ಪಂಜು ಗಂಗೊಳ್ಳಿ
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಬಿಡಿಸಿದ ತೇಜಸ್ವಿಯವರ ಈ ಕ್ಯಾರಿಕೇಚರಿನಲ್ಲಿರುವ ನನ್ನ ಸಹಿಯನ್ನು ತೆಗೆದು, ಅದಕ್ಕೆ ಬಣ್ಣಗಿಣ್ಣ ಹಚ್ಚಿ, ಏನಾದರೂ ಸ್ಪೆಷಲ್ ಎಫೆಕ್ಟ್ ಕೊಟ್ಟು, ಪ್ರತೀವರ್ಷ, ಹೆಚ್ಚಾಗಿ ತೇಜಸ್ವಿಯವರ ಜನ್ಮದಿನದಂದು, ತಾವೇ ಬಿಡಿಸಿದ್ದು ಎಂದು ಭಾಸವಾಗುವಂತೆ ಕೆಲ ಕಾರ್ಟೂನಿಷ್ಟರು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಿರುತ್ತಾರೆ.
ಯಾರಾದರೂ ಕೇಳಿದರೆ ಮಾತ್ರ ತಮ್ಮದಲ್ಲ ಅಂತ ಉತ್ತರಿಸುತ್ತಾರೆ. ಒಬ್ಬನಂತೂ ನನ್ನ ಸಹಿಯನ್ನು ಮಾತ್ರವಲ್ಲದೆ, ತೇಜಸ್ವಿಯವರ ರುಂಡವನ್ನೂ ಕತ್ತರಿಸಿ ತೆಗೆದು, ಒಬ್ಬ ಲೇಖಕರ ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿ ಆ ಲೇಖಕರಿಗೆ ಕೊಟ್ಟಿದ್ದ.

ಆ ಲೇಖಕರು ಬಹಳ ಹೆಮ್ಮೆಯಿಂದ ಅದನ್ನು ಫೇಸ್ ಬುಕ್ಕಲ್ಲಿ ಹಂಚಿಕೊಂಡಿದ್ದರು. ಅದು ಆಕಸ್ಮಿಕವಾಗಿ ನನ್ನ ಕಣ್ಣಿಗೆ ಬಿದ್ದು, ಅವರಿಗೆ ನಿಜ ಸಂಗತಿ ಹೇಳಿದ ನಂತರ ಆ ಭೂಪ ಕ್ಷಮೆ ಕೇಳಿದನಂತೆ.
ಇದು ಸೆಪ್ಟಂಬರ್ 8 ತೇಜಸ್ವಿಯವರ ಜನ್ಮದಿನದಂದು ಸೃಷ್ಟಿಯಾದುದು. ಇದನ್ನು ಕಂಡ ಸ್ನೇಹಿತರೊಬ್ಬರು ಕಳಿಸಿಕೊಟ್ಟಿದ್ದರು.






0 Comments