ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರಂಥ ಮಹಾದೇವ ಮತ್ತು…

ದೇವರಂಥ ಮಹಾದೇವ

ಎ ಆರ್ ಮಣಿಕಾ೦ತ್

ಜನ ಅವರನ್ನು ದೇವನೂರು ಅನ್ನುತ್ತಾರೆ.ನನ್ನ ವಾರಿಗೆಯ ಮಿತ್ರರು- ಮಾದೇವ್ ಮಾಮಾ…ಮಾದೇವಣ್ಣ..ಮಾದೇವ್ ಸಾರ್ ಎಂದೆಲ್ಲ ಕರೆಯುತ್ತಾರೆ.  ಕನ್ನಡ ಸಾಹಿತ್ಯ ಲೋಕ ಅವರನ್ನು ತುಂಬಾ ಪ್ರೀತಿಯಿಂದ ದೇವನೂರ ಮಹಾದೇವ ಅನ್ನುತ್ತದೆ. ತುಂಬಾ ಸಂಕೋಚದ, ಅಪಾರ ಜೀವನ ಪ್ರೀತಿಯ ದೇವನೂರ ಮಹಾದೇವ ನನ್ನ ಪಾಲಿಗೆ ನಿರಂತರ ಬೆರಗು. ನನ್ನ ಪಾಲಿಗೆ ಅವರು ದೇವನೂರ ಮಹಾದೇವ ಅಲ್ಲ: ಅವರು ದೇವರಂಥ ಮಹಾದೇವ! ಅವರು ಬರೆದ ‘ಡಾಂಬರು ಬಂದುದು’ ಕಥೆ ನಮಗೆ ಪಿ.ಯೂ.ಸಿ ಯಲ್ಲಿ ಪಾಠವಾಗಿತ್ತು. ಅದರ ಹಿಂದೆಯೇ ‘ಅಮಾಸ’ ಎಂಬ ಕಥೆ ಓದಲು ಸಿಕ್ಕಿತು ಒಡಲಾಳ ನಮ್ಮನ್ನು ತನ್ನ ಅಪರೂಪದ ಭಾಷೆಯಿಂದ ಸೆರೆಹಿಡಿಯಿತು.ಕನ್ನಡದ ಶ್ರೇಷ್ಠ ಲೇಖಕರಲ್ಲಿ ಒಬ್ಬರು ಎಂದು ಈ ಮನುಷ್ಯನನ್ನು ಖಂಡಿತ ಉದಾಹರಿಸಬಹುದು.ತುಂಬಾ ಸಂಕೋಚದ ಈ ಮಹಾದೇವ ನಮ್ಮೆಲ್ಲರ ಆತ್ಮೀಯ ಗೆಳೆಯ ಎಂದು ಒಮ್ಮೆ ಲಂಕೇಶರು ಬರೆದಿದ್ದರು. ಅವತ್ತಿನಿಂದ ನನ್ನ ಪ್ರೀತಿಯ ಲೇಖಕ ಮಹಾದೇವ ಅವರನ್ನು ಭೇಟಿ ಮಾಡಲು…ಅವರೊಂದಿಗೆ ಮಾತಾಡಲು ಚಾತಕ ಪಕ್ಷಿಯ ಥರಾ ಕಾದಿದ್ದೆ.ಅಂಥದೊಂದು ಸದಾವಕಾಶ ಮೊನ್ನೆ,ಜುಲೈ ೧ರ ಭಾನುವಾರ ಒದಗಿ ಬಂತು.ಅವತ್ತು ನನ್ನ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಪುಸ್ತಕ ತೋರಿಸಿದಾಗ…ತಾಯಿಯೊಬ್ಬಳು ಮಗುವನ್ನು ಎತ್ತಿಕೊಂಡು ಖುಶಿಪದುತ್ತಾಳಲ್ಲ..ಅಂಥದೇ ಪ್ರೀತಿಯಿಂದ ಆ ಪುಸ್ತಕವನ್ನು ತೆಗೆದುಕೊಂಡರು ಮಹಾದೇವ.ಈ ಅಪರೂಪದ ಕ್ಷಣವನ್ನು ಕ್ಯಾಮರದಲ್ಲಿ ಸೆರೆ ಹಿಡಿದವನು..ನನ್ನ ತಮ್ಮನಂಥ ಮಿತ್ರ ರಮೇಶ್ ಹಿರೆಜಂಬೂರ್….]]>

‍ಲೇಖಕರು G

7 July, 2012

2 Comments

  1. RameshHirejambur

    ಧನ್ಯವಾದಗಳು ಮಣಿಕಾಂತ್. ಈ ಮೂಲಕ ನಿನ್ನ ಬಹುದಿನಗಳ ಆಸೆ ಪೂರೈಸಿದ ಸಣ್ಣದೊಂದು ಹೆಮ್ಮೆ ನನಗೆ. ಇದರ ಜತೆಗೆ ನಿನ್ನ ಬರಹಗಳೂ ಅವರಂತೆಯೇ ಜನ ಮಾನಸದಲ್ಲಿ ನೆಲೆಯೂರಲಿ…ಎಂಬ ಸಣ್ಣ ಸ್ವಾರ್ಥ ಕೂಡ…

  2. nageshgubbi

    ಅಮ್ಮ ಹೇಳಿದ 8 ಸುಳ್ಳುಗಳು ನಿಜಕ್ಕೂ ಮನಕಲಕುತದೆ. ಅಲ್ಲದೇ ಯಾವ ಯಾವ ತಪ್ಪುಗಳನ್ನು ಮಾಡಬಾರದೆಂದು ತಿಳಿಸಿ ಹೇಳುತದೇ. ಧನ್ಯವಾದಗಳು ಮಣಿಕಾಂತ್ ರವರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading