ನನ್ನದೊಂದು ಮನೆ…

ಮೂಲ : ಜಾವೇದ್ ಅಖ್ತರ್ 

ಕನ್ನಡಕ್ಕೆ : ಮೆಹೆಬೂಬೀ

ಹೋಗುವ ಕಡೆ ಎಲ್ಲರೂ ಹೋಗಲು ಸರಿ ಅನಿಸುತ್ತಿಲ್ಲ..
ನನಗೆ ಸವೆದ ಹಾದಿಯ ಪಯಣ ಸರಿ ಅನಿಸುತ್ತಿಲ್ಲ…

ಕೆಟ್ಟ ಮಾತುಗಳನ್ನು ಮೌನದಿಂದ ಕೇಳುವದು ಹೂಂಗುಟ್ಟುವದು
ಬಹಳಷ್ಟಿವೆ ಲಾಭಗಳು ಇದರಲ್ಲಿ ಆದರೆ ಸರಿ ಅನಿಸುತ್ತಿಲ್ಲ…

ನನಗೆ ವೈರಿಯಿಂದಲೂ ಅಭಿಮಾನದ ನಿರೀಕ್ಷೆ ಇದೆ
ಯಾರದೇ ತಲೆ ಆಗಿರಲಿ ತಲೆ ಪಾದಗಳಲ್ಲಿ ಸರಿ ಅನಿಸುತ್ತಿಲ್ಲ..

ಕೀರ್ತಿಶಿಖರ ಏರಿದವನಿಗೆ ಮಣ್ಣಿನ ವಾಸನೆಯೂ ಬರುತ್ತಿಲ್ಲ
ಇವು ಆ ಟೊಂಗೆಗಳು ಅವುಗಳಿಗೀಗ ಮರ ಸರಿ ಅನಿಸುತ್ತಿಲ್ಲ…

ಇದೇಕಿರಬೇಕು ಬೆಂಕಿ ಇಡುವವರೇ ಇದನ್ನೂ ಸುಟ್ಟು ಬಿಡಿ
ಎಲ್ಲಾ ನಿರಾಶ್ರಿತರ ಮಧ್ಯ ನನ್ನದೊಂದು ಮನೆ ಸರಿ ಅನಿಸುತ್ತಿಲ್ಲ….

‍ಲೇಖಕರು Admin

January 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: