– ಜಗದೀಶ್ ಕೊಪ್ಪ
ಪ್ರಿಯ ಜೋಗಿಯವರಿಗೆ, ನಿನ್ನೆ ಧಾರವಾಡಕ್ಕೆ ಗೆಳೆಯ ಜಿ.ಎನ್. ಮೋಹನ್ ಬಂದಿದ್ದರು. ಅವರ ನೆಪದಲ್ಲಿ ಕಳೆದ ರಾತ್ರಿ ನಾನು, ಪ್ರೊ.ಅಶೋಕ್ ಶೆಟ್ಟರ್, ಢಾ.ಸಿದ್ದನಗೌಡ ಪಾಟೀಲ್, ಡಾ.ಎಂ.ಡಿ.ವಕ್ಕುಂದ, ಡಾ. ಬಸುಬೇವಿನಗಿಡದ, ಬಸು ಸೂಳೆಬಾವಿ ಹಾಗೂ ಇತರೆ ಮಿತ್ರರು ರಾತ್ರಿ ಊಟಕ್ಕೆ ಸೇರಿದ್ದೆವು. ನಿಮ್ಮ ಲೇಖನದ ಬಗ್ಗೆ ಚರ್ಚೆಯಾಯಿತು. ನಂತರ ಧಾರವಾಡ ಸಂಭ್ರಮದ ಉಪಾಧ್ಯಕ್ಷರಾದ ಢಾ.ದುರ್ಗದಾಸ್ ಕೈಲಿ ರಾಜಿನಾಮೆ ಕೊಡಿಸಿದೆವು.
ಈಗ ಅದೇ ಎರಡು ದಿನಗಳ ಕಾಲ ಪರ್ಯಾಯ ಸಾಹಿತ್ಯ ಸಮಾರಂಭವನ್ನು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ರೂಪುರೇಷಗಳು ಸಿದ್ದವಾಗುತ್ತಿವೆ. ಬೆಂಗಳೂರು ಹಬ್ಬವೆಂಬ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಹಗಲು ದರೋಡೆ ಈಗ ಸಾಂಸ್ಕೃತಿಕ ನಗರವಾದ ಧಾರವಾಡಕ್ಕೆ ಕಾಲಿಟ್ಟಿರುವುದು ನಮಗೆ ಶಾಕ್ ನೀಡಿದೆ.
ಈ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಲೇಖಕನಿಗೂ ಆತ್ಮಸಾಕ್ಷಿ ಇದೆ ಎಂದು ಭಾವಿಸಿದ್ದೇನೆ. 31 ಲಕ್ಷ ರೂ. ಖರ್ಚಾಗುತ್ತದೆ ಎಂದು ಸಂಘಟಕರು ತುತ್ತೂರಿ ಊದುತ್ತಿದ್ದಾರೆ.






ನಿಮ್ಮೆಲ್ಲರ ಸಹೃದಯತೆ ಮತ್ತು ಪ್ರಜ್ಞಾವಂತಿಕೆ ಅವಘಡಗಳಾಗದಂತೆ ತಡೆಯುತ್ತದೆ ಎಂದು ಬಲ್ಲೆ. ಅದೇ ನೆಮ್ಮದಿ. ಕುಂ.ವೀ ಸರ್, ಎಚ್ ಎಸ್ ಆರ್ ಕೂಡ ಈ ಬೆಳವಣಿಗೆಯನ್ನು ಖಂಡಿಸಿದ್ದಾರೆ. ಅವರೆಲ್ಲರನ್ನು ಓದಿಕೊಂಡು ಬಂದ ನಮಗೆ ಇದನ್ನೆಲ್ಲ ಒಪ್ಪಲು ಹೇಗೆ ಸಾಧ್ಯವಾಗುತ್ತದೆ ಹೇಳಿ. ನಮ್ಮೂರಂತೂ ಹೇಳಿ ಕೇಳಿ ಬಯಲಾಟಗಳ ಊರು. ತಾಳಮದ್ದಲೆಯ ಊರು. ಅಲ್ಲಿ ಮನರಂಜನೆಯೂ ಬಿಕರಿಯಾಗುವುದಿಲ್ಲ.
Jogi avaru thilisiruvudu sariyagide. Nammalli sammelanagalige bandare preethiyind karedu koorisutthare. Bandavarannu scan maduvudilla.
Srinivas Deshpande