ಟಿ ಎನ್ ಸೀತಾರಾಮ್
ನನ್ನ ಗುರು ಲಂಕೇಶ್ ಮೇಷ್ಟ್ರು ಪಲ್ಲವಿ ಚಿತ್ರ ತೆಗೆಯಬೇಕೆಂದು ಶಿವಮೊಗ್ಗೆಯ ಮನೆ ಮಾರಿದ್ದರು.
ನಾಯಕನ ಪಾತ್ರಕ್ಕಾಗಿ ಅವರು ಹುಡುಕಾಟ ನಡೆಸಲಿಲ್ಲ.
ಹಳ್ಳಿಯಲ್ಲಿ ಬೇಸಾಯ ಮಾಡಿಕೊಂಡಿದ್ದ ನನ್ನನ್ನು ಕರೆಸಿ ನಾಯಕನ ಪಾತ್ರ ವಹಿಸಲು ಹೇಳಿದರು
” ನಾನು ಹೀರೋ ಪಾತ್ರಕ್ಕೆ ಸರಿ ಇಲ್ಲ ಸರ್… ನಾನು ನೋಡಲು ಚೆನ್ನಾಗಿಲ್ಲ…. MOD ಆಗಿ ಡ್ರೆಸ್ ಮಾಡಲು ಬರುವುದಿಲ್ಲ
ಹಳ್ಳಿಯವನು… ಸ್ವಲ್ಪ ಸೊಟ್ಟಗೆ ನಡೆಯುತ್ತೇನೆ.. ನಾನು ಬೇಡ ” ಎಂದು ಅವರಿಗೆ ಹೇಳಿದೆ.

ಅವರು ಕೊಟ್ಟ ಉತ್ತರ ನನ್ನನ್ನು ನೂರು ರೀತಿಯಲ್ಲಿ ಬದಲಾಯಿಸಿತು.
“ನನ್ನ ಹೀರೋ ಸೊಟ್ಟಗೆ ಕಣ್ರೀ ನಡೆಯೋದು… ಅವನು ನೋಡೋಕೆ ಚೆನ್ನಾಗಿರಲ್ಲ…ನನಗೆ chocolate hero ಗಳು ಬೇಡ… ಸುಮ್ಮನೆ ಹೇಳಿದಷ್ಟು ಕೇಳು” ಎಂದರು.
ಸುಂದರ ಕಾವ್ಯದ ರೀತಿಯ ಚಿತ್ರ ಮಾಡಿ ಗೆದ್ದರು…
ನನಗೆ ಸಮಾಜಮುಖಿ ಚಿಂತನೆಯ ಬೆಳಕು ಕೊಟ್ಟವರು… ಒಳ ಲೋಕದ ಘನತೆ ಹೇಗೆ ಕಾಪಾಡಿಕೊಳ್ ಬೇಕೆಂದು ಹೇಳಿದವರು….ಬೀಗ ಬಾರದು ಮತ್ತು ಬಾಗಬಾರದು ಎಂದು ತಿಳಿಸಿದವರು… ನನ್ನ ಬದುಕಿನ ಮೊದಲ ಮತ್ತು ನಂತರದ ಮೆಟ್ಟಿಲುಗಳನ್ನು ಹತ್ತಿಸಿದವರು… ನಾನು ಅವರ ಋಣ ತೀರಿಸಲಾರದಷ್ಟು ಅರಿವನ್ನು ಕೊಟ್ಟವರು
ಇಂದು ಅವರ ಹುಟ್ಟುಹಬ್ಬ… ನೆನಪು ನೋವು ಮತ್ತು ಸಂತೋಷ ಎರಡನ್ನೂ ಕೊಡುತ್ತದೆ….






ಮೇಷ್ಟ್ರು ಅನೇಕ ಗುಣಗಳಲ್ಲಿ ನಮಗೂ ಸಹ ಗುರುಗಳು. ದೊಡ್ಡಗಂಟಲಲ್ಲಿ ಮಾತನಾಡುವ ಪೊಳ್ಳು ವ್ಯಕ್ತಿಗಳನ್ನು ನೋಡಿದಾಗಲೆಲ್ಲಾ ಲಂಕೇಶರು ಹೇಳಿದ ಮಾತು ನನಗೆ ನೆನಪಾಗುತ್ತೆ. ಮನುಷ್ಯರ ಸ್ವಭಾವ ಗುರುತಿಸುವುದು ನಾನು ಕಲಿತದ್ದೇ ಲಂಕೇಶರ ಬರಹಗಳಿಂದ. ಲಂಕೇಶ್ ಪತ್ರಿಕೆ ಮತ್ತು ಲಂಕೇಶರ ಕತೆಗಳು ಹಾಗೂ ನೀಲು ಪದ್ಯಗಳು ಕಲಿಸಿಕೊಟ್ಟ ಪಾಠ ದೊಡ್ಡದು.
Lankesh, innu ten years badukiddare karnatakada cultural, and political, chitra hegiruthittu anno curiosity, yavagalu iruthe. 80 mathu 90, ra dasakada ella chinthanasheela yuvaka yuvathiyara ‘guru’ namma lankesh.
ನನ್ನಲ್ಲಿ ವ್ಯಚಾರಿಕಥೆ ಸ್ವ ವಿಮರ್ಶೆ ಪ್ರಶ್ನೆ ಮಾಡುವಧನು ಕಲಿಸಿದ್ಹೆ ಲಂಕೇಶ್ ಮೇಸ್ಟ್ರು ಅವರಿಗೆ ನನ್ನ ಅನಂತ ನಮನಗಳು.
ಲಂಕೇಶರೆಂಬುವುದು ವ್ಯಕ್ತಿಯಲ್ಲ,,,,,,,, ಅವರೊಂದು ಸಮುದ್ರ,