ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೆಹಲಿಯಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಪ್ರತಿಭಟಿಸುತ್ತಾ…

ದೆಹಲಿಯಲ್ಲಿ ನಡೆದ ಪಾಶವೀ ಕೃತ್ಯ ಎಲ್ಲರ ಮನಸ್ಸನ್ನೂ ಕಲಕಿದೆ, ಎಲ್ಲರ ಮನದಲ್ಲೂ ಒಂದು ಕುದಿ…
’ಆದರೆ ಈಗ ಏನು ಮಾಡಬಹುದು?’, ಇದು ಎಲ್ಲರ ಮನದಲ್ಲೂ ಇರುವ ಪ್ರಶ್ನೆ.
ಇದಕ್ಕೆ ಎರಡು ಭಿನ್ನ ಉತ್ತರ, ಎರಡು ಭಿನ್ನ ನೋಟ ಕೊಟ್ಟ ಎರಡು ಭಿನ್ನ ಪ್ರತಿಕ್ರಿಯೆಗಳು…
ಎರಡೂ ಇಲ್ಲಿವೆ … ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ಬರೆದು ತಿಳಿಸಿ…

IMPORTANT *IMPORTANT *IMPORTANT

ರಾಘವೇಂದ್ರ ಜೋಶಿ

ಮೊನ್ನೆ ದೆಹಲಿಯಲ್ಲಿ ಹೆಣ್ಣುಮಗಳ ಮೇಲೆ ನಡೆದಂಥ ಪೈಶಾಚಿಕ ಕೃತ್ಯದ ಬಗ್ಗೆ ಯೋಚಿಸುತ್ತಿದ್ದೇನೆ. ಇಡೀ ದೇಶದ ಜನತೆ ಈ ಘಟನೆಯನ್ನು ಪ್ರತಿಭಟಿಸುತ್ತಿದ್ದು,ಅತ್ಯಾಚಾರಿಗಳಿಗೆ ಮರಣದಂಡನೆ, ಎನ್ ಕೌಂಟರ್, ಪುರುಷತ್ವಹರಣದಂಥ ಘನಘೋರ ಶಿಕ್ಷೆ ವಿಧಿಸಬೇಕೆಂಬ ಕೂಗು ಕೂಡ ಕೇಳಿಬರುತ್ತಿದೆ. ಹೌದು,ಯಾವುದೋ ಒಂದು ಘನಘೋರ ‘ತ್ವರಿತ ಶಿಕ್ಷೆ’ ಇಂಥ ಮನುಷ್ಯತ್ವವಿಲ್ಲದವರಿಗೆ ಪಾಠವಾದೀತು. ಇದೆಲ್ಲಕ್ಕಿಂತ ಹೆಚ್ಚಾಗಿ ನನ್ನನ್ನು ಅತ್ಯಂತ ಹೆಚ್ಚು ಕದಲಿಸುವ ವಿಷಯವೆಂದರೆ, ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಗಳು ನ್ಯಾಯಾಲಯದ ಕಟಕಟೆಯಲ್ಲಿ ನಿಂತು ನ್ಯಾಯಕ್ಕಾಗಿ ಮೊರೆಯಿಡುವದು. ಕೋರ್ಟುಗಳಲ್ಲಿರುವ ಕೇಸುಗಳು, ಅವುಗಳಿಗೆ ನ್ಯಾಯದಾನ ಮಾಡಬೇಕಾದ ಜಡ್ಜ್ ಗಳ ಸಂಖ್ಯೆ-ಇವುಗಳ ratio ನೋಡಿದರೆ ಆ ಹುಡುಗಿ ಅದೆಷ್ಟು ಬಾರಿ ಕಟಕಟೆಯಲ್ಲಿ ನಿಲ್ಲಬೇಕಾಗಿ ಬರುತ್ತದೋ ಗೊತ್ತಿಲ್ಲ. ಅವಳಿಗೆ ಆದಷ್ಟು ಬೇಗ ನ್ಯಾಯ ಸಿಗಲಿ.
.
ಸ್ನೇಹಿತರೇ, ಅವಘಡಗಳು ಯಾವಾಗ, ಎಲ್ಲಿ ಸಂಭವಿಸುತ್ತವೋ ಹೇಳಲಾಗದು. ಆದರೆ, ಕೊನೆಗಳಿಗೆಯಲ್ಲಿ ನಾವು ತೋರುವ ಒಂದೆರಡು ವಿವೇಕದ ಕ್ರಮಗಳು ನಡೆಯಬಹುದಾದ ಅನಾಹುತಗಳನ್ನು ತಕ್ಕಮಟ್ಟಿಗೆ ಕಡಿಮೆ ಮಾಡಬಹುದು.
.
ರಾತ್ರಿಯಿರಲಿ, ಹಗಲಾಗಿರಲಿ-ಒಂಟಿಯಾಗಿ ಹೆಣ್ಣುಮಕ್ಕಳು ಪ್ರಯಾಣಿಸುತ್ತಿದ್ದರೆ, ನೀವು ಪ್ರಯಾಣಿಸುತ್ತಿರುವ ಆಟೋ/ಟ್ಯಾಕ್ಸಿ ನಂಬರನ್ನು ನಿಮ್ಮ ಕುಟುಂಬದ ಸದಸ್ಯರಿಗೆ ಮೆಸೇಜ್ ಮಾಡಿ. ಸಾಧ್ಯವಾದರೆ, ನೀವು ಹೀಗೆ ಮೆಸೇಜ್ ಮಾಡುತ್ತಿರುವ ವಿಷಯ ಆ ವಾಹನದ ಡ್ರೈವರ್ ಗೆ ಗೊತ್ತಾಗುವಂತೆ ನಟಿಸಿ. ಅಥವಾ ಫೋನ್ ಮೂಲಕ ಹೇಳಿದಂತೆ ನಟಿಸಿ. ಒಟ್ಟಿನಲ್ಲಿ ತನ್ನ ವಾಹನದ ಸಂಖ್ಯೆ ಎಲ್ಲೋ ಒಂದು ಕಡೆ ನಮೂದಾಗುತ್ತಿದೆ ಅಂತ ಆತನಿಗೆ ಮನದಟ್ಟಾಗಬೇಕು.
.
-ಪ್ರಯಾಣದ ವೇಳೆ ತೋರಬಹುದಾದ ಇಂಥ ಯಾವುದಾದರೂ ಟೆಕ್ನಿಕ್ ನಿಮ್ಮ ಬಳಿಯಿದ್ದರೆ ದಯವಿಟ್ಟು ಹೇಳಿಕೊಳ್ಳಿ. ಇದನ್ನು ಓದಿದ ಯಾರಿಗಾದರೂ ಅದು ಉಪಯೋಗಕ್ಕೆ ಬರಬಹುದು.
ನಮ್ಮ ಎಲ್ಲ ದಿನಗಳೂ,ರಾತ್ರಿಗಳೂ ಸುರಕ್ಷಿತವಾಗಿರಲಿ ಎಂಬ ಹಾರೈಕೆಯೊಂದಿಗೆ …
.

.

ದೆಹಲಿ ಮುಖ್ಯಮಂತ್ರಿಗೊಂದು ಮೇಲ್ ಕಳಿಸಿ

ಸಂವರ್ಥ ಸಾಹಿಲ್

Dear friends and family,
.
In light of the recent gangrape in Delhi, we must not further exaggerate the issue with our silence. I urge you to simply send the following letter to the CM of Delhi.
Email address: cmdelhi@nic.in
Thank you. Please forward it to your friends and family too.
Regards,
Aditi
Letter
Dear Ms Dikshit,
.
No words are adequate to express the anger I feel at the continuing and increasing incidence of assaults on men and women in Delhi, of which the brutal gangrape of a 23-year old student on a moving bus on Sunday evening and the targeting of her friend, are only the latest examples.
As Chief Minister of Delhi and, I daresay, as a woman, we look to you to ensure the safety of Delhi’s inhabitants. In addressing the issue of sexual assault in Delhi; I hope you and the administration focus on policing the assaulters instead of the survivors. I hope your focus will not be on asking women to stay indoors after dark or take “adequate safety measures”. People in India have a right to a presence in public spaces, and for too long, the onus of preventing rape and sexual assault has been on the survivors and not on assaulters.
.
I hope you and your administration will create infrastructure that guarantees safety, continually train and sensitize the police and take proactive steps to change the attitudes towards sexual harassment and violence in this part of the country. When people are seen as objects to be dominated and abused; the issue is not of sexual deprivation, or of cultural divides or anything but the simple fact that our society condones and indeed, celebrates sexual harassment and violence as a victory of power, and this needs to stop.
As an inhabitant of this country, I urge you to ensure that:
.
1. The rapists are brought to book speedily and undergo trial as per due process of the law
2. The survivor is given all the medical, psychological and legal aid she requires
3. Strict measures are taken to bring down incidents of sexual harassment and violence in the city – measures that DO NOT involve imposition of a curfew, or a reduction in the freedom of movement of women in any way, discrimination against either gender but focus entirely on the perpetrators of violence
4. The police is continually trained and sensitized on handling cases of sexual assault and to never blame the survivor
5. A large scale awareness and sensitization movement is undertaken to convey a) that sexual violence will be handled with the utmost severity and b) the onus cannot be on people to cover themselves up, lock themselves indoors, or take “precaution” in any way etc, but on us as a society to re-examine our attitudes towards sexual violence.
6. Using this as an example, other sexual assault cases be brought up and this procedure be taken seriously as this is an issue that will only be aggravated with silence.
Regards,
.
(YOUR NAME)

‍ಲೇಖಕರು G

20 December, 2012

2 Comments

  1. Shama Nandibetta

    ಜೋಶಿ ಸರ್ ,

    ಪ್ರತಿ ಬಾರಿ ಆಟೋ ಹತ್ತಿದಾಗಲೂ ನಾನದನ್ನು ಮಾಡಿದ್ದೇನೆ. ಒಂದು ಮೆಸೇಜು ಗಂಡನಿಗೆ ಮತ್ತೊಂದು ತುಂಬ ಹತ್ತಿರದ ಗೆಳೆಯ ಗೆಳತಿಯರಿಗೆ. ಅನಾಹುತ ತಪ್ಪಲಿ ಅಂತಲ್ಲ; ನನಗೆ ಏನೇ ಆದರೂ ಻ಂಥವರನ್ನು ಹುಡುಕಲು ಸುಲಭವಾಗಲಿ ಅಂತ.

  2. umesh desai

    really true this barbaric thing has awakened the nation

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading