ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನನ್ನ ಕಾಡಿದ್ದು ಸಿನಿಮಾ ಅಲ್ಲ ಪುಸ್ತಕ’, ಸುಮಾ ಬರೀತಾರೆ

ಬಿಳಿಯರು ಕರಿಯರ ರಕ್ತ ಮಾಂಸಗಳ ಜೊತೆ ಆಟವಾಡಿದರು

ಸುಮ ಮುದ್ದಾಪುರ್

ನಾನು ರೂಟ್ ಪುಸ್ತಕದ ಅನುವಾದಿತ ಪುಸ್ತಕವಾದ ತಲೆಮಾರನ್ನು ಓದಿದೆ. ಇದರಲ್ಲಿ ಆಫ್ರಿಕಾದ ಬುಡಕಟ್ಟಿನ ಏಳು ತಲೆಮಾರುಗಳ ಹುಡುಕಾಟ ಇದೆ. ಆಫ್ರಿಕಾ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಮೊಟ್ಟ ಮೊದಲು ಬರುವುದು ಅಲ್ಲಿಯ ಕಡುಗಪ್ಪು ಮತ್ತು ದಷ್ಟ-ಪುಷ್ಟವಾದ ಜನಾಂಗ. ಆಫ್ರಿಕಾದಲ್ಲಿ ಹಲವಾರು ಬುಡಕಟ್ಟು ಜನಾಂಗಗಳಿವೆ. ಬಗೆ ಬಗೆಯ ಆಚರಣಾ ಪದ್ದತಿಗಳಿವೆ. ಅಲ್ಲಿಯ ಜನರನ್ನು ಕರಿಯರು ಎಂದು ಕರೆಯುತ್ತಾರೆ. ಇವರು ಶ್ರಮ ಜೀವಿಗಳು. ಅವರದೇ ಆದ ಪದ್ದತಿಗಳು, ಆಚರಣೆಗಳು, ವಿಶಿಷ್ಟ ರೀತಿಯ ಶಿಕ್ಷಣ ಪದ್ದತಿಗಳು ಇದ್ದವು. ಅವರದು ಬುಡಕಟ್ಟು ಜನಾಂಗವಾದ್ದರಿಂದ ಅವರು ಕಾಡುಗಳಲ್ಲಿ ಪ್ರಾಣಿ, ಪಕ್ಷಿಗಳ ಜೊತೆಯಲ್ಲಿ ಬೆಳೆದವರು. ಅವರದೇ ಆದ ಸ್ವಚ್ಚಂದವಾದ ಬದುಕನ್ನು ಕಟ್ಟಿಕೊಂಡು ಬದುಕಿದವರು. ಬಿಳಿಯರು ಯಾವಾಗ ಆಫ್ರಿಕಾ ಖಂಡದ ಮೆಲೆ ಕಾಲಿಟ್ಟರೊ ಆಗಲೇ ಶುರುವಾಯಿತು ಅವರ ಅಂಧಕಾರದ ಬದುಕು. ಕರಿಯರ ಸಾಮಥ್ರ್ಯವನ್ನು ನೋಡಿ ಬೆರಗಾದ ಬಿಳಿಯರು ಅವರನ್ನುವ ತಮ್ಮ ಕೆಲಸಗಳಿಗೆ ಗುಲಾಮರಾಗಿ ಬಳಸಿಕೊಳ್ಳಬೇಕು ಎಂದು ತೀರ್ಮಾನಿಸಿದರು. ಆಗ ಶುರುವಾಯಿತು ಕಪ್ಪು ಜನರ ಸಾಕಾಣಿಕೆ. 1619ರಲ್ಲಿ ಆಫ್ರಿಕಾದವರನ್ನು ಆಮೇರಿಕಾಕ್ಕೆ ಕದ್ದು ತರುವ ಪದ್ದತಿ ಶುರುವಾಯಿತು.

ಅಮೇರಿಕಾದಲ್ಲಿ ಆರಂಭದಲ್ಲಿ ಕೇವಲ ಇಪ್ಪತ್ತರಷ್ಟಿದ್ದ ಗುಲಾಮರ ಸಂಖ್ಯೆ, ತದನಂತರದ ದಿನಗಳಲ್ಲಿ (1810 ರ ಹೊತ್ತಿಗೆ) ಹತ್ತು ಲಕ್ಷವನ್ನು ದಾಟಿತ್ತು. ಅನೇಕ ಜನರನ್ನು ಒತ್ತಾಯ ಪೂರ್ವಕವಾಗಿ ಬಲವಂತದಿಂದ ಎಳೆದುಕೊಂಡು ಬರಲಾಯಿತು. ಅವರು ಬರಲು ಒಪ್ಪದಿದ್ದಾಗ ಅವರಿಗೆ ನಾನಾ ರೀತಿಯ ಚಿತ್ರ ಹಿಂಸೆಯನ್ನು ಕೊಟ್ಟು, ಪ್ರಾಣಿಗಳನ್ನು ಬೇಟೆ ಆಡುವಂತೆ ಹಿಡಿದುಕೊಂಡು, ಹಡಗಿನ ಮೂಲಕ ವಸ್ತುಗಳಂತೆ ಸಾಗಿಸಿದರು. ಕರಿಯ ಜನರ ಮಾರಾಟವನ್ನು ಒಂದು ಲಾಭದಾಯಕ ಹುದ್ದೆಯನ್ನಾಗಿಸಿಕೊಂಡರು. ಕಪ್ಪು ಜನರಿಲ್ಲವೆಂದರೆ ಬಿಳಿಯರು ಬದುಕುವು ಆಸಾದ್ಯವಾಗಿತ್ತು. ಆಗ ಮತ್ತಷ್ಟು ಕರಿಯರ ಸಾಕಾಣಿಕೆ ಹೆಚ್ಚಾಯಿತು. ಅವರ ಬೇಡಿಕೆ ಹೆಚ್ಚಾದಂತೆ ಅವರ ಮೇಲಿನ ದೌರ್ಜನ್ಯ ಕೂಡ ಹೆಚ್ಚಾಯಿತು. ಅವರನ್ನು ಮನುಷ್ಯರು ಅಂತಾ ಕೂಡ ನೋಡದೆ ಚಿತ್ರ ವಿಚಿತ್ರವಾದ ಹಿಂಸೆಗಳನ್ನು ಕೊಟ್ಟರು. ‘ಬಿಳಿಯರು ಕರಿಯರ ರಕ್ತ ಮಾಂಸಗಳ ಜೊತೆ ಆಟವಾಡಿದರು’. ಅವರು ಕೊಡುತ್ತಿದ್ದ ಹಿಂಸೆಯನ್ನು ತಾಳದೇ, ಅವರ ವಿರುದ್ಧ ಮಾತನಾಡಿದವರನ್ನು ಅಥವಾ ದಂಗೆ ಎದ್ದವರನ್ನು ನೇಣು ಹಾಕಿದರು. ಬಿಳಿಯರೊಂದಿಗಿನ ‘ಕಪ್ಪು ಜನರ’ ಬದುಕು ಕತ್ತಿಯ ಮೇಲೆ ನಡೆಯುವ ಸರ್ಕಸ್ನಂತಿತ್ತು.ಕರಿಯರ ದುಡಿಮೆಯಲ್ಲಿ ಬಿಳಿಯರು ವೈಭವದ ಜೀವನ ನಡೆಸಿದರು. ಕರಿಯರನ್ನು ಹಿಡಿದು ತರುವುದು ಮತ್ತು ಮಾರಾಟ ಮಾಡುವುದು ಒಂದು ರೀತಿಯ ಉದ್ಯಮವಾಗಿತ್ತು. ಯುರೋಪಿಯನ್ನರು ಅನೇಕ ಕಡೆ ಕರಿಯನ್ನು ಮಾರುವ ಶಾಖೆಗಳನ್ನು ಪೈಪೋಟಿಯಿಂದ  ತೆರೆದರು.

ಈ ರೀತಿಯ ಮಾರಾಟದಲ್ಲಿ ಆಫ್ರಿಕಾದ ‘ಮಾಂಡಿಂಕಾ’ ಬುಡಕಟ್ಟಿನ ಕಿಂಟಾ ವಂಶದವನಾದ ‘ಕುಂಟಾ ಕಿಂಟೆ’ ಎನ್ನುವ ವ್ಯಕ್ತಿಯೂ ಇದ್ದನು. ಅವನು ಆಫ್ರಿಕಾದ ಗಾಂಬಿಯಾ ದ್ವೀಪದಿಂದ ಬಿಳಿಯರ ನಾಡಾದ ‘ಅನಾಪೊಲಿಸ್’ಗೆ ಹೇಗೆ ಬಂದ?, ಬಿಳಿಯರು ಅವನಿಗೆ ಕೊಟ್ಟ ಹಿಂಸೆಗಳೇನು?, ಅಲ್ಲಿಂದ ತನ್ನ ನಾಡಿಗೆ ತಪ್ಪಿಸಿಕೊಂಡು ಹೊಗಲು ಪ್ರಯತ್ನ ಪಟ್ಟಾಗ, ತನ್ನ ಕಾಲನ್ನು ಕಳೆದುಕೊಂಡು ಅನುಭವಿಸಿದ ನೋವು, ಯಾತನೆಗಳೇನು?, ಅವನ ನಂತರ ಅವನ ತಲೆ ಮಾರುಗಳು ಬಿಳಿಯರ ನಾಡಿನಲ್ಲಿ ಬೆಳೆದು ಬಂದ ಬಗೆ, ಅವರು ಅನುಭವಿಸಿದ ನೋವು ನಲಿವುಗಳನ್ನು ‘ರೂಟ್’ ಪುಸ್ತಕದಲ್ಲಿ ಕಣ್ಣಿಗೆ ಕಟ್ಟುವಂತೆ ಬರೆಯಲಾಗಿದೆ. ಅದನ್ನು ಎಲ್ಲಿಯೂ ಅರ್ಥ ಕಳೆದುಕೊಳ್ಳದ ರೀತಿಯಲ್ಲಿ ಬಂಜಗೆರೆ ಜಯಪ್ರಕಾಶ ಕನ್ನಕಕ್ಕೆ ತಲೆಮಾರು ಎಂಬ ಶಿಷರ್ಿಕೆಯಲ್ಲಿ ಅನುವಾದಿಸಿದ್ದಾರೆ.  ಬಿಳಿಯರು ಕಪ್ಪು ಮಹಿಳೆಯನ್ನು ತಮ್ಮ ಲೈಂಗಿಕ ಸುಖ ಬೋಗಕ್ಕಾಗಿ ಮತ್ತು ಮಕ್ಕಳನ್ನು ಹಡೆಯುವ ಯಂತ್ರವಾಗಿ ಬಳಸಿಕೊಂಡರು. ಅಲ್ಲದೇ ಕಪ್ಪು ಪುರುಷರನ್ನು ಅವರ ಹೊಲ-ಮನೆಗಳಲ್ಲಿ ಬಿಟ್ಟಿ ಚಾಕರಿ ತೊಡಗುವಂತೆ ಮಾಡಿದರು. ಒಬ್ಬನಿಂದ ಇನ್ನೊಬ್ಬನಿಗೆ ಅವನಿಂದ ಮತ್ತೊಬ್ಬನಿಗೆ ಮಾರುತ್ತಾ ಗುಲಾಮಗಿರಿಯನ್ನು ಆಚರಣೆ ಮಾಡಿದರು.ನೀವು ಮಹತ್ತಾಗಿ ಹೇಳಿಕೊಳ್ಳುವ ನಿಮ್ಮ ಸ್ವಾತಂತ್ರ್ಯ ಒಂದು ಅಪವಿತ್ರ ಬಂಧನ ….

ನಿಮ್ಮ ನಿರಂಕುಶತೆಯನ್ನು ಮರೆಗಿಟ್ಟು ಇತರರ ನಿರಂಕುಶತೆಯನ್ನು ಹಂಗಿಸುವುದು ನಿಮ್ಮ ಅಹಂಕರಕ್ಕೆ ನಿದರ್ಶನ; ಸ್ವಾತಂತ್ರ್ಯ ಸಮಾನತೆ ಎಂದು ನೀವು ದನಿಯೆತ್ತಿ ಕಿರುಚುವ ಕೂಗಾಟಗಳೆಲ್ಲಾ ಹಾಸ್ಯಾಸ್ಪದ; ನಿಮ್ಮ ಪ್ರಾರ್ಥನೆಗಳು, ನಿಮ್ಮ ಬೈಬಲ್ ಪ್ರವಚನಗಳು, ನಿಮ್ಮ ಕೃತಜ್ಞತಾರ್ಪಣೆ, ನಿಮ್ಮ ಮತಾಚರಣೆಗಳೆಲ್ಲ ಮೋಸ, ದಗಾ, ನಟನೆ, ಟೊಳ್ಳು, ನಿಮ್ಮ ಘೋರ ಅಪರಾದಗಳನ್ನು ಮುಚ್ಚಿ ಹಾಕುವ ಮುಸುಕು ಎಂದು ಡಗ್ಲಸ್ ಅಮೇರಿಕದ ಕಪ್ಪು ವರ್ಣೀಯನ ಪರವಾಗಿ ಘರ್ಜಿ ಸಿದ. ಈ ಮಾತುಗಳು ಕಪ್ಪು ವರ್ಣೀಯನ ಮನಸ್ಸಿಗೆ ಹಿಡಿದ ಕನ್ನಡಿಯಂತಿದ್ದವು.ಈ ಅಮಾನುಷವಾದ ಕಪ್ಪು ಗುಲಾಗಿರಿಯನ್ನು ಹೊಗಲಾಡಸಲು ಅನೇಕ ಹೊರಾಟಗಳು ನಡೆದವು. ಸಾವಿರಾರು ಸಂಖ್ಯೆಯಲ್ಲಿ ಕರಿಯರ ಮಾರಣ ಹೋಮ ನಡೆಯಿತು. ಇದು ಬರೀ ಬಿಳಿಯರ ಮತ್ತು ಕಪ್ಪು ಜನರ ಮಧ್ಯೆ ನಡೆದ ಯದ್ಧವಲ್ಲ, ಎರಡು ಖಂಡಗಳ ನಡುವೆ ನಡೆದ ಯುದ್ಧ. ಎರಡು ಶತಮಾನಗಳ ಕಾಲ ಅನುಭವಿಸಿದ ನೋವು, ಹಿಂಸೆ, ಅವಮಾನಗಳ ಸ್ಪೋಟ ಎನ್ನಬಹುದು. ನೆಲ್ಸನ್ ಮಂಡೇಲರು ಕರಿಯರಿಗಾಗಿಯೇ ತನ್ನ ಜೀವಮಾನವನ್ನು ಮೀಸಲಿರಿಸಿದ್ದರು. ಅಲೆಕ್ಸ್ ಹೇಲಿ ತನ್ನ ರೊಟ್ ಪುಸ್ತಕದಲ್ಲಿ ಬಿಳಿಯರಿಂದ ಕಪ್ಪು ಜನರು ಅನುಭವಿಸಿದ ಹಿಂಸೆಯನ್ನು ಮತ್ತು ಬಿಳಿಯರ ನಾಡಿನಲ್ಲಿ ಆ ಕಪ್ಪು ಜನರ ಸಂತತಿ ಬೆಳೆದು ಬಂದ ಬಗೆ ಯನ್ನು ಉತ್ತಮವಾಗಿ ಕಟ್ಟಿ ಕೊಟ್ಟಿದ್ದಾರೆ. ಇದು ನನ್ನ ಮೆಚ್ಚಿನ ಪುಸ್ತಕಗಳಲ್ಲಿ ಒಂದಾಗಿದೆ.

‍ಲೇಖಕರು avadhi

5 February, 2014

2 Comments

  1. p.n.rao

    Madam
    Please see the movie “D’Jango .. unchained “. This film will show you what you read in root.

  2. ಮಂಜುನಾಥ ದಾಸನಪುರ

    ನನಗೆ ತುಂಬಾ ಕಾಡಿದ, ಕಾಡುತ್ತಿರುವ ಕೃತಿ ತಲೆಮಾರು. ಕಾದಂಬರಿಯಲ್ಲಿ ಬರುವ ಕುಂಟಾ ತನ್ನ ಊರಿನ ಬಗ್ಗೆ ನೆನೆಪು ಮಾಡಿಕೊಳ್ಳುವಾಗ, ಅವನು ವ್ಯಕ್ತಪಡಿಸುವ ಮೂಕ ವೇದನೆಗಳು ನನ್ನನ್ನು ಅವನಷ್ಟೇ ಕಾಡಿಸಿದೆ. ಅಳಿಸಿದೆ. ಕಿಜ್ಜಿಯ ಪ್ರೇಮದಲ್ಲಾದ ಸೋಲು, ಕೋಳಿ ಜಾರ್ಜ್್ವನ ಪ್ರೀತಿ….ಹೀಗೆ ಕೃತಿಯ ಪ್ರತಿಯೊಂದು ಪಾತ್ರಗಳು ಬದುಕಿನ ಬಗ್ಗೆ ಹೊಸ ನೋಟವನ್ನು, ಸೂಕ್ಷ್ಮತೆಯನ್ನು, ಸಂವೇದನೆಯನ್ನು, ಹೊಸ ಭರವಸೆಯನ್ನು ನೀಡುವಂತಹದ್ದು…..ಚೆನ್ನಾಗಿ ನಿರೂಪಿಸಿದ್ದೀರಾ…….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading