ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೆಹಲಿಯಲ್ಲಿ Dont miss this!

ನವೀನ್ ಸಾಗರ್

ನಾನು ದೆಹಲಿಗೆ ಬಂದು ಸುಮಾರು 2 ವಸಂತಗಳು ಇನ್ನೇನು ದಾಟಿ ಹೊಗುತ್ತಿದೆ. ದೆಹಲಿ ರಂಗಿನ ಬಿಸಿ ,ಚಳಿಯಲ್ಲಿ ಸುದ್ದಿ ಮನೆಯಲ್ಲಿ ಕಳೆದುಹೂಗಿರುವಾಗ ದೆಹಲಿಯನ್ನು ಅಪರೂಪಕ್ಕೆ ಒಂದು ಸುತ್ತನ್ನು ಹಾಕುವುದು ನನ್ನ ಹವ್ಯಸಗಳಲ್ಲಿ ಒಂದು..ನಮ್ಮ ಸಂಯುಕ್ತ ಕರ್ನಾಟಕದ ಹಿರಿಯ ವರದಿಗಾರರಾದ ವಿಶ್ವನಾಥ್ ಕುಲಕರ್ಣಿಯವರು ಪುಸ್ತಕ ಪ್ರೇಮಿ. ಅವರ ಹತ್ತಿರ ಇರುವ ಪುಸ್ತಕಗಳ ಸಂಖ್ಯೆ ಎಣಿಸತೀರದು ಅವರು ಓದಿ ತಿಳಿದುಕೊಂಡ ವಿಷಯಗಳು ಅವರೊಂದಿಗೆ ಮಾತಿಗೆ ಇಳಿದಾಗೆಲೇ..ತಿಳಿಯುವಂತದ್ದು.

ನಾನು ಕೂಡ ಅಲ್ಪಸ್ವಲ್ಪ ಓದುವ ಅಭಿರುಚಿ ಇಟ್ಟುಕೂಂಡಿದ್ದವನು, ಹಲವು ಬಾರಿ ಪುಸ್ತಕದ ಅಂಗಡಿಗೆ ಹೊಗಿ ಉತ್ತಮ ಪುಸ್ತಕಗಳನ್ನು ಕೊಳ್ಳುವ ಆಸೆಯಾದರೂ ಬೆಲೆ ನೊಡಿ ಮತ್ತೆ ಹಿಂದಿರುಗಿ ಬಂದಿದ್ದೇನೆ. ಜನ್ ಪತ್ ನಲ್ಲಿರುವ ಬ್ರಿಟೀಷ್ ಲೈಬ್ರರಿಗೆ ಹೊಗಿ ಘಂಟೆಗಟ್ಟಲೆ ಅಲ್ಲಿ ಕೂತು ಓದಲು ಅವಕಾಶ ಸಿಗದೆ ಅಲ್ಲಿನ ಗ್ರಂಥಪಾಲಕನಿಂದ ಉಗಿಸಿಕೊಂಡು ಬಂದಿದ್ದೇನೆ. ಯಾಕೆಂದರೆ ಆ ಗ್ರಂಥಾಲಯಕ್ಕೆ ಸದಸ್ಯರಾದವರಿಗೆ ಮಾತ್ರ ಎಷ್ಟು ಸಮಯ ಬೇಕಾದರು ಓದಲು ,ಎರವಲು ತರಲು ಅಲ್ಲಿ ಅವಕಾಶವಿದೆ . ಬೇಟಿ ನೀಡುವ ಜನರಿಗೆ ಕೇವಲ ಅರ್ಧಘಂಟೆ ಮಾತ್ರ ವೀಕ್ಷಣೆಗೆ ಲಭ್ಯ ..ಅಲ್ಲಿ ಕಾಸು ಕೊಟ್ಟು ನಮ್ಮಂತವರಿಗೆ ಸದಸ್ಯತ್ವ ಸಿಗೊದು ಕಷ್ಟದ ಮಾತು ಡಾಲರ್ ಲೆಕ್ಕದಲ್ಲಿ ಹಣ ಕಟ್ಟಬೇಕು.

ಇಂತ ಅನುಭವಗಳನ್ನು ಪಡೆದ ನನಗೆ ನನ್ನದೆಆದ ಪುಟ್ಟ ಗ್ರಂಥಾಲಯ ಇರಬೇಕೆಂಬ ಆಸೆ. ಈ ಆಸೆಗೆ ವಿಶ್ವನಾಥ್ ಕುಲಕರ್ಣಿಯವರು ಪರಿಚಯಿಸಿದ್ದು ದೆಹಲಿಯ ದರಿಯಾಗಂಜ್ ನಲ್ಲಿರುವ ಪುಸ್ತಕ ಸಂತೆ ಅದೇ..ಈಗಿನ ಸಂಡೆ ಬಜಾರ್ ..ಇಲ್ಲಿ ದೇಶ ವಿದೇಶದ ಪುಸ್ತಕಗಳು ಅತಿ ಕಮ್ಮಿ ಬೆಲೆಗೆ ತರಕಾರಿ ಮಾರಾಟವಾಗುವ ಹಾಗೆ ಮಾರಾಟ ವಾಗುತ್ತೆ ..ಇಲ್ಲಿ ಸಿಗೊ ಪುಸ್ತಕಗಳು ಇನ್ನೆಲ್ಲೂ ಸಿಗಲಾರದು ಪುಸ್ತಕ ಪ್ರಿಯರಿಗೆ ಇದು ಜ್ಞಾನಕಾಶಿ, ಅಮೂಲ್ಯ ರತ್ನ ಭಂಡಾರ ಹಳೆಯ ಪುಸ್ತಕಗಳ ಜೊತೆ ಹೊಸ ಪುಸ್ತಕಗಳೂ ಇಲ್ಲಿ ಲಬ್ಯ.ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದ ಜಾಗವಿದು ಎಲ್ಲಾ ವಿಷಯಗಳಿಗೆ ಸಮ್ಮಂದಿಸಿದ ಪುಸ್ತಕಗಳು ಇಲ್ಲಿ ದೊರೆಯುತ್ತದೆ. ಆದರೆ ರವಿವಾರ ಮಾತ್ರ ಈ ಪುಸ್ತಕದ ಸಂತೆ ನೆಡೆಯುತ್ತದೆ ನೀವು ಬಿಡುವಿದ್ದಾಗ ಹೊಗಿ ಬನ್ನಿ ವೀಕ್ಷಣೆ ಮಾಡುವುದಕ್ಕೆ ಅಲ್ಲ ಪುಸ್ತಕವನ್ನು ಕೊಂಡು ಓದುವುದಕ್ಕೆ ..

ಯಾಕೆಂದರೆ ಇಂದಿನ ದಿನಗಳಲ್ಲಿ ಪುಸ್ತಕವನ್ನು ಕೊಂಡು ಓದುವುದಕ್ಕಿಂತ ಎರವಲು ತಂದು ಮತ್ತೆ ಹಿಂದಿರುಗಿಸಿ ನೀಡದೆ ಪುಸ್ತಕ ಕೊಟ್ಟ ಆ ಮಹಾನುಭಾವನನ್ನು ಮರೆಯುವ ದಿನಗಳಿವೆ ..ನಿಮಗೆ ಅತಿ ಕಮ್ಮಿ ಬೆಲೆಗೆ ಪುಸ್ತಕ ಸಿಗುವಾಗ ಕೊಂಡು ಓದುವುದರಲ್ಲಿ ತಪ್ಪಿಲ್ಲ ಅಲ್ಲವೇ..?? ಗೆಳೆಯರೆ ದೆಹಲಿ ಗೆ ಪ್ರವಾಸ ಬಂದರೆ ಭಾನುವಾರ ನಡೆಯುವ ಈ ಸಂತೆಗೆ ಭೆಟಿ ನೀಡಿ ..ಪುಸ್ತಕವನ್ನು ಕೊಂಡು ಓದಿ ..

‍ಲೇಖಕರು G

12 December, 2012

1 Comment

  1. ಸಂತೋಷಕುಮಾರ್

    ನಿಜ.. ನಾನು ದೆಹಲಿಯ ಹಲವು ಪ್ರವಾಸದಲ್ಲಿ ಇ ಸ್ಥಳಕ್ಕೆ ಭೇಟಿ ಕೊತ್ತೀದ್ದೇನೆ. ಒಂದು ದಿನವಿಡೀ ತಿರುಗಾಡಿದರೂ ಮುಗಿಯದ ಪುಸ್ತಕಗಳ ಭಂಡಾರವೇ ಇಲ್ಲಿದೆ. ನಿಜಕ್ಕೂ ಸರಿಯಾಗಿ ಹುಡುಕೋ ಮನಸ್ಥಿತಿ ಮತ್ತು ಅಸ್ಥೆ ಎರಡೂ ಇದ್ದಾರೆ ತುಂಬಾ ಕಡಿಮೆ ಕರ್ಚಿನಲ್ಲಿ ನಮ್ಮ ಮನೆಯ ಗ್ರಂಥಾಲಯ ಶ್ರೀಮಂತ ಗೊಳಿಸಬಹುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading