ಮಾರ್ಗಗಳು ….
(ಜೆನ್ ಕಥೆಗಳು ಮೂಲ ತೆಲುಗು : ಶ್ರೀ ಸೌಭಾಗ್ಯ)
ಅನುವಾದ : ರವಿವರ್ಮ ಹೊಸಪೇಟೆ

ಮೊದಲನೇ ಶಿಷ್ಯ : ಜ್ಞಾನೋದಯಕ್ಕೆ ಮಾರ್ಗ ಯಾವುದು ?
ಎರಡನೇ ಶಿಷ್ಯ : ನಿಜವಾದ ಸಂತೃಪ್ತಿಗೆ ದಾರಿ ಯಾವುದು ?
ಮೂರನೆ ಶಿಷ್ಯ : ಅಂತರಾಳದ ಪ್ರಶಾಂತತೆಗೆ ದಾರಿ ಯಾವುದು ?
ಗುರುಗಳು : ’ಲೆಕ್ಕವಿಲ್ಲದಷ್ಟು ಪ್ರಶ್ನೆಗಳು…’ಎಂದು ಗುನುಗುತ್ತ ,
ಶಿಷ್ಯಂದಿರೆ ಇಲ್ಲಿ ಕೇಳಿ, ನಿಮ್ಮ ಮುಂದಿರುವುದನ್ನು ನೀವು ಕಾಣದೆ ಹೋದ ಪಕ್ಷದಲ್ಲಿ , ನಾನು ನಿಮಗೆ ಮಾರ್ಗ ತೋರಿಸಲಾರೆ , ನಿಜವಾಗಿ ಹೇಳಬೇಕೆಂದರೆ, ಮಾರ್ಗಗಳು ಅಂತಾ ಯಾವುದೂ ಇಲ್ಲ …. ನಡೆದಾಗ ಮಾತ್ರ ಮಾರ್ಗಗಳು ಉಂಟಾಗುತ್ತವೆ …..
ಗೌರವ ಪ್ರದರ್ಶಿಸುವುದು …..
ಒಬ್ಬ ಜೆನ್ ಗುರು ಜೆನ್ ಬಗ್ಗೆ ಪ್ರವಚನ ನಡೆಯುತ್ತಿದ್ದ ಸಭೆಗೆ ಹೋದರು ..
ಅಲ್ಲಿ ಮುಂದಿನ ಸಾಲಿನಲ್ಲಿದ್ದ ಬೆಂಚಿನಲ್ಲಿ ಕುಳಿತುಕೊಂಡರು …
ಸುದೀರ್ಘವಾದ ಪ್ರವಚನ ನಡೆಯುತ್ತಿದೆ ..
ಮುಂದಿನ ಸಾಲಿನಲ್ಲಿ ಕುಳಿತ ಗುರುಗಳ ಕಣ್ಣು ಮುಚ್ಚುತ್ತಿವೆ …
ಎಷ್ಟು ನಿಗ್ರಹಿಸಿದರೂ ನಿದ್ರೆ ಮತ್ತೆ ಮತ್ತೆ ಕಾಡುತ್ತಿದೆ
ಮೆಲ್ಲಗೆ ನಿದ್ರೆಯಲ್ಲಿ ಮುಳುಗಿ ಹೋದರು
ಗೊರಕೆ ಶುರುವಾಯ್ತು.
ಅವರ ವರ್ತನೆಗೆ ಪ್ರವಚನಕಾರರಿಗೆ ಬೇಸರವಾಯ್ತು
ಮೊದಲ ಬೆಂಚಿನಲ್ಲೇ ಕುಳಿತು ಗೊರಕೆ ಹೊಡೆಯುವುದು ತೀವ್ರ ಕೋಪಕ್ಕೆ ಕಾರಣವಾಯ್ತು
ವೇದಿಕೆಯಿಂದ ಇಳಿದುಬಂದು ಗುರುಗಳನ್ನು ಗಟ್ಟಿಯಾಗಿ ಅಲುಗಾಡಿಸುತ್ತಾ
“ಏನು ಮಾಡುತಿದ್ದಿರಿ?
ಪವಿತ್ರ ಪ್ರವಚನ ಕೇಳಿಸುತ್ತಿದ್ದರೆ ನೀವು ನಿದ್ರೆ ಮಾಡುತಿದ್ದಿರಾ?….
ಸಭೆಗೆ ಸ್ವಲ್ಪವಾದ್ರೂ ಗೌರವ ತೋರಿಸಿ” ಎಂದರು ….
ಗುರುಗಳು ಕಣ್ಣು ಉಜ್ಜುತ್ತ ಕ್ಷಮಿಸಿ ಎಂದು ಹೇಳಿ
ಮುಂದಿನ ಸಾಲಿನಲ್ಲಿದ್ದ ಬೆಂಚನ್ನು ಹಿಂದಕ್ಕೆ ಹಾಕಿಕೊಂಡು
ಹಾಯಾಗಿ ನಿದ್ರೆ ಹೋದರು..







Good one Ravi Varma.
chennaagive sir…