ನನ್ನ ತಮ್ಮ ಶಂಕರ

-ಅಭಿನಂದನ್ ಎಸ್ asnblogger ಇತ್ತೀಚೆಗ ನಾನು ಓದಿದ ಪುಸ್ತಕ, ಅನಂತ ನಾಗ್ ರವರು ತಮ್ಮ “ತಮ್ಮ” ಶಂಕರ ನಾಗ್ ರವರ ಬಗ್ಗೆ ಬರೆದಿರುವ “ನನ್ನ ತಮ್ಮ ಶಂಕರ”. ಹೀಗೇ ಪುಸ್ತಕದ ಅಂಗಡಿಗೆ ಹೋದಾಗ ಕಣ್ಣಿಗೆ ಬಿದ್ದ ಪುಸ್ತಕ. ಹಾಗೇ ನೋಡೋಣ ಅಂತ ತಗೊಂಡೇ ಬಿಟ್ಟೆ.”ಈ ಬ್ಲಾಗ್” “ಆ ಪುಸ್ತಕ”ದ ವಿಮರ್ಶೆ ಅಲ್ಲ ಬಿಡಿ. ನನಗೆ ಓದಿದ್ದೆಲ್ಲಾ ಹಿಡಿಸೋ ವಯಸ್ಸು. “ಅಲ್ಲಿ” ಹಿಡಿಸಿದ ಒಂದೆರಡು ವಿಷಯ “ಇಲ್ಲಿ” ಬ್ಲಾಗೋಣ ಅಂತ ಅನ್ನಿಸಿತು. “ಹಾಗೇ ಸುಮ್ಮನೆ”.ಅಷ್ಟೆ. ಸಂಕೇತ್ ಸ್ಟೂಡಿಯೊ, ಕಮರ್ಶಿಯಲ್/ಆರ್ಟ್ ಪಿಕ್ಚರ್, ನಾಟಕ, ಕರಾಟೆ, ರಾಜಕೀಯ, ಕಂಟ್ರಿ ಕ್ಲಬ್, ಲೋ ಕಾಸ್ಟ್ ಮಾಡಲ್ ಹೋಮ್ಸ್, ಅಮ್ಯೂಸ್ಮೆಂಟ್ ಪಾರ್ಕ್, ನಂದಿ ಬೆಟ್ಟಕ್ಕೆ ರೋಪ್ವೇ, ಮಾಲ್ಗುಡಿ ಡೇಸ್, ಅಂಡರ ವಾಟರ್ ಶೂಟಿಂಗು… ಹೀಗೇ ನಮ್ಮ “ಜಾಕಿ” ತರ “ಮೇಕೆ ತಿನ್ನದ ಸೊಪ್ಪೇ ಇಲ್ಲ, ಇವನು ತಿನ್ನದ ಮೇಕೆ ಇಲ್ಲ” ಹಾಗೆ ನಮ್ಮ ಶಂಕರ್ ನಾಗ್. ಇದ್ದ ಮೂವತ್ತೈದು ವರ್ಷಾನ ಒಬ್ಬ ಮನುಷ್ಯ ಇಷ್ಟೊಂದು “ಮೇಕೆ” ತಿನ್ನೋದ್ರಲ್ಲಿ (ಪನ್ ಇಂಟೆಂಡೆಡ್) ಕಳೆದು ಅಷ್ಟೇ ಫಾಸ್ಟಾಗಿ “ಶಿವ” ಅಂತ ಹೇಳಿದ್ದು..”ಇದು ಸಾಧ್ಯ” ಅಂತ ಮಾತ್ರ ಹೇಳ್ಬೋದು. ನೋ ಅದರ್ ಕಾಮೆಂಟ್ಸ್. ಪುಸ್ತಕದಲ್ಲಿ ಒಂದು ಕಡೆ, ಅನಂತ್ ಹೀಗೇ, ಮಾತಿಗೆ “ದೇವ್ರಿದಾನೆ” ಅನ್ನೋ ರೀತೀಲಿ ಶಂಕರ್ ಗೆ ಏನೋ ಹೇಳ್ದಾಗ ಶಂಕರ್, “ಅದು ಸರಿ. ದೇವ್ರಿದಾನೆ. ಬಟ್ ನನಗೆ ಅವನ ಪೇಸ್ ಸೆಟ್ ಆಗ್ತಿಲ್ಲ. ಐ ವಾಂಟ್ ಹಿಮ್ ಟು ಹರ್ರಿ”. ಅನ್ನೋ ರೀತೀಲಿ ರೆಸ್ಪಾಂಡ್ ಮಾಡ್ತಾರೆ. ದಟ್ ವಾಸ್ ಹಿಸ್ ಪೇಸ್ ಅಂತ ನನಗೆ ಈ ಪುಸ್ತಕ ಓದಿದಾಗ ತಿಳೀತು. ಪುಸ್ತಕದಲ್ಲಿ ನನಗೆ ತುಂಬಾ ಹಿಡಿಸಿದ್ದು “ಆ” ಭಾಗ. ಬ್ರದರ್ಸ್ ಇಬ್ರೂ ನಾಟಕದ ಹಿನ್ನಲೆಯವರೇ ಅಂತೆ. ಸಿನೆಮಾಗೆ ಕಾಲಿಟ್ಟ ಮೇಲೆ, ಶಂಕರ ಆ ಗೀಳನ್ನ ಎಷ್ಟರ ಮಟ್ಟಿಗೆ ಕಾಪಾಡಿಕೊಂಡು, ಬೆಳೆಸಿಕೊಂಡು ಬಂದರು ಅಂತ ಅನಂತ್ ಚೆನ್ನಾಗಿ ವಿವರಿಸಿದಾರೆ(ದಯವಿಟ್ಟು ಇದನ್ನ ವಿಮರ್ಷೆ ಅಂದ್ಕೋಬೇಡೀಪ್ಪ). ಹಾಗೇ, ಅವರಿಗೆ ತಮ್ಮನ ಥರ ಎರಡನ್ನೂ ನಿಭಾಯಿಸೋಕ್ಕೆ ಆಗ್ಲಿಲ್ಲ ಅಂತಾನೂ ಹೇಳ್ತಾರೆ. ಅದಕ್ಕೆ ರಂಗಶಂಕರನೇ ಪ್ರೂಫು. ಹೀಗೇ, ಅವರಿಬ್ಬರ ಬಾಲ್ಯ, ತಂದೆ-ತಾಯಿ, ಆನಂದಾಶ್ರಮ, ಬಾಂಬೆ ಜೀವನ, ಓದು-ಬರಹ, ಸಿನೇಮಾ ಪರಿಚಯ, ಕೆನಡ ಪ್ರವಾಸ, ಮೇಲೆ ಲಿಸ್ಟ್ ಮಾಡಿರೋ “ಮೇಕೆ”ಗಳ “ಸಾಕಾಣಿಕೆ”, ಮಾಲ್ಗುಡಿ ಹುಟ್ಟಿದ ಕಥೆ, ಗೋಕಾಕ್ ಚಳುವಳಿ ಬಗ್ಗೆ ಪುಸ್ತಕದಲ್ಲಿ ಒಳ್ಳೆ ವಿವರಣೆ ಇದೆ(ದಯವಿಟ್ಟು ಇದನ್ನ ವಿಮರ್ಷೆ ಅಂದ್ಕೋಬೇಡೀಪ್ಪ). ಶಂಕರ ಹೇಗೆ ಸಡನ್ನಾಗಿ “ಎಕ್ಸಿಟ್” ಆದ್ರೊ, ಪುಸ್ತಕ ಕೂಡ ಹಾಗೆ ಸಡನ್ನಾಗಿ ಮುಗಿಯುತ್ತೆ. ಆ ರೀತಿಲಿ “ಆಕ್ಸಿಡೆಂಟ್”ನ ಶಾಕ್ ನಮ್ಮನ್ನೂ ಕಾಡದೆ ಬಿಡೋದಿಲ್ಲ. “ನಾಗ್” ಫ್ಯಾಮಿಲಿಗೆ ಆ ಆಕ್ಸಿಡೆಂಟ್ ಎಷ್ಟು ಸಡನ್ನಾಗಿ ಬಂದು, ಹೇಗೆ ಅಪ್ಪಳಿಸಿತು ಅನ್ನೋದು, ಪುಸ್ತಕದ ಮುಗಿಯುವಿಕೆಯಿಂದ ಚೆನ್ನಾಗಿ ಗೊತ್ತಾಯ್ತು. ಓದೌರು ಈ ಪುಸ್ತಕಾನೂ ಓದಿ. ಶಂಕರ್ ನಾಗ್ ಮೇಲಿನೇ ಅಭಿಮಾನದಿಂದಲ್ಲದಿದ್ರೂ, ಒಬ್ಬ ಕ್ರಿಯಾಶೀಲ ವ್ಯಕ್ತಿ ಹೇಗೆ ಅಷ್ಟು ಕ್ರಿಯಾಶೀಲರಾಗಿದ್ದರು, ಎಷ್ಟು ಕ್ರಿಯಾಶೀಲರಾಗಿದ್ರು, ಅಂತ ತಿಳ್ಕೋಳಕ್ಕೆ ಅಂತ ಓದಿ]]>

‍ಲೇಖಕರು G

January 21, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: