ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನನ್ನ ಕವಿತೆಯ ಹಿಂದಿನ ಕಥನ’ ಅಪರೂಪದ ಕೃತಿ

ವಿಜಯಭಾಸ್ಕರ‌ ರೆಡ್ಡಿ ಮುನ್ನೂರ್

ಆತ್ಮೀಯರೆ,

ಕನ್ನಡದಲ್ಲಿ ಬಹುಶಃ ಇಂಥ ಕೃತಿ ಅಪರೂಪ.

ಇದೊಂದು ವಿಶಿಷ್ಟ ಪ್ರಯೋಗ.

ಕವಿತೆಯನ್ನು ತುಂಬ ಪ್ರೀತಿಸುವ ಕವಿವರ್ಯರು, ತಮಗೆ ಕಾಡಿರುವ,‌ ಪೀಡಿಸಿರುವ, ನಿತ್ಯನಿರಂತರ ನೆನಪಿಗೆ ಬರುವ ತಮ್ಮದೇ ಕವಿತೆಯೊಂದರ ಬೆನ್ನುಹತ್ತಿದ್ದಾರೆ.

25 ಜನ ಕವಿಗಳು..

ತಮಗೆ ಕಾಡಿರುವ ಕವಿತೆಯನ್ನು ವಿಶ್ಲೇಷಣೆ ಮಾಡಿಲ್ಲ. ಕವಿತೆಯ ಆಶಯವನ್ನು ಹೇಳಿಲ್ಲ. ಕವಿತೆಯ ಹುಟ್ಟಿನ ಹಿಂದಿನ ಕಥನವನ್ನು ಬಿಚ್ಚಿಟ್ಟಿದ್ದಾರೆ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳ 25 ಜನ ಕವಿವರ್ಯರು ತಮಗೆ ಕಾಡಿರುವ ಸಂಗತಿಯನ್ನು ಕವಿತೆಯ ಹಿಂದಿನ ಕಥನದಲ್ಲಿ ಕಟ್ಟಿಕೊಟ್ಟಿದ್ದಾರೆ.

ವಾರದಲ್ಲಿ ಈ ಕೃತಿ ಪ್ರಿಂಟಾಗಿ ಕೈಸೇರಲಿದೆ.‌

ಪ್ರಯೋಗ ಮಾಡುವಾಗ ಬುಕ್ ಸೈಜು, ಪುಟವಿನ್ಯಾಸ ಎಲ್ಲವೂ ಹೊಸದೇ ಇರಬೇಕು. ಆ ಎಚ್ಚರ ಇಟ್ಟುಕೊಂಡೇ ರೂಪಿಸಲಾಗಿದೆ.‌

ರಾಷ್ಟ್ರಕೂಟ ಪುಸ್ತಕ ಮನೆ ಎಂಬುದು ನಮ್ಮದೇ ಪ್ರಕಾಶನ.‌ ಅದರಡಿ ಇದು ಆರನೇ‌ ಕೊಡುಗೆ.

ಪುಸ್ತಕ ಓದುವ ಆಸಕ್ತರು ಸಂಪರ್ಕಿಸಬಹುದು.

ಮಹಿಪಾಲರೆಡ್ಡಿ ಮುನ್ನೂರ್
ಸಂಪಾದಕರು
9731666052

‍ಲೇಖಕರು Avadhi

25 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading