
ಸುಷ್ಮಾ ರಾವ್
ಅಮ್ಮ ತನ್ನ ಡಾಕ್ಟರಿಗೆ ಹೇಳಿದ್ಲಂತೆ ಹೆಣ್ಣೇ ಬೇಕು ಅಂತ. …. ಹೆಣ್ಣೇ ಹುಟ್ಟೋದು ಅಲ್ವಾ ಅಂತ ತನ್ನ ಅತ್ತೆಯನ್ನೂ ಪೀಡಿಸಿದ್ಲಂತೆ.
ಆದ್ರೂ ‘I hate amma’ ಆ ದಿನಗಳಲ್ಲಿ ಮಾತ್ರ. ಅಮ್ಮನ ಮೇಲೆ ಸಿಟ್ಟು, ಅಸಹನೆ, ಅವಳಿಂದ ತಾನೆ ನಾನು ಹೆಣ್ಣಾಗಿದ್ದು..!
ನನಗಾಗ 11 ತುಂಬಿತ್ತು. ತುಂಬು ಕುಟುಂಬ…’ಬಡಕಲು ಕೋಲಿನಂತಿದ್ದ ನಾನು ಅಷ್ಟು ಬೇಗ ಋತುುಮತಿಯಾಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ
ಅಂದು ಸಂಜೆ, ಟೀವಿಯಲ್ಲಿ ‘ನಾ ನಿನ್ನ ಬಿಡಲಾರೆ’ ಸಿನಿಮಾ ಬರ್ತಾ ಇತ್ತು. ಚಿಕ್ಕಪ್ಪ ನ ತೊಡೆಯ ಮೇಲೆ ಕೂತ ನನಗೆ ಇದ್ದಕ್ಕೆ ಇದ್ದಹಾಗೆ ಚಡ್ಡಿ ಒದ್ದೆ ಯಾದಂತನ್ನಿಸಿ ಬಚ್ಚಲಿಗೆ ಹೋದರೆ…… .! ಕೆಂಪು ಕಲೆ. ರಕ್ತ…..! ಆಗಷ್ಟೇ ಕೆಲ ದಿನಗಳ ಹಿಂದೆ ‘ಬಂಧನ ‘ ಫಿಲ್ಮ್ ನೋಡಿ ಅತ್ತಿದ್ದ ನನಗೆ ಖಾತ್ರಿಯಾಗಿತ್ತು…. ಇದೇನೋ ಕ್ಯಾನ್ಸರ್ರೇ ಸರಿ… ಇನ್ನು ಸ್ವಲ್ಪ ದಿನಕ್ಕೆ ರಕ್ತ ವಾಂತಿಯಾಗಿ ಸಾಯೋದೇ. ..!
ಗೊಳೋ ಎಂದು ಅಳುತ್ತಾ ಬಂದವಳನ್ನು ಸಮಾಧಾನ ಮಾಡಲು ಎಲ್ಲರೂ ಕಲಿತ ಪಾಠವನ್ನೆಲ್ಲಾ ಉಪಯೋಗಿಸಿದರು. ಆದ್ರೂ ನಂಗೆ ಗೊತ್ತು… ನಂಗೆ ಬೇಜಾರಾಗ್ಬಾರ್ದೂ ಅಂತ ಹೇಳ್ತಾರೆ, but actually ನಂಗೆ ಕ್ಜನ್ಸರ್ರೇ…
ವಿಷಯ ಹಿಂಗಿಂಗೇ…. ಹಿಂಗಿಂಗೇ…. ಹಿಂಗಿಂಗೇ… ಅಂತ ಸಾಗರದಲ್ಲಿದ್ದ ಅಣ್ಣ ನಿಗೆ ಅಂದೇ ರಾತ್ರಿ ಕಾಗದ ಬರೆದೆ…. ನಾಳೆ ಶಾಲೆಗೆ ಹೋಗ್ತಾ ಪೋಸ್ಟ್ ಮಾಡೋದು ಅಂತ….
ರಾತ್ರಿಯೆಲ್ಲಾ ನಿದ್ರೆ ಇಲ್ಲಾ…. ಒಂಥರಾ ಕೆಟ್ಟ ಒದ್ದೊದ್ದೇ feeling…
ಮೂರು ದಿನ ಶಾಲೆಗೆ ರಜೆ ಅಂತ ಮರುದಿನ ಅಮ್ಮಾ ಹೇಳಿದಾಗ ಆಕಾಶ ಕಳಚಿ ಬಿದ್ದಿತ್ತು… ಅರೇ ವಾಲೀಬಾಲ್ ಟೀಮ್ ಗೆ selection ಇದೆ, ಶಾಲೆಗೇ ಹೋಗ್ದೇ ಇದ್ರೆ…!?
ಅತ್ತು ಕರೆದು ಎಲ್ಲಾ ಆದ್ರೂ use ಆಗ್ಲಿಲ್ಲ… ‘ಹೋಗ್ಲಿ ತಗಳೆ ಮಾರಾಯ್ತಿ’ ಅಂತ ಅಮ್ಮಮ್ಮ ಹೇಳ್ತಾಳೆ ಅನ್ನೋ last hope ಕೂಡಾ ಇಲ್ಲದಾಗಿತ್ತು.
ಮೊದಲ ಬಾರಿ, ಮುಟ್ಟಿನ ಬಟ್ಟೆ ತೊಳೆದಾಗ ವಾಕರಿಸಿದ್ದು ಸುಳ್ಳಲ್ಲ …. ಇದೇನು ಒಂದು ತಿಂಗಳಿಗೆ ಮುಗಿಯುವ ಕಥೆಯೇ….? ಪ್ರತೀ ತಿಂಗಳ ನರಕ, ತುಟಿ ಕಚ್ಚಿ ಬಿಕ್ಕುವಷ್ಟು ಹೊಟ್ಟೆ ನೋವು, ಜೊತೆಗೆ ಈ ಬಟ್ಟೆ ತೊಳೆಯೋ ವಾಸನೆ, ಅಸಹ್ಯ ಮತ್ತು ಉಮ್ಮಳಿಸಿ ಬರುವ ವಾಂತಿ….!
ಹಲವು ಬಾರಿ ಆಟದ ಮೈದಾನದಲ್ಲೋ, ಶಾಲೆಯ ದಾರಿಯಲ್ಲೋ ಕಾಲ ತನಕ ಹರಿಯುವಷ್ಟು ತೀವ್ರ ರಕ್ತ ಸ್ರಾವವಾಗಿ ಆದ embarassment ಇನ್ನೂ ಮರೆತಿಲ್ಲ….!
ಇದರ ಉಪಾಯವಾಗಿ ಮೇಲಿಂದ ಮೇಲೆ ಬಟ್ಟೆ ಪೇರಿಸಿ ಕೊಂಡು ಶಾಲೆಗೆ ಹೋಗುತ್ತಿದ್ದೆ. ಬೆಳಿಗ್ಗೆ 8 ರಿಂದ ಸಂಜೆ 4ರ ವರೆಗಿನ ಶಾಲೆ ಮತ್ತು ತೀವ್ರ ರಕ್ತ ಸ್ರಾವಕ್ಕೆ ಅದೊಂದೆ ಆಗ ಹೊಳೆದಿದ್ದು.. ಹೀಗೆ ಬಟ್ಟೆ ಪೇರಿಸಿ ನಡೆದು, ತೊಡೆಯ ಸಂದಿಯೆಲ್ಲಾ ಬೆವರಿಗೆ rashes ಆಗಿ….. ಯವ್ವಾ….
ಈಗಲೂ ಸೀರೆ ಊಟ್ಟಾಗ ‘ಅಡ್ಡ ಕಾಲಿಟ್ಟು ನಡೀಬೇಡ’ ಅಂತ ಅಮ್ಮ ಬೈತಾಳೆ. ಹೀಗೆ ಅಡ್ಡಗಾಲಿಟ್ಟು ನಡೆಯದೇ ಆಗ ಬೇರೆ ದಾರಿ ಇರಲಿಲ್ಲ…. ಈಗ ಅಭ್ಯಾಸವಾಗಿದೆ…!
ನನ್ನ ಕಡು ವೈರಿಗೂ ಈ ಪಾಡು ಬೇಡ ಅನ್ನಿಸಿದ್ದು ಆಗಲೇ… ಬಯಸೀ ಬಯಸೀ ಜೀವ ಕೊಟ್ಟು ಹಡೆದ ಅಮ್ಮನ್ನ hate ಮಾಡೋಕೆ ಶುರು ಮಾಡಿದ್ದೂ ಕೂಡಾ… ಅವಳಿಂದ ತಾನೆ ನಾನು ‘ಹುಡುಗಿ’ ಯಾಗಿದ್ದು….!!
ಕ್ರಮೇಣ whisper sanitary pad ಗಳು ಪರಿಚಿತವಾದವು. Whisper ultra ಮಾತ್ರ ನನ್ನ ಪಾಲಿಗೆ most amazing discovery…
ಬಟ್ಟೆ ಯನ್ನೂ ಬಳಸಿ sanitary pads ಗಳನ್ನೂ ಬಳಸಿದ generation ನಮ್ದು…. hygiene, health survey, western culture, eco friendly ಎಲ್ಲಾ ನಮ್ಹತ್ರ ನಡಿಯಲ್ಲ…….!






0 Comments