ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊಲರಾಡೊದಲ್ಲಿ’ಧಾರವಾಡ ಡೆಲಿಶಿಯಸ್’

ರೇಣುಕಾ ಮಂಜುನಾಥ್

ಧಾರವಾಡ ಡೆಲಿಶಿಯಸ್ ಅದಾಗಲೇ ನಮ್ಮ ನಡುವೆ ಫೇಮಸ್ ಆಗಿದೆ. ಅದೇ, ಬೇಂದ್ರೆ ಕಣವಿ ಅವರನ್ನೂ ಜೊತೆಗಿಟ್ಟುಕೊಂಡು ನಮ್ಮ ರಾಜಣ್ಣ ಊರಿಗೆಲ್ಲಾ ಧಾರವಾಡ ಫೇಡಾ ಹಂಚ್ತಿರೋದು! ಅಂದೊಮ್ಮೆ ಧಾರವಾಡಕ್ಕೆ ಹೋದಾಗ, ಅವರ ಪುಸ್ತಕದಂಗಡಿಗೆ ಹೋಗಿ, ಅವರು ಕೊಟ್ಟ ಚಾ ಕುಡಿದು, ಒಂದಷ್ಟು ಪುಸ್ತಕಗಳನ್ನು ಅಲ್ಲಿಂದ ತಂದಿದ್ದೆ. ಅದನ್ನು ಮರೆಯಲಾದೀತೆ? ಜೊತೆಗೆ ಫೇಸ್‌ಬುಕ್ ಗೆಳತಿಯರೊಡನೆ ಹರಟೆ, ಫೋಟೊ ನೆನಪಿನಲ್ಲಿತ್ತು.

ಈಗ ಅದರ ಜೊತೆಗೆ ಈ ಧಾರವಾಡದ ಸಿಹಿ-ಖಾರಗಳ ಅಂಗಡಿ! ಅಲ್ಲಿದ್ದರೆ ತರಿಸಿಕೊಳ್ಳಬಹುದಿತ್ತು, ಸಪ್ತಸಾಗರದಾಚೆ ಇದ್ದೇನೆ ಎಂದು ಯೋಚಿಸುತ್ತಾ, ರಾಜಣ್ಣನಿಗೊಂದು ಮೆಸೇಜ್ ಮಾಡಿದೆ. “ರಾಜಣ್ಣ ಪ್ಯಾಕ್ ಮಾಡಿಟ್ಟರೆ ಸಾಕು, ಇಲ್ಲಿಗೇ ತರಿಸಿಕೊಳ್ಳುವೆ, ಆಗುತ್ತಾ?” ಅಂದೊಡನೆ, “ಏನೇನು ಬೇಕು ಹೇಳಿ?”ನಿಮ್ಮಲ್ಲಿ ಸಿಗುವ ಪ್ಯೂರ್ ಧಾರವಾಡ ಪೇಢಾ, ಅವಲಕ್ಕಿಚೂಡಾ, ಕಾರ್ನ್ ಚೂಡಾ, ಅಗಸಿ ಚಟ್ನಿಪುಡಿ, ಗುರೆಳ್ಳು ಚಟ್ನಿಪುಡಿ ಸಾಕು ಸದ್ಯಕ್ಕೆ.

“ದಾವಣಗೆರೆಯಿಂದ ಪಾರ್ಸಲ್ ಬರ್ತಿದೆ, ಅಲ್ಲಿಗೆ ಕಳಿಸಿ, ಇಲ್ಲಿಗೆ ಬರುತ್ತೆ” ಅಂದೆ. ಹೇಳಿದ ಸ್ವಲ್ಪ ಹೊತ್ತಿಗೆ, ವಿ ಆರ್ ಎಲ್ ನವರ ಟ್ರಾನ್ಸ‌ಪೋರ್ಟ್‌ನಲ್ಲಿ ದಾವಣಗೆರೆ ತಲುಪಿತ್ತು!! ರಾಜಣ್ಣನ ಸರ್ವೀಸ್ ನೋಡಿ ದಂಗಾಗಿದ್ದೆ! ಅದಾಗಿ ಮೂರು ದಿನಕ್ಕೆ ಅದು ದೆಹಲಿ ಮೂಲಕ ನಾನಿರುವ ಕೊಲರಾಡೊಗೆ ಬಂದು ತಲುಪಿತು!! ಎಲ್ಲವೂ ಘಮ ಘಮ, ರುಚಿ ರುಚಿ, ಮಧುರ, ಖಾರ….ರಾಜಣ್ಣ ತುಂಬಾ ತುಂಬಾ ಧನ್ಯವಾದಗಳು…ಈಗ ಸ್ಯಾಂಪಲ್ ತರಿಸಿದ್ದೇನೆ. ಮತ್ತೆ ಇಲ್ಲಿ ಮಗನ ಫ್ರೆಂಡ್ಸ್ ‌ನೆಲ್ಲಾ ಸೇರಿಸಿ, ನಿಮ್ಮಿಂದ ಮತ್ತಷ್ಟು ತರಿಸಿ ಧಾರವಾಡದ ರುಚಿಯನ್ನು ಇಲ್ಲಿರುವವರಿಗೆಲ್ಲಾ ಹತ್ತಿಸುವೆ..

ನಿಮ್ಮ ಈ ಹೊಸ ಸಾಹಸ ಚನ್ನಾಗಿ ನಡೆಯಲಿ. ನಿಮಗೆ ಶುಭವಾಗಲಿ. ಇದನ್ನು ಓದಿದವರೆಲ್ಲಾ, ನೀವಿರುವಲ್ಲಿಗೇ ‘ಧಾರವಾಡ ಡೆಲಿಷಿಯಸ್ ‘ ತರಿಸಿಕೊಳ್ಳಬಹುದು…

ರಾಜಣ್ಣನ ಬಳಿ ಏನೆಲ್ಲಾ ಸಿಗುತ್ತೆ ಗೊತ್ತಾ? ಇಲ್ಲಿದೆ ಪಟ್ಟಿ…. ಸಿಹಿ ತಿಂಡಿಗಳು: ಪೇಢಾ, ರಾಗಿ ಉಂಡಿ, ಬೇಸನ್ ಉಂಡಿ, ಅಂಟಿನ ಉಂಡಿ, ಮೋತಿ ಚೂರು ಕರ್ಜಿಕಾಯಿ (ಪ್ಯಾಕಿಂಗ್ ಕಷ್ಟ) ಖಾರದ ತಿಂಡಿಗಳು ಚಕ್ಲಿ, ತೆಂಗಳು, ಕೋಡಬಳೆ, ಕಾರ್ನ್ ಚೂಡಾ, ಧಾರವಾಡ ಚೂಡಾ, ಸೇವ್ ಖಾರಾ (ಮಿಕ್ಚರ್) ಶೇಂಗಾ ಚಟ್ನಿ, ಪುಡಿ ಶೇಂಗಾ, ಚಟ್ನಿ ದಪ್ಪ,ಅಗಸಿ ಚಟ್ನಿ, ಗುರೆಳ್ಳು, ರಂಜಕ ಕರಿಂಡಿ (ತರಕಾರಿ ಮಿಶ್ರಿತ ಉಪ್ಪಿನಕಾಯಿ ತರದ್ದು) ಎಲ್ಲ ಬಗೆಯ ಉಪ್ಪಿನಕಾಯಿಗಳುಇಷ್ಟು ದೊರೆಯತ್ತವೆ, ತಮಗೆ ಪ್ರತ್ಯೇಕವಾಗಿ ಏನಾದರು ಬೇಕಿದ್ದರೆ ಹೇಳಿ, ಮಾಡಿಸಿ ಕಳಿಸುವೆ.

‍ಲೇಖಕರು Admin

26 February, 2022

1 Comment

  1. T S SHRAVANA KUMARI

    ಅಂತೂ ಇಂಗ್ಲೆಂಡಿನಲ್ಲಿ ಧಾರವಾಡದ ಕಂಪು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading