ಟಿ ಎನ್ ಸೀತಾರಾಂ ಹೇಳಿದ್ದು –
ನಾಗರಾಜಮೂರ್ತಿ ನಿಮಗೆ ನೆನಪಿದೆಯ? ನನ್ನ ನಿಮ್ಮ ಪರಿಚಯವಾಗಿದ್ದು ಒಂದು ಮನಸ್ತಾಪದ ಮೂಲಕ. 85ರಲ್ಲಿ ವಿಧಾಸಭಾ ಚುನಾವಣೆಗಳು ನಡೆದಾಗ ನಮ್ಮೂರಿನಿಂದ ನಾನು ಸ್ಪರ್ಧಿಸಬಯಸಿದ್ದೆ. ಎಂ.ಎಲ್.ಎ ಆಗಲು ಇಷ್ಟವಿತ್ತು. ಆದರೆ ನೀವು ಒಳಗೇ ದೇವೇಗೌಡರ ಶಿಷ್ಯರಾಗಿದ್ದುಕೊಂಡು ತಂತ್ರಮಾಡಿ ನನಗೆ ಟಿಕೆಟ್ ತಪ್ಪಿಸಿ ಈ ಮುಖ್ಯಮಂತ್ರಿ ಚಂದ್ರುಗೆ ಟಿಕೆಟ್ ಕೊಡಿಸಿ ನನ್ನ ಆಸೆಯನ್ನು ಸಮಾಧಿ ಮಾಡಿದಿರಿ. ಆಗ ಒಂದಷ್ಟು ವರ್ಷ ನಿಮ್ಮ ತಲೆಕಂಡರೆ ನನಗೆ ಆಗುತ್ತಿರಲಿಲ್ಲ. ಆಗ ನಿಮ್ಮನ್ನು ಒಬ್ಬ ಚಿಲ್ಲರೆ ಪುಢಾರಿ ಎಂದು ನಾನು ಭಾವಿಸಿದೆ. ಆದರೆ ಈಗ ನೀವು ನನ್ನ ಅತ್ಯಂತ ಪ್ರಿಯರಾದ ಗೆಳೆಯರಲ್ಲಿ ಒಬ್ಬರು. ನಿಮ್ಮ ನಿಸ್ಪೃಹ ಹೃದಯ, ಸಮಾಜದ ಬಗೆಗಿನ ನಿಮ್ಮ ಕಾಳಜಿ ಎಲ್ಲರಿಗೂ ಸಹಾಯ ಮಾಡುವ, ಕಷ್ಟಕ್ಕಾಗುವ ನಿಮ್ಮ ಮಾನವೀಯತೆ ಇವೆಲ್ಲಾ ನನಗೆ ಕ್ರಮೇಣ ಅರ್ಥವಾಗತೊಡಗಿತು. ನಾನು ಎಂ.ಎಲ್.ಎ ಆಗುವುದನ್ನು ನನಗೆ ತಪ್ಪಿಸಿ ನಿಮಗರಿಯದೆ ದೊಡ್ಡ ಉಪಕಾರ ಮಾಡಿದ್ದೀರಿ ನಾಗರಾಜಮೂರ್ತಿ . ಅದರ ಕಹಿ ನನ್ನಲ್ಲಿ ಕೊಂಚವೂ ಇಲ್ಲವೆಂದು ನಿಮಗೂ ಗೊತ್ತು.
ಸಂಪೂರ್ಣ ಓದಿಗೆ ಭೇಟಿ ಕೊಡಿ- ಓದುಬಜಾರ್



0 Comments