ಹಾಗೆ ಸುಮ್ಮನೆ..
ಪ್ರಕಾಶ್ ಶ್ರೀನಿವಾಸ್
ಈ ಪ್ರಶ್ನೆ ಬದುಕಿನಲ್ಲಿ ಪ್ರತಿಯೊಬ್ಬರಿಗೂ
ಒಂದಲ್ಲ ಒಂದು ಸಲ ಬುದ್ಧಿ ಕೇಳೆ ಕೇಳುತ್ತದೆ ….
ಉತ್ತರ ?
ಕೊಡುವುದು ಆ ಸಮಯದಲ್ಲಿ ಸ್ವಲ್ಪ ಕಷ್ಟವೇ!
ಕಾರಣ ನಾವು ತುಂಬಾ ಪ್ರೀತಿಸಿದ (ಹಚ್ಚಿಕೊಂಡಿದ್ದ)
ವ್ಯಕ್ತಿ ನಮ್ಮಿಂದ ದೂರ ಆದಮೇಲೆ …
ಇಲ್ಲ ನಮ್ಮ ಭಾವನೆಗಳಿಗೆ ಒಂದು ಸರಿಯಾದ
ಸ್ಪಂದನೆ ಸಿಗದೇ ಇದ್ದಾಗ …
ಮೂಡೋ ಪ್ರಶ್ನೆಯೇ ಅದು …
ನನ್ನನ್ನು ನೋಡಿ ಯಾರಾದರು (ನನಗೆ ಅಂತ ಯಾರೂ ಇಲ್ವಾ?)
ಎಂದು ಕೇಳಿದರೆ ..
ನಾನು ಅವರಿಗೆ ಕೇಳೋ ಪ್ರಶ್ನೆ ?
ನಿಮಗೆ ಅಂತ ನೀವು ಇದ್ದೀರಾ ?
ಉತ್ತರ ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲವ ?
ಎಂದಾದರೂ ನಿಮಗೆ ಇಷ್ಟದ ಹವ್ಯಾಸವನ್ನು
ಮುಂದು ವರಿಸಿದ್ದೀರ?
ಮೊದಲು ನಮಗೆ ನಾವೇ ಇರಬೇಕು
ನಮಗೆ ಇಷ್ಟದ ಕೆಲಸಗಳನ್ನು ಇಷ್ಟ ಪಟ್ಟು ಮಾಡುತ್ತಿರಬೇಕು
ಪ್ರತಿಯೊಬ್ಬರಲ್ಲೂ ಒಂದೊಂದು ಹವ್ಯಾಸ ಇರುತ್ತದೆ …
ಹಾಡುಗಾರಿಕೆ…ಚಿತ್ರ ಬಿಡಿಸುವುದು…ತೋಟಗಾರಿಕೆ…ಬರವಣಿಗೆ…
ಇನ್ನೂ ಹಲವು ……..
ಹಾಡಿನ ಮೊದಲ ಸಾಲುಗಳನ್ನು ಮಾತ್ರ ಹಾಡುವ ನೀವು
ಆ ಹಾಡಿನ ಎಲ್ಲ ಸಾಲುಗಳನ್ನು ಬರೆದಿಟ್ಟು ಕೊಂಡು
ಒಂದು ಸಲ ಒಬ್ಬರೇ ಪೂರ್ತಿ ಹಾಡನ್ನು ಹಾಡಿ…
ತುಂಬಾ ಇಷ್ಟ ಪಟ್ಟು ಕವಿತೆಗಳ ಓದುವ ನೀವು
ಒಂದು ಸಲ ಕವಿತೆ ಬರೆಯಲು ಯಾಕೆ ಪ್ರಯತ್ನಿಸಬಾರದು ?
ಹೀಗೆ ಒಳಗಿರುವ ಒಳ್ಳೆಯ ಆರೋಗ್ಯಕರ ಹವ್ಯಾಸಗಳನ್ನ ಬೆಳೆಸಿಕೊಳ್ಳಬೇಕು
ನಾನು ಈ ಮಾತನ್ನ ಹೇಳುವಾಗ ಅವರ ಉತ್ತರ ?
ಇಲ್ಲ ಅದೆಲ್ಲ ನನಗೆ ಬರಲ್ಲ !!
ಬರಲ್ಲ ಅನ್ನೋದು ಸರಿಯಾದ ಉತ್ತರವಲ್ಲ
ನಾನು ಪ್ರಯತ್ನಿಸಿ ನೋಡಿಲ್ಲ ಅನ್ನೋದು ಸರಿಯಾದ ಉತ್ತರ…
ಇದು ಮೊದ ಮೊದಲು ಸ್ವಲ್ಪ ಕಷ್ಟವೇ …ಒಬ್ಬರನ್ನು ಅಗಲಿದ ಸಮಯದಲ್ಲಿ
ಆದ್ರೆ ಆ ನೋವನ್ನು ನಮ್ಮದೇ ಕೆಲಸಗಳಲ್ಲಿ
ಮರೆಯಲು ಪ್ರಯತ್ನಿಸಬೇಕು ,
ಅದನ್ನು
ಬಿಟ್ಟು ಮತ್ತೆ ಮತ್ತೊಂದು ಜೀವದ ಆಸರೆ ಬಯಸಿದರೆ ಅದೂ ಸಹ
ನೋವಿನಲ್ಲೇ ಅಂತ್ಯವಾಗುತ್ತೆ ಒಂದು ದಿನ .
ಆಗಿದ್ರೆ ನಾವು ಯಾರ ಜೊತೆ ಕೂಡ ಮಾತನಾಡುವುದು ?
ಹಾಗೂ ಸ್ನೇಹ ಬೆಳಸುವುದು ತಪ್ಪ ?
ಅನ್ನೋ ಪ್ರಶ್ನೆ ನಿಮ್ಮಲ್ಲಿ ಏಳಬಹುದು !
ಮಾತನಾಡಬೇಕು..ಸ್ನೇಹವನ್ನು ಬೆಳಸಬೇಕು !
ಆದ್ರೆ ಅದು ನಿಮ್ಮ ಜೊತೆ ನಿಮಗೇ ಬೇಸರವಾದ ಸಮಯದಲ್ಲಿ
ಆ ಸಮಯವನ್ನು ಕಳೆಯಲು ಮಾತನಾಡುವುದು
ಸ್ನೇಹ ಬೆಳಸುವುದು ತಪ್ಪಲ್ಲ…
ಆದರೆ ಆ ವ್ಯಕ್ತಿಗಳು ಅಗಲಿದ ಮೇಲೆ
ನಿಮ್ಮ ಜೊತೆ ಮಾತನಾಡುವುದು ನಿಮ್ಮ ಮೇಲೆ ನೀವೇ ಬೇಸರ ಮಾಡಿಕೊಳ್ಳುವುದು ದೊಡ್ಡ ತಪ್ಪು ….
ಯಾರಿಗೂ ನಮ್ಮ ಜೊತೆ ಸದಾ ಇರಲು ಆಗದು
ನಾವು ಅವರು ಸದಾ ಜೊತೆ ಇರಬೇಕು ಎಂದು ಬಯಸುವುದು ಸಹ
ತಪ್ಪು ಪ್ರತಿಯೊಬ್ಬರಿಗೂ ತನ್ನದೇ ಆದ ಬದುಕಿರುತ್ತದೆ …
ಆ ಬದುಕಿನಲ್ಲಿ ಅವರಿಗೆ ಅವರದೇ ಆದ ಕೆಲಸಗಳು ..
ಗುರಿಗಳು ಇರುತ್ತವೆ …..
ನಮಗೆ ಅವರು ಇಷ್ಟ ಎನ್ನುವ ಒಂದೇ ಕಾರಣಕ್ಕೆ
ಅವರಿಗೆ ನಾವೇ ಒಂದು ತೊಂದರೆ ಆಗಬಾರದು …..
ಒಂದೊಂದು ಸಲ
ನಾವು ತುಂಬಾ ಹಚ್ಚಿಕೊಂಡ ವ್ಯಕ್ತಿಯೇ
ನಮ್ಮನ್ನು ದೂರ ಮಾಡುತ್ತಾರೆ …
ಅದಕ್ಕೆ ಕಾರಣಗಳು …..
ಅವರಿಗೆ
ಕೆಲಸದ ಒತ್ತಡಗಳು ಜಾಸ್ತಿಯಾಗಿರಬೇಕು…!
ನಮ್ಮದೇ ಏನೋ ತಪ್ಪಿರಬೇಕು….!
ನಮಗಿಂತ ಬೆಸ್ಟ್ ಅನ್ನೋ ವ್ಯಕ್ತಿ ಅವರ ಬದುಕಿನಲ್ಲಿ ಬಂದಿರಬಹುದು …
ಇಲ್ಲ ಅವರು ಸಮಯ ಕಳೆಯಲು ನಮ್ಮ ಜೊತೆ ಸ್ನೇಹ ಬೆಳಸಿದ್ದನ್ನು
ನಾವೇ ಅರಿಯದೆ ..ಅವರನ್ನು ತುಂಬಾ ಹಚ್ಚಿಕೊಂಡಿರಬೇಕು…
ಹೀಗೆ ತುಂಬಾ ಕಾರಣಗಳು…
ಆದುದ್ದರಿಂದ ನಮ್ಮ ಜೊತೆ ನಾವೇ ಸದಾ ಇರುವುದು
ಹಾಗಾಗಿ ನಮ್ಮನ್ನು ನಾವೇ ನಮಗೆ ಇಷ್ಟವಾಗುವ ಹಾಗೆ
ಇಟ್ಟು ಕೊಳ್ಳೋಣ….
ನಮಗೆ ಇಷ್ಟವಾಗುವವರ ಹಿಂದೆಯೇ ಮನಸು ಹೋಗುತ್ತಿರುತ್ತದೆ
ನಮನ್ನು ಇಷ್ಟ ಪಡುವವರು ನಮ್ಮ ಹಿಂದೆಯೇ ಇದ್ದರೂ
ಅದು ನಮಗೆ ಕಾಣುವುದಿಲ್ಲ ..
ಅವರು ನಮ್ಮ ಒಂದು ಮಾತಿಗಾಗಿ ದಿನಗಟ್ಟಲೆ ಕಾದಿರುತ್ತಾರೆ..
ಒಂದು ಸಲ ನಮನ್ನು ಇಷ್ಟ ಪಡುವವರ ಜೊತೆ ಮಾತನಾಡಿದರೆ
ನಮಗೆ ನಾವೇ ಇಷ್ಟವಾಗುತ್ತೇವೆ ….
ನಮಗೆ ಇರಬೇಕಾದ ಮೂರು ವಿಷಯಗಳು!
Self-confidence.!
Self-control.!
Self-motivation.!
ನಮಗೆ ಬೇಡವಾದ ಒಂದು ವಿಷಯ!
Selfish.!!
ಇಷ್ಟ ಪಡುವವರು ನಮ್ಮೊಂದಿಗೆ ಇರಬೇಬೇಕು
ಅವರಿಗೆ ನಾವೇ ತುಂಬಾ ಇಷ್ಟವಾಗಬೇಕು !
ಅವರೊಂದಿಗೆ ಯಾರೋ ಮಾತನಾಡುವಾಗ ಮನದೊಳಗೆ ತಳಮಳ!
ಹೀಗೆ ಹಲವರು ತೊಂದರೆಗಳಿಗೆ selfish ಕಾರಣವಾಗುತ್ತದೆ…
ಬಹಳ ದಿನಗಳಿಂದ ಒಡನಾಟ ಇಟ್ಟುಕೊಂಡಿದ್ದ ವ್ಯಕ್ತಿಗಳ
ಒಂದು ಸಣ್ಣ changes ಕೂಡ ನಾವು ಅರಿಯಬಲ್ಲೆವು …
ಅವರಿಗೆ ನಮ್ಮ ಜೊತೆ ಇರಲು ಇಷ್ಟವಿಲ್ಲ!
ಅಥವಾ,
ನಮಗೆಂದೇ ಸಮಯ ಕೊಡಲು ಅವರಿಗೆ ಆಗುತ್ತಿಲ್ಲ ಎಂದು ತಿಳಿದ ಕೂಡಲೇ ,
ನಾವೇ ಅರಿತ ಮೆಲ್ಲಗೆ ಆ ಸಂಬಂಧದಿಂದ ಹೊರಬರಬೇಕು!
ನಾವು ಅಲ್ಲೇ ಇದ್ದು ಅವರ ನಡೆವಳಿಕೆಯಿಂದ Hurt ಆಗಿ ಅಂತರ ಬಳಸಿಕೊಳ್ಳುವುದಕ್ಕಿಂತ !
ಅರಿತು ದೂರವಿರುವುದೇ ಮೇಲು!
ನಮ್ಮ ಬದುಕೇ ಒಂದು ರೈಲಿನ ಪಯಣ!
ಇಲ್ಲಿ ಎಲ್ಲ ಸಂಬಂಧಗಳು ಕೇವಲ ಜೊತೆ ಪ್ರಯಾಣಿಸುವ ಪ್ರಯಾಣಿಕರು!
ಅವರ ಜೊತೆ ನಾವು ಕೊನೆಯವರೆಗೂ ಪ್ರಯಾಣಿಸಬೇಕು ಎಂದು ಬಯಸುವುದು ತಪ್ಪು!
ನಮ್ಮ STOP ಬಂದೆ ಬರುತ್ತದೆ ನಾವು ಇಳಿಯಲೇ ಬೇಕು!
ಒಂದು ಸಣ್ಣ ಉದಾರಣೆ:
ನಮ್ಮ ಕುಟುಂಬದಲ್ಲಿ …ಹಾಗೂ ಸ್ನೇಹಿತರಲ್ಲಿ ….
ಯಾರಿಗೂ ಸಾಹಿತ್ಯದ ಅಭಿರುಚಿ ಇಲ್ಲ …
ಯಾರೂ ಸಹ ನನ್ನ ಒಂದು ಕವಿತೆಯನ್ನು ಕೂಡ
ಕಿವಿ ಕೊಟ್ಟು ಕೇಳುವುದೂ ಇಲ್ಲ!
ನನ್ನ ಕವಿತೆಗಳನ್ನು ಓದಲು ಯಾರೂ ಇಲ್ಲ ಅಂತ
ನಾನು ಎಂದೂ ಸಹ ಬರೆಯುವುದನ್ನು ನಿಲ್ಲಿಸಲಿಲ್ಲ..
ಬರೆಯುವುದು ನನಗೆ ಇಷ್ಟ ….
ನನಗೆ ಖುಷಿ ಕೊಡುತ್ತೆ ನನ್ನ ಕವಿತೆಗಳು ಅದರಿಂದ
ನಿರಂತರವಾಗಿ ಬರೆಯುತ್ತ ಇರುತ್ತೇನೆ ………
ಮುಂದೆ ಅದು ಕವಿತೆಯೇ ಅಲ್ಲ .. (ಇಲ್ಲಿಯವರೆಗೂ ಯಾರೂ ಹೇಳಲಿಲ್ಲ)
ನಿಮಗೆ ಕವಿತೆ ಬರೆಯುವುದಕ್ಕೆ ಬರುವುದಿಲ್ಲ
ಎಂದು ಯಾರಾದರೂ ನನ್ನನ್ನು ನೋಡಿ ಹೇಳಿದರೆ
ನಾನು ನಗುತ್ತ ಉತ್ತರಿಸುತ್ತೇನೆ …..
ಇಷ್ಟ ಆಗೋ ಕೆಲಸ ಮಾಡಕ್ಕೆ ಯಾಕೆ ಬೇಕು
ಕೋರ್ಸು
ಇದ್ರೆ ಸಾಕು ಅದನ್ನ ಅನುಭವಿಸು ಮಾಡೋ ಮನಸು!…
ನನಗೆ ಅಂತ ಯಾರೂ ಇಲ್ವಾ?
ಎಂದು ನೀವು ಕೇಳುವಾಗ!
ನಾನ್ ಇದ್ದೀನಿ!
ಎಂದು ನಿಮ್ಮ ಮನಸೇ ಹೇಳಬೇಕು ಹಾಗೆ ಮಾಡಿ!




supper sir………….nimma kavanada anisike nanage sari ede anisutide.
Nimma baraha tumba ishta aythu.
ನಮ್ಮೊಳಗಿನ ಅಂತಃ ಶಕ್ತಿಯನ್ನು ಓರೆಗೆ ಹಚ್ಚಿ ನಮ್ಮೊಳಗಿನ ನಮ್ಮನ್ನೇ ಕಂಡುಕೊಳ್ಳುವ ಅಗತ್ಯದ ಬಗ್ಗೆ ನಿರೂಪಿಸಿರುವ ನಿಮ್ಮ ಲೇಖನ ಹಿಡಿಸುತ್ತದೆ ಪ್ರಕಾಶಣ್ಣ.. ಹನಿಗಳನ್ನಲ್ಲದೆ, ಬರಹಗಳನ್ನೂ ಬರೆಯುವ ಶಕ್ತಿ ನಿಮ್ಮ ಲೇಖನಿಗಿದೆ ಎಂದು ನಿರೂಪಿಸುತ್ತದೆ ಈ ಲೇಖನ..:)
ಆದರೆ ನಿಮ್ಮಲ್ಲಿ ಒಂದು ದೂರಿದೆ, ಲೇಖನಗಳನ್ನು ಬರೆಯುವಾಗ ಸಂಪೂರ್ಣ ಕನ್ನಡವನ್ನೇ ಬಳಸಿ, ಮಧ್ಯೆ ಮಧ್ಯೆ ಆಸ್ವಾದನೆಯ ಮನಸ್ಸಿಗೆ ರಸಭಂಗವಾಗುವುದು ಬೇಡ.. ಅದು ಬರಹಕ್ಕಾಗುವ ಹಿನ್ನಡೆ.. ನೀವು ಪರಿಸ್ಥಿಯನ್ನು ಸಹಜವಾಗುಳಿಸಿಕೊಳ್ಳಲು ಆಂಗ್ಲ ಬಳಸುವುದೇ ಆದರೆ ಅದನ್ನೂ ಕನ್ನಡದಲ್ಲಿಯೇ ಬರೆಯಿರಿ..