್ಕಂಡು ಬಿಲ್ ಹಾಕಸೋಕೆ ಕಂಪ್ಯೋಟರ್ ಆಪರೇಟರ್ ಹತ್ರ ಬಂದವಿ. ಅಲ್ಲಿ ದುಡ್ಡಕೊಡದೆ ಕ್ರೆಡಿಟ್ ಕಾರ್ಡ್ ಕೊಟ್ಟೆ. ಅವನು ಆ ಕಾರ್ಡ್  ಸ್ವೀಪ್ ಮಾಡಿ ಸಾಮಾನೆಲ್ಲಾ ಒಂದು ಪ್ಲಾಸ್ಟಿಕ್ ಕವರ್ ಗೆ ಹಾಕೊಟ್ಟ ನಮ್ಮ ಚಿಕ್ಕಮ್ಮ ನನ್ನ ಮುಖಮುಖ ನೋಡತು ಆದರೆ ಏನೋ ಮಾತಾಡಾಲಿಲ್ಲ ಯಾಕಂದೆ ಕೇಳಿದ್ದರೆ ಎಲ್ಲಿ ಬೈದು ಬಿಡತ್ತಾಳೋ ಅನ್ನೋ ಭಯದಲ್ಲಿ ಕೇಳಲೇ ಇಲ್ಲ ಎಲ್ಲಾ ತಗೊಂಡು ಹೊರಗೆ ಬಂದ ಮೇಲೆ ಯಾಕೆ ದುಡ್ಡೆ ಕೊಡಲಿಲ್ಲ ಅಂತು. ಅಯ್ಯೋ ಚಿಕ್ಕಿ ಈಗ ದುಡ್ಡು ಕೊಡ ವ್ಯವಹಾರ ಇಲ್ಲ ಎಲ್ಲಾ ಕಾರ್ಡ್  ಅಂದೆ.
ಮಾಲ್ ಗೆ ಹೋಗಿ ಬಂದ ಗೆಳತಿಯೊಬ್ಬಳು ಕೊಟ್ಟ ವಿವರಣೆಯಿಂದ ಆಚ್ಚರಿಗೊಂಡೆ ಅಯ್ಯೋ ಶಾಪಿಂಗ್ ಗೆ ಅಂಥ ಎಲ್ಲೋ ವೆಹಿಕಲ್ ಪಾರ್ಕಿಂಗ್  ಮಾಡಿ ರೇಷನ್ ಒಂದು ಕಡೆ, ಕಾಸ್ ಮೆಟಿಕ್ಸ್ ಮತ್ತೊಂದು ಕಡೆ , ತರಕಾರಿ ಇನ್ನೆಲ್ಲೋ , ಸ್ವೀಟ್ ಮಗದೆಲ್ಲೋ ಪ್ರೋಟ್ ಹುಡುಕೊಂಡು ಒಂದು ಅರ್ಧ ಕಿಲೋಮೀಟರ್ ಹೀಗೆ ಪೇಟೆಯೆಲ್ಲಾ ಸುತ್ತಬೇಕಾಗಿತ್ತು. ಶಾಪಿಂಗ್ ಗೆ ಹೋಗೋಕೆ ಒಂದು ದಿನ ಆಫೀಸ್ ಗೆ ರಜೆ ಹಾಕಬೇಕಾಗಿತ್ತು ಆದರೆ ಈಗ ಆಗಿಲ್ಲ ಆಫೀಸ್ ಮುಗಿಸಿ ಸಂಜೆ ಮನೆಗೆ ಹೋಗಬೇಕಾದರೆ ಈ ಮಾಲ್ ಗೆ ಬಂದ್ರೆ ಸಾಕು ಒಂದು ಗಂಟೆಯೊಳಗೆ ಎಲ್ಲಾ ಸಾಮಾನು ತಗೊಂಡು ಸೇಫ್ಟಟಿಯಾಗಿ ಮನೆ ತಲುಪಬಹುದು ಮಾಲ್ ಒಳಗೆ ಹೋದರೆೆ ಏನೋ ಒಂದು ಆನಂದ ಯಾವುದೋ ಹೊರದೇಶದಲ್ಲಿ ಇದ್ದೀವೇನೋ ಆ ತರಾವರಿ ಜನ , ಸಾಮಾನುಗಳು ನೋಡೋಕೆ ಒಂದು ಖುಷಿ ಅಂದ್ಲು.
ಎಸ್ಎಸ್ಎಲ್ ಸಿ ಪಾಸ್ ಮಾಡ್ಕಂಡು ತಕ್ಷಣ ತಂದೆತಾಯಿ ಬಡತನ ಅಂದ್ಕಂಡು ಯಾವುದೋ ಹುಡುಗ ಸಿಕ್ಕದಾ ಅಂಥ ಚಿಕ್ಕ ವಯಸ್ಸಲ್ಲೆ ಹುಡುಗಿಗೆ ಮದುವೆ ಮಾಡಿ ತಂದೆತಾಯಿಗಳು ಜವಾಬ್ದಾರಿ ಕಳ್ಕಂಡು ಬಿಟ್ಟವರೇ. ಆ ಹುಡುಗಿ ಗಂಡ ಕುಡುಕ ಅಂದ್ರೆ ಮಹಾನ್ ಕುಡುಕ. ದುಡಿದಿದೆಲ್ಲಾ ಹೆಂಡದ ಅಂಗಡಿಗೆ ಕಟ್ಟತ್ತಿದ್ದರಿಂದ ಆ ಹುಡುಗಿ ಮನೆ ಸಂಸಾರ ನೀಗಿಸಕ್ಕೆ ಅಂಥ ನಮ್ಮ ಮನೆ ಎದುರಿಗೆ ಇದ್ದ ಮಾರ್ವಡಿ ಮನೆಗೆ ಹಳೇ ಸೀರೆ ಹುಡ್ಕಂಡು ಹೇಗೇಗೋ ಜಡೆ ಎಣಕೊಂಡು ಮನೆ ಕೆಲಸಕ್ಕೆ ಅಂಥ ಬರೋಳು. ನಾನು ಆಕಸ್ಮಾತ್ ಅವಳು ಬರೋ ಟೈಮ್ ನಲ್ಲಿ ಹೊರಗಡೆ ಇದ್ದರೆ ಮಾತಾಡಿಸತ್ತಿದ್ದಲು ಒಂದು ಹದಿನೈದು ದಿನದಿಂದ ಮನೆಕೆಲಸಕ್ಕೆ ಬರೋದು ನಿಲ್ಲಿಸಿದ್ದಲು. ಅವಳು ಯಾಕೆ ಬಿಟ್ಟಿದ್ದಲು ಅನ್ನೋದು ನನಗೆ ಗೊತ್ತಿರಲಿಲ್ಲ. ಮಾಲ್ ಗೆ ಹೋದಾಗ ಅವಳು ಪ್ಯಾಂಟ್ ಟೀ ಷಟರ್್ ಬ್ಯಾಡ್ಜ್ ಹಾಕ್ಕಂಡು ಸೆಲ್ಸ್  ಗರ್ಲ್  ಡ್ರಸ್ ನಲ್ಲಿ ನೋಡಿ ಆಶ್ಚರ್ಯ ಆಯಿತು. ಅಯ್ಯೋ ಆ ಹುಡುಗಿ ಇವಳೇನಾ ಅನ್ನೊಂಗೆ ಆಯಿತು. ಅವಳ ಹತ್ರ ಹೋಗಿ ಏನೇ ಹುಡುಗಿ ಇಲ್ಲೆ ಅಂದೆ. ಅದುಕ್ಕೆ ಅವಳು ಅಯ್ಯೋ ಆಂಟಿ ಈಗ ಇಲ್ಲಿ ಕೆಲಸ ಮಾಡ್ತಾ ಇದ್ದೀನಿ ಅವರ ಮನೆಕೆಲಸ ಮಾಡೋದು ಬಿಟ್ಟೆ. ನೋಡಿ ನನಗೆ ಇಲ್ಲಿ ಹೇಗೆ ಜನರು ಗೌರವ ಕೊಡತ್ತಾ ಇದ್ದಾರೆ. ಅಲ್ಲದೇ ಕೈತುಂಬಾ ಸಂಬಳನು ಸಿಕ್ತಾ ಐತೆ. ನಮ್ಮ ಮಕ್ಕಳುನ್ನ ಒಳ್ಳೆ ಸ್ಕೂಲಿಗೂ ಸೇರಸಿದ್ದೀನಿ. ಮನೆ ಸಾಮಾನು ನಮಗೆ ಟ್ಯಾಕ್ಸ್ ಪ್ರೀ . ಅಲ್ಲಿ ಮನೆಕೆಲಸ ಮಾಡಿ ಅವರು ಇವರ ಹತ್ರ ಥೂ ಛಿ ಅನ್ನುಸಕೊಳ್ಳಕ್ಕಿಂತ ಆ ಕೈ, ಕಾಲು ಎಲ್ಲಾ ನೀರಲ್ಲಿ ಇದ್ದಿದ್ದರಿಂದ ಷಲತ್ತು ಹೋಗಿತ್ತು. ಈಗ ನೋಡಿ ನನ್ನ ಕೈಕಾಲು .ನನ್ನ ಗಂಡನು ಈಗ ಕುಡಿಯೋದು ಬಿಟ್ಟು ಇಲ್ಲೆ ಕೆಲಸ ಮಾಡೋಕೆ ಬರ್ತಾ ಇದ್ದಾನೆ ನೋಡಿ ಅಲ್ಲೆ ಎದುರುಗಡೆ ಸ್ಟಾಲ್ ನಲ್ಲಿ ಅವ್ವರೇ ಹೋಗಿ ಅಂದ್ಲು. ಸರಿ ಅಂದ್ಕಂಡು ಅಲ್ಲಿ ಹೋಗಿ ಅವಳ ಗಂಡುನ್ನ ನೋಡಿದ್ದರೇ ಒಳ್ಳೆ ಪ್ಯಾಂಟ್ ಷರ್ಟ್ ಇನ್ ಷರ್ಟ್ , ಮಾಡ್ಕಂಡು ಟೈ ಕಟ್ಟಕೊಂಡು ಯಾವುದೋ ಮಾಡಲಿಂಗ್ ಹುಡುಗನ ತರ ನಿಂತಿದ್ದ ಅಯ್ಯೋ ದಿನಾ ಕುಡ್ಕಂಡು ರಸ್ತೆನ ಆ ತುದಿಯಿಂದ ಈ ತುದಿವರೆಗೆ ಸರ್ವೆ  ಮಾಡ್ತಾ ಮನೆಗೆ ಬರತ್ತಾ ಇದ್ದ ಆ ಹುಡುಗಿ ಗಂಡ ಇವನೇನಾ ಅನಿಸಿತು. ಅವರಿಬ್ಬರನ್ನು ನೋಡಿ ನನ್ನ ಹೃದಯದಲ್ಲಿ ಸಂತೋಷ ಉಕ್ಕಿಬಂತು. ನನಗೆ ಅರಿವಿಲ್ಲದಂಗೆ ಕಣ್ಣಿನಲ್ಲಿ ಆನಂದಬಾಷವ ಸುರಿಯಿತು.
ಮಾಲ್ ಆರಂಭವಾಗಿರುವ ಬಗ್ಗೆ ನಮ್ಮೂರ ಕೆಲವು ಹೋರಾಟಗಾರರು ಅದನ್ನ ಮುಚ್ಚಿಸಬೇಕು ಚಿಲ್ಲರೇ ವ್ಯಾಪಾರಿಗಳಿಗೆ ಈ ಮಾಲ್ ಬಂದಿರೋದ್ದರಿಂದ ತುಂಬಾ ತೊಂದರೆ ಆಗುತ್ತೆ ಅವನ ಜೀವನದ ಮೇಲೆ ತುಂಬಾ ಪರಿಣಾಮ ಬೀರುತ್ತೆ ಅವರ ಬದುಕೆ ನಡಿತಾ ಇರೋದೆ ಈ ಚಿಲ್ಲರೆ ಮಾರಾಟದಿಂದ ಅವರ ವ್ಯಾಪರಕ್ಕೆ ಕುಂಠಿತವಾದರೆ ಅವರ ಸಂಸಾರವೆಲ್ಲಾ ಬೀಗಿಗೆ ಬಂದಬಿಡತ್ತಾರೆ ಮಾಲ್ ಬರೋದು ತಪ್ಪಿಸಬೇಕು ಅದುಕ್ಕೆ ಪ್ರತಿಭಟನೆ ಮಾಡಬೇಕು ಅಂದ್ಕಂಡು ಕೆಲವರು ಚಿತಾವಣೆ ನಡೆಸತ್ತಾ ಇದ್ದರು.
ಇನ್ನೂ ಕೆಲವು ಸಂಘಟನೆಗಳು ಮಾಲ್ ಬೇಕೋ ಬ್ಯಾಡವೋ ಅನ್ನೋದರ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಸಭೆ ಕರುದ್ದರು. ಆ ಸಭೆಗೆ ನಾನು ಹೋದೆ. ಮಾಲ್ ಇರೋದ್ದರಿಂದ ಕಂಪನಿ , ಕಛೇರಿಗಳಲ್ಲಿ ಗಂಡ ಹೆಂಡತಿ ಇಬ್ಬರು ಉದ್ಯೋಗ ಮಾಡುವವರಿಗೆ ಎಷ್ಟು ಅನುಕೂಲ ಆಗಿದೆ. ಸಮಯ , ಒತ್ತಡ ಎಲ್ಲಾ ಹೇಗೆ ಕಡಿಮೆಯಾಗಿದೆ ಅನ್ನೋದರ ಬಗ್ಗೆ ವಿವರಿಸಿದೆ. ಮಾಳ್ ಬಂದಿರುವುದರಿಂದ ಪ್ರತಿಯೊಬ್ಬರು ಅಲ್ಲಿಯೇ ಕೊಳ್ಳೋದಿಲ್ಲ ಶೇ 25 ರಷ್ಟು ಮಂದಿ ಮಾತ್ರ ಮಾಲ್ ನಲ್ಲಿ ವ್ಯವಹಾರ ಮಾಡ್ತಾರೆ ಉಳಿದ ಶೇ 75 ಭಾಗದ ಜನರು ಚಿಲ್ಲರೆ ವ್ಯಾಪಾರಿಗಳ , ಬೀದಿ ದಿಯ ವ್ಯಾಪಾರಿಗಳಲ್ಲಿಯೇ ವಸ್ತುಗಳನ್ನು ಖರೀದಿಸುವುದು ಮಾಲ್ ಬಂದ ತಕ್ಷಣ ಅವರ ಬದುಕಿನ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಆಂತಕ ಪಡುವುದು ಅಗತ್ಯವಿಲ್ಲ ಎಂದು ಕೆಲವೊಂದಿಷ್ಟು ಉದಾಹರಣೆ ಸಹಿತ ಮಾಹಿತಿ ಹೇಳಿದೆ. ನನ್ನ ಮಾತು ಮುಗಿದ ತಕ್ಷಣ ಸಭೆಯಲ್ಲಿ ಇದ್ದವರೆಲ್ಲಾ ಜೋರಾಗಿ ಚಪ್ಪಾಳೆ ಹಾಕಿದರು. ಸಭೆ ಮುಗಿದ ಬಳಿಕ ಎಲ್ಲರೂ ನನಗೆ ಶಹಬಾಷ್. . . ! ಗಿರಿಕೊಟ್ಟರು.
ಬಿಡುವಿನ ವೇಳೆಯಲ್ಲಿ ಲೇಖನ ಕಥೆಗಳನ್ನು ಬರೆದು ಕೆಲವು ಪತ್ರಿಕೆಗೆ ಕಳುಹಿಸುತ್ತಿದ್ದೆ ಅವು ಪ್ರಕಟಗೊಳ್ಳುತ್ತಿತ್ತು ಆದರೆ ಯಾರಿಗೂ ನಾನು ಎಂದು ಗೊತ್ತಿರಲಿಲ್ಲ ಆ ಸಭೆಗೆ ಹೋಗಿ ಪರಿಚಯ ಮಾಡಿ ಕೊಂಡಾಗಲೇ ನಾನು ಎಂದು ತಿಳಿದಿದ್ದು ಆ ಮೇಲೆ ಊರಿನಲ್ಲಿ ನನಗೆ ಕೆಲವು ಸಭೆ, ಸಮಾರಂಭಗಳಿಗೆ, ಕಾಲೇಜುಗಳಲ್ಲಿ ಉಪನ್ಯಾಸ ನೀಡಲು ಕಾರ್ಯಕ್ರಮ ಉದ್ಘಾಟಸಲು ಅತಿಥಿಗಳಾಗಿ ಆಹ್ವಾನಿಸಲು ಶುರು ಮಾಡಿದರು. ನನ್ನ ಮಾತಿನ ಶೈಲಿ ನೋಡಿ ಕೆಲವು ಅಭಿಮಾನಿಗಳು ನನಗೆ ಹುಟ್ಟಿಕೊಂಡರು. ಆಂಟಿ ಮಾಲ್ ಗೆ ಹೋಗಿ ಬಂದ ಮೇಲೆ ಅವರಲ್ಲಿ ಇದ್ದ ಅನುಮಾನ ಬಿಡುಗಡೆಯಾಯಿತು ಮಾಲ್ ಅಂದ್ರೆ ಹಣವುಳ್ಳವರು, ಜಿನ್ಸ್ , ಚೂಟಿಧಾರ್ ಹಾಕಿಕೊಂಡು ಕಾರ್ ನಲ್ಲಿ ಓಡಾಡುವವರು ಮಾತ್ರ ಹೋಗುತ್ತಾರೆ ಅನ್ನೋದು ತಪ್ಪು ಸೀರೆಯಲ್ಲೆ ತಮಲ್ಲಿ ಎಷ್ಟು ಹಣವಿದಿಯೊ ಅಷ್ಟರಲ್ಲೆ ಕಾಲನಡಿಗೆಯಲ್ಲೆ ಹೋಗಿ ಮಾಲ್ ನಲ್ಲಿ ವ್ಯಾಪಾರ ಮಾಡಬಹುದು ಎಂದು ಗೊತ್ತಾಯಿತು. ಮಾಲ್ ಅಂದ್ರೆ ಅದು ಏನು ಬಡವರಿಗೆ ಸಿಗದಂತಹದ್ದಲ್ಲ ಬಡವರು ಮಧ್ಯಮವರ್ಗದವರು ಕೂಡ ಮಾಲ್ಗೆ ಹೋಗಬಹುದು. ಮಾಲ್ ಕೂಡ ಒಂದು ಹೋಲ್ ಸೆಲ್ ಅಂಗಡಿಯೇ. . .!

‍ಲೇಖಕರು G

May 11, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: