’ದೂರು ದಾಖಲಿಸಲು Police stationವರೆಗೂ ಹೋಗಬೇಕಿಲ್ಲ’ – ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ


ದೂರು ದಾಖಲಿಸಲು Police stationವರೆಗೂ ಹೋಗಬೇಕಿಲ್ಲ…You know it!
For your kind attention ; ದೂರು ನೀಡಲು ಪೋಲಿಸ್ ಠಾಣೆಯವರೆಗೂ ಹೋಗಬೇಕಿಲ್ಲ
ಎಷ್ಟೇ ವಿದ್ಯಾವಂತ ಮಹಿಳೆಯರೂ ಪೋಲಿಸ್ ಠಾಣೆಗೆ ಹೋಗಲು ಹಿಂಜರೆಯುವ ಕಾಲದಲ್ಲೇ ಇನ್ನೂ ಇದ್ದೇವೆ. Come on let’s not deny it.
ಹೆಣ್ಣು ಮಕ್ಕಳಿಗೆ ತೊಂದರೆಗಳು ನೂರಿದ್ದು ದೂರು ನೀಡುವ ದಾರಿ ತಡೆಯುವ ವ್ಯವಸ್ಥೆ ಮುನ್ನೂರು ಇರುತ್ತವೆ. ಇದೇ ಕಾರಣಕ್ಕೆ ಸರ್ಕಾರ ಮಹಿಳೆಯರು ದೂರು ನೀಡಲು ಅನುಕೂಲವಾಗುವಂತೆ FIR Kiosk ಪದ್ದತಿಯನ್ನು ಅಳವಡಿಸಿಕೊಂಡಿದೆ. (ಈಗಾಗಲೇ ಭುವನೇಶ್ವರದಲ್ಲಿ ಇದೆ)
ಟಚ್ ಸ್ಕ್ರೀನ್, ಕ್ಯಾಮೆರ, ಮೈಕ್ರೋ ಫೋನ್, ಧ್ವನಿ ಗ್ರಾಹಕ, ಪ್ರಿಂಟರ್ ಮತ್ತು ಸ್ಕ್ಯಾನರ್, GPRS ಸೌಲಭ್ಯಗಳನ್ನು ಒಳಗೊಂಡ ಏಟಿಎಂ ಯಂತ್ರಗಳಂತಹ ಅಕೃತಿ ಮುಂದೆ ನಿಂತು ಅಳಲು ತೊಡಿಕೊಂಡರೆ ಸಾಕು, ದೂರು ದಾಖಲಾಗಿ ಹಿಂಬರಹ ಬರುತ್ತದೆ. ನಮ್ಮ ದೂರಿಗೆ ಇರಬಹುದಾದ ದಾಖಲೆಗಳನ್ನು ಅಲ್ಲಿಯೇ ಸ್ಕ್ಯಾನ್ ಮಾಡಿ ಕಳುಹಿಸ ಬಹುದು.
ಸದ್ಯಕ್ಕೆ ಈ ವ್ಯವಸ್ಥೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಮಾತ್ರ ಲಭ್ಯವಿದ್ದು ನಗರದಾದ್ಯಂತ ವಿಸ್ತರಿಸಿಕೊಳ್ಳುವ ಉದ್ದೇಶ ಹೊಂದಿದೆಯಂತೆ.
ಸತತ ವಿದ್ಯುತ್ಛ್ಹಕ್ತಿ ಮತ್ತು ಇಂಟರ್ನೆಟ್ ಅವಶ್ಯಕತೆ ಇರುವುದರಿಂದ ಮತ್ತು ಇನ್ನೂ ಹತ್ತು ಹಲವು ಎದ್ದು ಕಾಣುವ ಕಾರಣಗಳಿಂದ ಈ ವ್ಯವಸ್ಥೆ ೧೦೦% ಸೋಲಲಿದೆ…ಆದರೂ ನನಗೆ ಭರವಸೆಯಿದೆ ಎಂದಿನಂತೆ !
ಅಂದ ಹಾಗೆ ಈಗಾಗಲೇ ಫೋನ್ ಮೂಲಕ ದೂರು ದಾಖಲಿಸುವ ವ್ಯವಸ್ಥೆ ಈ ಊರಿನಲ್ಲಿ ಇರುವುದು ತಿಳಿದಿದೆ ಅಲ್ಲ್ವಾ ? ಯಾವ ಅಧಿಕಾರವ್ಯಾಪ್ತಿಯ ಪೋಲಿಸ್ ಠಾಣೆಯಲ್ಲೂ ಯಾರೂ ಯಾವುದೇ ದೂರನ್ನು ಸಲ್ಲಿಸಬಹುದು ಅದೂ ನಿಮಗೆ ಗೊತ್ತಿದೆ.
ಮಹಿಳಾ ಸಹಾಯವಾಣಿ ಸಂಖ್ಯೆ : 1091 ಅಂತೂ ನೆನಪಿಡಲು ಬಲು ಸುಲಭ.
 

‍ಲೇಖಕರು G

November 19, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. sangeetha raviraj

    Ee vyvasthe bandidre thumb anukoola agtithu . nimma kaalajige vishesha abinandanegalu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: