ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ದೇಶ’ ಹಾಗೂ ‘ಕಾಲ’

Paraspara Bengaluru.

ಇದು ಎರಡು ವರ್ಷಗಳ ಹಿಂದೆ ನಾವು ‘ದೇಶ ಕಾಲ’ ತ್ರೈಮಾಸಿಕದ ವಿಶೇಷಾಂಕ ಬಂದ ಸಂದರ್ಭದಲ್ಲಿ ಆರಂಭಿಸಿದ ಚರ್ಚೆಯ ಸುತ್ತ ಪ್ರಕಟಗೊಂಡ ಬರಹಗಳ ಸಂಕಲನ. ಈ ಪುಸ್ತಕದ ಕುರಿತು ನಾವು ಹೆಚ್ಚು ಹೇಳಿಕೊಳ್ಳುವ ಅಗತ್ಯವಿಲ್ಲವೆಂದು ಭಾವಿಸಿದ್ದೇವೆ. ಯಾಕೆಂದರೆ ಸುಮಾರು ನಾಲ್ಕು-ಐದು ತಿಂಗಳವರೆಗೂ ನಡೆದ ಈ ವಿಷಯದ ಸುತ್ತಲಿನ ಚರ್ಚೆಯನ್ನು ಇಡೀ ಪುಸ್ತಕವೇ ಹೇಳುತ್ತಿದೆ. ’ದೇಶ ಕಾಲ’ದ ಪತ್ರಿಕೆಯ ವಿಶೇಷಾಂಕ ಒಂದು ನೆಪವಾಗಿತ್ತಷ್ಟೆ; ಅದಕ್ಕೂ ಹಿಂದಿನಿಂದಲೂ ನಮ್ಮ ಕನ್ನಡದ ಸಾಂಸ್ಕೃತಿಕ ಲೋಕವನ್ನು ಆಳುತ್ತಿದ್ದ ವಿವಿಧ ಬಗೆಯ ’ಹೆಜಮನಿ’ಗಳ ಕುರಿತು ನಾವು ಪ್ರತಿಕ್ರಿಯಿಸಬೇಕೆನ್ನಿಸಿತ್ತು. ಆ ಸಂದರ್ಭದಲ್ಲಿ ಬಂದ ’ದೇಶ ಕಾಲ’ ಪತ್ರಿಕೆಯ ವಿಶೇಷಾಂಕ ಇಂತಹ ಸಾಂಸ್ಕೃತಿಕ ’ಹೆಜಮನಿ’ಯ ಒಟ್ಟು ಮೊತ್ತವಾಗಿ ಕಾಣಿಸಿತ್ತು.

ಆ ಪತ್ರಿಕೆಯ ವಿಶೇಷಾಂಕದ ಕುರಿತು ನಾವು ಬರೆದ ಪ್ರತಿಕ್ರಿಯಾತ್ಮಕ ಬರಹಕ್ಕೆ ನಾಡಿನ ಅನೇಕ ಸೃಜನಶೀಲ ಬರಹಗಾರರು, ಚಿಂತಕರು, ಓದುಗರು ಸ್ಪಂದಿಸಿ, ಈ ಚರ್ಚೆಗೊಂದು ವಿಶಾಲತೆಯನ್ನು ದೊರಕಿಸಿಕೊಟ್ಟಿದ್ದಾರೆ. ’ಇತ್ತೀಚಿನ ದಿನಗಳಲ್ಲಿ ಒಟ್ಟು ಸಾಂಸ್ಕೃತಿಕ ರಾಜಕಾರಣದ ಸುತ್ತ ನಡೆದ ಕೆಲವೇ ಅಪ ರೂಪದ ಚರ್ಚೆಗಳಲ್ಲಿ ಇದೂ ಸಹ ಒಂದು. ಈ ಚರ್ಚೆಯ ಒಟ್ಟು ಬರಹಗಳನ್ನು ಒಂದೆಡೆ ಸಂಕಲಿಸಿ ಪುಸ್ತಕರೂಪದಲ್ಲಿ ತನ್ನಿ’ ಎಂದು ಅನೇಕ ಗೆಳೆಯರು ಒತ್ತಾಯಿಸಿದ್ದರಿಂದ ಇದೀಗ ಈ ಪುಸ್ತಕ ಪ್ರಕಟಗೊಳ್ಳುತ್ತಿದೆ. ಕೊನೆಗೂ ಈ ಕೃತಿಯ ಮೌಲ್ಯವನ್ನು, ಒಳಿತು-ಕೆಡಕುಗಳನ್ನು ನಿರ್ಧರಿಸುವವರು ಪ್ರಜ್ಞಾವಂತ ಓದುಗರೇ ಆಗಿರುವುದರಿಂದ, ಅಂತಹ ಓದುಗರೆಲ್ಲರೂ ಕೃತಿಗೆ ವಸ್ತುನಿಷ್ಠವಾಗಿ ಸ್ಪಂದಿಸಲಿ ಎಂಬುದು ನಮ್ಮ ಆಶಯ.

-Manjunath Latha & Chandrashekhar Aijoor

ಪ್ರತಿಗಳಿಗೆ ಸಂಪರ್ಕಿಸಿ:

Chandrashekhar Aijoor -chandrashekharaijoor@gmail.com

Manjunath Latha -manjunathlatha@gmail.com

Ravi Krishna R -ravikreddy@yahoo.com

 

K.L.Chandrashekhar Aijoor

Senior Researcher

Centre for the Study of Social Exclusion & Inclusive Policy,

National Law School of India University, Nagarabavi,

Bangalore-560 072.

 

Ravi Krishna Reddy

Moulyagraha Prakashana

#400, 23rd Main, BTM Lay Out 2nd Stage,

Bangalore-560 076.

 

‍ಲೇಖಕರು G

18 October, 2012

1 Comment

  1. VIJAYKUMAR KALYAN

    Please provide contact no. for obtaining copies of Deshvidena & Kalavideiena

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading