ಮಹಿಳಾ ಕಲಾವಿದರ ಕಲಾಕೃತಿಗಳ ಪ್ರದರ್ಶನ

ಅಮೃತಾ ಜೋಶಿ. ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ ಪದವಿಯನ್ನು ಪಡೆದಿದ್ದಾರೆ. ವೃತ್ತಿಯಿಂದ ವಿಜ್ಞಾನ ವಿಷಯದ ಉಪನ್ಯಾಸಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಳೆದ ವರ್ಷದ ಮೈಸೂರ ದಸರಾ ಪ್ರದರ್ಶನದಲ್ಲಿ ಇವರ ಕಲಾಕೃತಿ ಪ್ರದರ್ಶನಗೊಂಡಿದೆ.
ಸ್ವಾತಿ ಚವ್ಹಾಣ. ಮೂಲತಃ ಮಹಾರಾಷ್ಠ್ರದ ನಾಶಿಕದವರಾದ ಇವರು ಹುಟ್ಟಿ ಬೆಳೆದಿದ್ದು ನಾಶಿಕದಲ್ಲಿ.
ಪೂನಾ ವಿಶ್ವವಿದ್ಯಾಲಯದಿಂದ ಕಂಪ್ಯೂಟರ ವಿಜ್ಞಾನದಲ್ಲಿ ಪದವಿ ಹಾಗೂ ಎಂ.ಬಿ.ಎ ಪದವಿಯನ್ನು ಪಡೆದಿದ್ದಾರೆ. ಇವರ ಕಲಾಕೃತಿಯು ಕಳೆದ ವರ್ಷದ ಮೈಸೂರದಸರಾ ಪ್ರದರ್ಶನದಲ್ಲಿ ಇವರ ಕಲಾಕೃತಿ ಪ್ರದರ್ಶನಗೊಂಡಿದೆ. ಪ್ರಸ್ತುತವಾಗಿ ಧಾರವಾಡದಲ್ಲಿ ವಾಸವಾಗಿರುವ ಇವರಿರ್ವರು ಕಲಾವಿದ ಮಧು ದೇಸಾಯಿವರ ಮಾರ್ಗದರ್ಶನದಲ್ಲಿ ಕಳೆದ ಒಂದು ವರ್ಷದಿಂದ ಕಲಾಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಬರುವ ಮಂಗಳವಾರ ಎಪ್ರೀಲ್, 2013 ರಂದು ಕಲಾಮಂಡಳ ಸಂಸ್ಥೆಯವತಿಯಿಂದ ಮಹಿಳಾಕಲಾವಿದರಾದ ಶ್ರೀಮತಿ ಅಮೃತಾ ಜೋಶಿ ಹಾಗೂ ಶ್ರೀಮತಿ ಸ್ವಾತಿ ಚವ್ಹಾಣ ಇವರ ಕಲಾಕೃತಿಗಳ ಕಲಾಪ್ರದರ್ಶನವನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಗೃಹದಲ್ಲಿ ಆಯೋಜಿಸಿದೆ.
ಪೃದರ್ಶನದ ಉದ್ಘಾಟನೆಯನ್ನು ಟಾಟಾ ಮೋಟರ್ಸ ಧಾರವಾಡ ಶಾಖೆಯ ಶ್ರೀ ಕುಮಾರ ಸುಬೃಮಣ್ಯಂ ನೆರೆವೆರಿಸಲಿದ್ಧಾರೆ. ನಗರದ ಖ್ಯಾತಹಿರಿಯ ಮಹಿಳಾ ವೈದ್ಯೆ ಡಾ.ಕುಮುದ ತಾವರಗೇರಿ ಮುಖ್ಯಅತಿಥಿಯಾಗಿ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನಯ ಹಿರಿಯ ಕಲಾವಿದೆ ಹಾಗೂ ಜೆ.ಎಸ್.ಎಸ್.ಹಾಲಭಾವಿ ಕಲಾಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಗಾಯತ್ರಿ ದೇಸಾಯಿ ವಹಿಸಲಿದ್ದಾರೆ.
ಪ್ರದರ್ಶನದ ಕೆಲವು ಕೃತಿಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :





0 Comments