ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ರಕ್ತಕ್ಕೆ ನಾನೇ ಸುಂಕ ತೆರಬೇಕಂತೆ!

‘ರಕ್ತದಾರಿ’ಗೆ ಸುಂಕ!!

-ಮಾಹಿ

ನಾನು
‘ರಕ್ತದಾರಿಗ’ಳು
ನೆತ್ತರ ಹಾದಿಯಲ್ಲೇ ಪಯಣ

ಬಾಲ್ಯ….
ನಾನಿನ್ನೂ ಎಳೆಮೊಗ್ಗು
ಅರಳಬೇಕೆಂದುಕೊಂಡಾಗಲೆ
ಅದ್ಯಾವುದೊ ಅಸುರ ಬಯಕೆಗೆ
ಸುಂಕ ಕಟ್ಟಿಸಿಕೊಂಡರು!

ಯೌವ್ವನ…
ಲೋಕಾರೂಡಿ “ಮೈ”ನೆರೆದು
ಕಾಮದ ಕಣ್ಣುಗಳಿಗೆ ಹಬ್ಬವಾಗಿ
ಅವರ ಆಸೆಗಳಿಗೂ
ನನ್ನದೇ ಸುಂಕ!!

ಪ್ರಾಯ….
ಅಟ್ಟಾಡಿಸಿ ಓಡಾಡಿಸಿ
ಹುಸಿ ಪ್ರೀತಿ ತೋರಿ, ಕರೆದು
‘ಕಾಮಾಟಿಪುರ’ಕ್ಕೆ ಅಟ್ಟಿದ
ಅವರ ತೆವಲಿಗೆ ಸುಂಕ ಕಟ್ಟಿಸಿಕೊಂಡರು!

ನಾನು ‘ರಕ್ತದಾರಿಗ’ಳು
ನೆತ್ತರ ಹಾದಿಯಲ್ಲಿಯೇ ನನ್ನ ಪಯಣ

“ಮಾಸ”ಕ್ಕೊಮ್ಮೆ ಮಾಸದ ಕಲೆ
ಅವರಿಗೇನು ಗೊತ್ತು?
ನನ್ನ ರಕ್ತದ ನರಳಾಟ
ನನ್ನ ರಕ್ತಕ್ಕೆ ನಾನೇ ಸುಂಕ ತೆರಬೇಕಂತೆ!
ತಿರಬೋಕಿಗಳು…

‍ಲೇಖಕರು avadhi

10 July, 2017

1 Comment

  1. BHUVANESHVARI

    Chennagide ri

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading