ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದುಃಖ ದೂರ ಕರೊ ಮೋರಾ..

ಇಂದು ಸುಪ್ರಸಿದ್ಧ ಹಿಂದುಸ್ಥಾನಿ ಗಾಯಕ ಮಲ್ಲಿಕಾರ್ಜುನ ಮನ್ಸೂರ್ ಅವರ ಹುಟ್ಟುಹಬ್ಬ.

ಇನ್ನೋರ್ವ ಹಿಂದುಸ್ಥಾನಿ ಗಾಯಕಿ ಸವಿತಾ ನುಗಡೋಣಿ ಮನ್ಸೂರರನ್ನು ಭೇಟಿ ಮಾಡಿದ ಪ್ರಸಂಗವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಸವಿತಾ ಅಮರೇಶ ನುಗಡೋಣಿ

। ಲೇಖಕರು ಪ್ರಖ್ಯಾತ ಹಿಂದುಸ್ಥಾನಿ ಗಾಯಕರು ।

ಮನಸೂರ ಅವರನ್ನು ಮೊದಲ ಸಲ ನೋಡಿದ್ದು ಅಥಣಿಯ ಗಚ್ಚಿನಮಠದಲ್ಲಿ
ಅವರು ಅಥಣಿಗೆ ಪ್ರತಿ ವರ್ಷ ಭೇಟಿ ಕೊಡುತ್ತಿದ್ದರು
ಅಲ್ಲಿ ಇಡೀ ದಿನ ಸಂಗೀತದ ಸೇವೆ ಮಾಡುತ್ತಿದ್ದರು

ಅವರು ಅಥಣಿಗೆ ಬರುವ ವಿಷಯ ತಿಳಿದ ನಂತರ ನಾವು ಅವರನ್ನು ನೋಡಬೇಕೆಂದು ತೀರ್ಮಾನಿಸಿ ಹೊರಟೇಬಿಟ್ಟೆವು

ಮುಂಜಾನೆಯ ಸಮಯದಲ್ಲಿ ಮಠದ ಆವರಣ ಪ್ರವೇಶ ಸುತ್ತಿದ್ದಂತೆ ತಂಬೂರಿಯ ನಾದ ತುಂಬಿ ಹೋಗಿತ್ತು
ಒಂದೆಡೆ ದೇವರ ಪೂಜೆ ನಡೆಯುತ್ತಿತ್ತು ಗಂಟೆಗಳ ನಿನಾದ ದೇವರ ಮುಂದಿರುವ ದೀಪ ಮಠದ ಆವರಣದಲ್ಲಿ ಮನಸೂರ ಅವರ ದರುಶನ..

ಅಬ್ಬ! ಹೇಳಲು ಸಾಧ್ಯವಿಲ್ಲ ಅನುಭವಿಸಬೇಕು

ಅವರು ಬಿಳಿ ಅಂಗಿ ಧೋತರ ತಲೆಯ ಮೇಲೊಂದು ಕಪ್ಪು ಬಣ್ಣದ ಟೊಪ್ಪಿಗೆ ಹಣೆಯಲ್ಲಿ ವಿಭೂತಿ. ಆಹಾ.. ದೇವರನ್ನು ನೋಡಿದಂತೆ ಆಯಿತು

ಅವರು ತಂಬೂರಿ ಶ್ರುತಿ ಮಾಡುತ್ತಿದ್ದರು. ನಾವು ಅವರ ಕಾಲು ನಮಸ್ಕರಿಸಲು ಹೋದೆವು. ಹಾಗೆ ನಮ್ಮ ಪರಿಚಯ ಮಾಡಿಕೊಂಡೆವು
ತಂಬೂರಿ ನುಡಿಸ್ತಿ ? ಎಂದು ಕೇಳುತ್ತ ನನಗೊಂದು ತಂಬೂರಿ ಕೊಟ್ಟೇಬಿಟ್ಟರು. ಈ ಭಾಗ್ಯ ಯಾರಿಗೆ ಸಿಗುತ್ತದೆ ಹೇಳಿ?
ತಬಲಾ ತಂಬೂರಿ ಶ್ರುತಿ ಗೊಳಿಸಿ ಷಡ್ಜ ಹಚ್ಚಿದರು ಭೈರವ ರಾಗದ ಸ್ವರಗಳು ತುಂಬಿದವು

ದುಃಖ ದೂರ ಕರೊ ಮೋರಾ….

‍ಲೇಖಕರು avadhi

12 September, 2020

1 Comment

  1. T S SHRAVANA KUMARI

    ಚಂದ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading