ನನ್ನ ಓಣಿ ಒಂದು ಮಿನಿಭಾರತ..

 

ಹನುಮ ಜಯಂತಿ, ಈದ್ ಮಿಲಾದ್ ಹಾಗೂ ಕ್ರಿಸ್ಮಸ್ ಒಂದರ ಬೆನ್ನ ಹಿಂದೆ ಒಂದು ಬಂದವು.

ಯಾರೋ ಉದ್ಘರಿಸಿದರು ವಾಹ್! ಆಮರ್, ಅಕ್ಬರ್, ಅಂತೋಣಿ ಅಂತ..

ತಕ್ಷಣ ನಮಗೆ ನೆನಪಾದದ್ದು ಉದಯ ಕುಮಾರ್ ಹಬ್ಬು ಅವರು ಹಂಚಿಕೊಂಡಿದ್ದ ಈ ನೆನಪು. ಓದಿ

uday kumar habbu

ಉದಯ ಕುಮಾರ್ ಹಬ್ಬು

ನಮ್ಮ ಕುಟುಂಬಕ್ಕೂ ಮತ್ತು ಮುಸ್ಲಿಮ್ ಸಮುದಾಯಕ್ಕೂ ಅತಿ ಹಿಂದಿನ ನಂಟು. ನಮ್ಮ ತಂದೆ ಊರ ಶಾನುಭೋಗರಾಗಿದ್ದರು. ಅವರ ದಫ್ತರನ್ನು ಕಟ್ಟು ಮಾಡಿ ಹೊರಲು ಒಬ್ಬ ಉಗ್ರಾಣಿ.

ನಮ್ಮ ತಂದೆಯ ಉಗ್ರಾಣಿ ಹುಸೇನ್ ಎಂಬ ಭಾವುಕ ವ್ಯಕ್ತಿ. ನಮ್ಮ ಮನೆಯಲ್ಲಿಯೆ ಉಂಡು, ನಮಗೆ ಅವರ ಹಬ್ಬಗಳಂದು ಸಿಹಿತಿಂಡಿ ತಂದು ನಮಗೆ ಹುಸೇನ್ ಮಾಮಾ ಆಗಿದ್ದರು. ಮತ್ತೆ ನನ್ನ ಬಾಲ್ಯದಲ್ಲಿ ಮೊಹರಮ್ ಹಬ್ಬದಂದು ಪೀರ್ ಕಟ್ಟುವ ಮೆರವಣಿಗೆ ಇರುತ್ತಿತ್ತು. ನಾನು ಆ ಪೀರ್ ಕಟ್ಟಿ ಕುಣಿಯುತ್ತಿದ್ದೆ.

ಮತ್ತೆ ಕಾಲೇಜಿನಲ್ಲಿ ನಮ್ಮೂರಿನ ಹಕೀಮ್ ನನ್ನ ಮಿತ್ರನಾದ. ಅವನ ತಂದೆ ಗಾಂವಟಿ ಔಷಧಿಗಳನ್ನು ತಯಾರಿಸುತ್ತಿದ್ದರು. ಅವರಿಗೆ ಮನೆತುಂಬ ಮಕ್ಕಳು. ನಮ್ಮ ಅಣ್ಣಂದಿರು ಹಕೀಮನ ವಿದ್ಯಭ್ಯಾಸದ ವೆಚ್ಚವನ್ನು ಭರಿಸಿದ್ದರು. ಮತ್ತೆ ಎಮ್ ಏ ಮಾಡುವಾಗ ಹಕೀಮ್ ನನ್ನ ಜೊತೆ ರೂಮಿನಲ್ಲಿ ಇದ್ದ. ಅವನ ಇಡೀ ಖರ್ಚನ್ನು ನಮ್ಮಣ್ಣ ಭರಿಸಿದರು.

ಅವನ ತಂಗಿಯ ಗಂಡ ಅಕ್ಬರ್ ನಮ್ಮ ಹಾಗೆ ನಮ್ಮ ಮನೆ ಮಾತಾಡುತ್ತ ನಮ್ಮ ಮನೆಯ ಸದಸ್ಯನೆ ಆಗಿಬಿಟ್ಟಿದ್ದಾನೆ. ಹಾಗಾಗಿ ನಮಗೂ ಮುಸ್ಲಿಮ್ ಕುಟುಂಬಕ್ಕೂ ಬಾದರಾಯಣದ ನಂಟು.

ನಾನು ಉದ್ಯೋಗ ಅರಸಿ ಒಂದೆಡೆ ಮನೆ ಮಾಡಿದ್ದೇನೆ ನನ್ನ ನೆರೆಕೆರೆ ಒಂದು ಮುಸ್ಲಿಮ್ ಕುಟುಂಬ. ನಮ್ಮ ಕಷ್ಟಕ್ಕೆ ಅವರು ಅವರ ಕಷ್ಟಕ್ಕೆ ನಾವು. ಮತ್ತೆ ನನ್ನ ಓಣಿ ಒಂದು ಮಿನಿಭಾರತ.

ನಾನು ಹಿಂದು, ನನ್ನ ಆಚೆಯವರು ಕ್ರಿಶ್ಚಿಯನ್ ಮತ್ತು ಈ ಕಡೆ ಮುಸ್ಲಿಮ್ ಕುಟುಂಬ. ನಾವು ನೆಮ್ಮದಿಯಿಂದ ಇದ್ದೇವೆ.

‍ಲೇಖಕರು admin

December 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: