ವರ್ಷಗಳ ಹಿಂದೆ ನಮ್ಮ ಮನೆಗೆ ಹೊಸದಾಗಿ ರೆಫ್ರಿಜರೇಟರ್ ತಂದ ಸಂದರ್ಭದಲ್ಲಿ ಪ್ರಿಡ್ಜ್ ಯಾವ ಬಣ್ಣದ್ದಿರಬೇಕು ಎಂದು ಭಾರೀ ಚರ್ಚೆ, ಮನೆಯಲ್ಲಿರುವ ಐದು ಮಂದಿಯೊಳಗೆ! ಒಬ್ಬೊಬ್ಬರದೂ ಒಂದೊಂದು ಬಣ್ಣದತ್ತ ಒಲವು, ಅಥವಾ ಅದಕ್ಕಿಂತ ಪ್ರಖರವಾಗಿ, ಇನ್ನೊಬ್ಬರು ಸೂಚಿಸಿದ್ದ ಬಣ್ಣದ ಬಗ್ಗೆ ತಕರಾರು. ‘ಕಾಮನಬಿಲ್ಲಿನಂತೆ ಏಳು ಬಣ್ಣಗಳ ಪಟ್ಟೆಗಳನ್ನು ಬಳಿದು ಫ್ರಿಡ್ಜ್ ತಯಾರಿಸ್ರಪ್ಪಾ’ ಎಂದು ಗೋದ್ರೆಜ್/ವೋಲ್ಟಾಸ್/ಕೆಲ್ವಿನೇಟರ್ ಕಂಪನಿಗಳಿಗೆ ಸಲಹೆ ಕೊಡಬೇಕಾಗಬಹುದೇನೋ ಎನ್ನುವಷ್ಟರ ಮಟ್ಟಿಗೆ ಚರ್ಚೆಯ ಬಿಸಿ ಏರಿತ್ತು. ಕೊನೆಗೂ ಬಿಳಿ ಬಣ್ಣದ ಪ್ದಿಡ್ಜ್ ಬಂತು (ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು ಎಂದು ಅಣ್ಣನ ಸಮರ್ಧನೆ). ಚರ್ಚೆ ತಣ್ಣಗಾಯಿತು, ಪ್ರಿಡ್ಜ್‌ನಲ್ಲಿಟ್ಟ ಆಹಾರಪದಾರ್ಥಗಳಂತೆ.
ಫ್ರಿಡ್ಜ್ ಬಣ್ಣದ ಬಗ್ಗೆ ಐದು ಮಂದಿಯೊಳಗೆ ಸಹಮತ ಮೂಡಿಸುವುದೇ ಕಷ್ಟ.ಇನ್ನು ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಕರು ಯಾರಾಗಬೇಕು ಎಂಬ ವಿಷಯದಲ್ಲಿ ಐದು ಕೋಟಿ ಕನ್ನಡಿಗರಲ್ಲಿ ಸಹಮತ ನಿರೀಕ್ಷಿಸುವುದು!? ನೋಡುತ್ತಿರಿ, ಈ ಚರ್ಚೆಯೂ ಶೀಘ್ರದಲ್ಲೇ ‘ತಣ್ಣಗಾಯಿತು, ಪ್ರಿಡ್ಜ್‌ನಲ್ಲಿಟ್ಟ ಆಹಾರಪದಾರ್ಥಗಳಂತೆ’ ಎನ್ನುವಂತಾಗುತ್ತದೆ. ಚರ್ಚೆ ಮಾತ್ರವಲ್ಲ, ನಮ್ಮಲ್ಲಿ ಹೆಚ್ಚಿನವರ ಕನ್ನಡ/ಕನ್ನಡಿಗ ಪ್ರಜ್ಞೆಯೂ!
[ಈ ಪ್ರತಿಕ್ರಿಯೆ ಒಂದು ರೀತಿಯ ನಿರಾಶಾವಾದ/ವ್ಯಂಗ್ಯ/ಕುಹಕ/ನಿರ್ಲಿಪ್ತತೆ ಎಂದೆಲ್ಲ ನಿಮಗೆ ಅನಿಸಬಹುದು. ಅದು ನಿಮ್ಮನಿಮ್ಮ ದೃಷ್ಟಿಕೋನ. Perfectly fine, ಗೌರವಿಸುತ್ತೇನೆ. ಆದರೆ Just an observation ರೀತಿಯಲ್ಲಿ ನಾನಿದನ್ನು ಬರೆದಿದ್ದೇನೆ. ಇದು ನನ್ನ ದೃಷ್ಟಿಕೋನ ]







ಐದು ಕೋಟಿ ಕನ್ನಡಿಗರನ್ನು ಕೇಳೋದು ಬೇಡ . ಬರಗೂರರನ್ನು ಕೇಳಿದ್ರೆ ಸಾಕು 😉
ಖಂಡಿತವಾಗಿಯೂ ಇದು ನಿರಾಶಾವಾದ/ವ್ಯಂಗ್ಯ/ಕುಹಕ/ನಿರ್ಲಿಪ್ತತೆಯಂತೆಯೇ ಅನಿಸುತ್ತಿದೆ. ಆದರೆ ೧೦೦% ಸತ್ಯ.
Kanditha sari Joshiyavre.Janagala manodarmave hage. Tamma yeleyalli biddiro kattena nodo badlu bereyavra yeleyalliro nona huduko swabhava.Yella begane thannagagutte.
vishva kannada sammelanada avshyakathe yaarigide ? janarigo ? sarkarakko ? kannada nudi baduku karnataka ella kshetrgalu bhrashtavagiruvaaga jaati mata gumpugalaagiruvaaga ellavu daridra rajakeeyavagiruvaaga naadu nudi samskruti endu jana tale kedisikollodu yaake ? sari taane ?
ನೀವು ಹೇಳೋದು ಸರ್ಯಾಗೇ ಇದೆ….ಇದು ಯಾಕೋ ಆರೊಗ್ಯಕರ ಚರ್ಚೆ ಆಗೋ ಬದಲು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳೀತಾ ಇರೋದ್ ನೋಡಿದ್ರೆ ಬೇಸರ ಹುಟ್ಟತ್ತೆ…