ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನನಗೆ ಆಗಸ್ಟ್ ೧೫ ಇಷ್ಟದ ದಿನ ಯಾಕಂದ್ರೆ…' – ಅಂಜಲಿ ರಾಮಣ್ಣ ಬರೀತಾರೆ

ಅಂಜಲಿ ರಾಮಣ್ಣ


ನನಗೆ ಆಗಸ್ಟ್ ೧೫ ಇಷ್ಟದ ದಿನ ಯಾಕಂದ್ರೆ ನನ್ನ ಪಪ್ಪ ಈ ಇಡೀ ದಿನ ಎಲ್ಲೆಡೆ ರಾರಾಜಿಸುತ್ತಿದ್ದರು;
ನನಗೆ ಈ ದಿನ ಎಲ್ಲೆಲ್ಲೂ ನಡೆಯುವ ಭಾಷಣ ಕೇಳೋದು ಖುಷಿ ಯಾಕಂದ್ರೆ ಪಪ್ಪನಿಗೂ ಇದೇ ಇಷ್ಟ;
ನನಗೆ ಸರ್ಕಾರದ ನಿರ್ಣಯಗಳ ವಿಮರ್ಶೆ ಅಂದರೆ ಜವಾಬ್ದಾರಿ ಯಾಕಂದ್ರೆ ಪಪ್ಪ ಹಾಗೇ ಮಾಡುತ್ತಿದ್ದರು;
ನನಗೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸೋದು ಆಸಕ್ತಿ ಯಾಕಂದ್ರೆ ಪಪ್ಪನಿಗೂ ಅದೇ ಅದರ್ಶವಾಗಿತ್ತು;
ನನಗೆ ಇಂದಿರಾ ಗಾಂಧಿ ಯ ದಾರ್ಷ್ಟ್ಯ ಒಪ್ಪಿತ ಯಾಕಂದ್ರೆ ಪಪ್ಪ ಹಾಗೇ ಬೆಳೆಸಿದರು;
ನನಗೆ ಗಾಂಧೀಜಿ ಎಂದರೆ ಗೌರವ ಯಾಕಂದ್ರೆ ಪಪ್ಪನಿಗೆ ಹಾಗಿತ್ತು ;
ನನಗೆ ಸೆಕ್ಯುಲರ್ ಆಗಿರೋದರಲ್ಲಿ ನಂಬಿಕೆ ಯಾಕಂದ್ರೆ ಅದು ಪಪ್ಪನ ನಂಬಿಕೆ ಕೂಡ ;
ನನಗೆ ಮತ ಹಾಕುವುದರ ಬಗ್ಗೆ ನಿಷ್ಠೆ ಯಾಕಂದ್ರೆ ಪಪ್ಪ ಎಂದೂ ಚುನಾವಣೆಯನ್ನು ತಪ್ಪಿಸದವರು ;
ನನಗೆ NCC, Scouts and Guides ಎಲ್ಲದರಲ್ಲಿ ಪಾಲ್ಗೊಳ್ಳೋದು ಹಿತ ಯಾಕಂದ್ರೆ ಪಪ್ಪನಿಗೆ ಅದರಲ್ಲೇ ಖುಷಿ;
ನನಗೆ ಕನ್ನಡ ಅಂದರೆ ಪ್ರಾಣ ಯಾಕಂದ್ರೆ ಪಪ್ಪನಿಗೆ ಜಗತ್ತಿನ ಎಲ್ಲಾ ಭಾಷೆಗಳು ಬರ್ತಿದದ್ದು ಕನ್ನಡದಲ್ಲಿ ಮಾತ್ರ;
ನನಗೆ ಈ ದಿನ ಟೀವಿಯಲ್ಲಿ ಪೆರೇಡ್ ನೋಡೋದು ಮುದ ನೀಡುವ ಕರ್ತವ್ಯ ಯಾಕಂದ್ರೆ ಪಪ್ಪನಿಗೆ ಅದರಲ್ಲಿ ಸಂತೋಷ ;
ನನಗೆ ಪ್ರಜಾಪ್ರಭುತ್ವವೇ ಅಂತಿಮ ಪರಿಹಾರ ಅನ್ನಿಸುತ್ತೆ ಯಾಕಂದ್ರೆ ಇದನ್ನು ಗಳಿಸಿ ಉಳಿಸಿಕೊಳ್ಳಲು ಪಪ್ಪನ ಕೊಡುಗೆ ಇದೆ;
ನನಗೆ ಜಗತ್ತಿನ ಎಲ್ಲಾ ವಿಷಯಗಳಲ್ಲಿ ಆಸಕ್ತಿ , ಸಾಧ್ಯತೆಗಳಲ್ಲಿ ನಂಬಿಕೆ ಯಾಕಂದ್ರೇ ಅದೇ ಪಪ್ಪ;
ನನಗೆ ಪಪ್ಪ ಅಂದರೆ ಇಷ್ಟ ಯಾಕಂದ್ರೆ ನನಗೆ “ಸ್ವಾತಂತ್ರ್ಯ” ತಂದುಕೊಟ್ಟವರು ಅವರು……ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚ್ಚಾರಕ್ಕೂ ವ್ಯತ್ಯಾಸ ತೋರಿಸಿಕೊಟ್ಟವರು ಅವರು !
Happy Independence Day !
 

‍ಲೇಖಕರು avadhi

19 August, 2013

7 Comments

  1. Vidyashankar Harapanahalli

    I like the way you use the word ‘ಹಿತ’ 🙂 Happy Independence Day!

  2. ಪದ್ಮ

    ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚ್ಚಾರಕ್ಕೂ ವ್ಯತ್ಯಾಸ ತೋರಿಸಿಕೊಟ್ಟವರು ಅವರು – ಸೂಪರ್ ಲೈನ್ಸ್ ಅಂಜಲಿ ಅವರೇ…

  3. samyuktha

    Lovely and refreshing!!! 🙂

  4. bharathi

    Ishtavaythu anjali

  5. yash

    chennagide.

  6. Anjali Ramanna

    Odida mattu abhipraaya tiLisida ellarigoo dhanyavaadagalu
    Anjali Ramanna

  7. Chalam

    ನಮ್ಮೊ‍ಳಗಿನ ಪಪ್ಪನನ್ನು ಕಾಪಾಡಿಕೊಳ್ಳೋಣ.ಚನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading