ದಿನೇಶ್ ಅಮೀನ್ ಮಟ್ಟು
ಸರಿ ತಪ್ಪುಗಳನ್ನು ನಿರ್ಧರಿಸಲಾಗದಷ್ಟು ಒತ್ತಡದಲ್ಲಿದ್ದೆ. ರಾಜೀನಾಮೆ ಪತ್ರ ಬರೆಯುವಾಗ ಕೈ ನಡುಗುತ್ತಿತ್ತು, ಅಕ್ಷರಗಳು ಸೊಟ್ಟಗಾಗುತ್ತಿತ್ತು.ನಾಲ್ಕಾರುಬಾರಿ ಹರಿದುಹಾಕಿದೆ. ಕೊನೆಗೆ ಅದೇ ಸೊಟ್ಟಗಿನ ಅಕ್ಷರಗಳಲ್ಲಿ ರಾಜೀನಾಮೆ ಪತ್ರ ಬರೆದೆ. ನಿಜ ಹೇಳಬೇಕೆಂದರೆ ಜೋರಾಗಿ ಬಾಯಿಕೊಟ್ಟು ಅಳಬೇಕೆಂದು ಅನಿಸುತ್ತಿತ್ತು. ಪತ್ರಿಕೆಯ ಬರವಣಿಗೆ ನನ್ನ ಜೀವ. ಕಳೆದ ನಾಲ್ಕು ವರ್ಷಗಳಲ್ಲಿ ಎರಡು ಬಾರಿ ಸಾವಿನ ಬಾಗಿಲು ತಟ್ಟಿ ಬಂದಿದ್ದೆ. ಆಗಲೂ ನನ್ನನ್ನು ಉಳಿಸಿದ್ದು ಬರವಣಿಗೆ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದ ಸಾವಿರಾರು ಓದುಗರ ಪ್ರೀತಿ. ಅವರಲ್ಲಿ ಬಹಳಷ್ಟು ಮಂದಿಯನ್ನುನಾನು ನೋಡಿರಲೇ ಇಲ್ಲ, ಮುಂದೇದಾರೂ ನೋಡುತ್ತೇನೋ ಇಲ್ಲವೋ ಗೊತ್ತಿಲ್ಲ.
ಇಂತಹ ಓದುಗರಿಗೆ ನಾನು ದ್ರೋಹ ಬಗೆಯುತ್ತಿದ್ದೆನೋ ಏನೋ ಎಂದು ಒಂದು ಕ್ಷಣ ಮನಸ್ಸು ಹೊಯ್ದಾಡುತ್ತಿತ್ತು. ಜನರಿಂದ ಇಷ್ಟೊಂದು ಪ್ರೀತಿ-ಅಭಿಮಾನಗಳನ್ನು ಗಳಿಸಲು ಸಾಧ್ಯವಾಗುವಂತಹ ಅವಕಾಶ ಕಲ್ಪಿಸಿದ ಪ್ರಜಾವಾಣಿ ಬಿಟ್ಟು ತಪ್ಪು ಮಾಡುತ್ತಿದ್ದೆನೇನೋ ಎಂಬ ಅಳುಕು ಕಾಡುತ್ತಿತ್ತು. ನನ್ನ ಕಡೆ ನಿರೀಕ್ಷೆಯಿಂದ ನೋಡುತ್ತಿದ್ದ ನೂರಾರು ಯುವಪತ್ರಕರ್ತರನ್ನು ನಿರಾಶೆಗೊಳಿಸುತ್ತಿದ್ದೆನೇನೋ ಎಂಬ ಅಪರಾಧಿ ಪ್ರಜ್ಞೆಯೂ ಚುಚ್ಚುತ್ತಿತ್ತು. ನನ್ನ ಪಾಲಿನ ಆಮ್ಲಜನಕವಾಗಿರುವ ಬರವಣಿಗೆಯನ್ನು ಬಿಟ್ಟು ಬದುಕುಬಲ್ಲೆನೇ ಎಂಬ ಆತಂಕವೂ ಇತ್ತು.
ಏನನ್ನೂ ತೀರ್ಮಾನಿಸಲಾಗದೆ ಎರಡು ದಿನ ಒದ್ದಾಡಿದೆ. ಯಾರಲ್ಲಿಯೂ ಕೇಳಿದರೂ ಹೊಸ ಜವಾಬ್ದಾರಿಯನ್ನು ಒಪ್ಪಿಕೊಳ್ಳಿ ಎಂದು ಹೇಳಿದವರೇ ಹೆಚ್ಚು. ಕೊನೆಗೂ ಮೇ ೧೩ರ ಸಂಜೆ ೫.೧೦ಕ್ಕೆ ರಾಜೀನಾಮೆ ಪತ್ರವನ್ನು ಕೊಂಡೊಯ್ದು ಸಂಪಾದಕರಾದ ಕೆ.ಎನ್.ಶಾಂತಕುಮಾರ್ ಕೈಗಿಟ್ಟೆ. ಒಂದು ಕಾಗದದ ಹಾಳೆ ಇಷ್ಟೊಂದು ಭಾರ ಕೂಡಾ ಇರಬಹುದೆಂದು ಆಗಲೇ ನನಗೆ ಗೊತ್ತಾಗಿದ್ದು. ಅಲ್ಲಿ ನಡೆದುದನ್ನು ಮುಂದೊಂದು ದಿನ ಹೇಳುವೆ.
ನನ್ನ ತೀರ್ಮಾನವನ್ನು ಶೇಕಡಾ೯೯ರಷ್ಟು ಮಂದಿ ಒಪ್ಪಿ ಶುಭಕೋರಿದ್ದಾರೆ. ಇವರಲ್ಲಿದ್ದ ಯುವಪತ್ರಕರ್ತರು ಬೇಸರ ಮಾಡಿಕೊಂಡಿದ್ದಾರೆ. ಕೆಲವರು ನಾನು ಬದಲಾಗಬಹುದೇನೋ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ರಾಜೀನಾಮೆ ನೀಡಿದ ನಂತರದ ಒಂದು ವಾರದ ಅವಧಿಯಲ್ಲಿ ನನ್ನ ಮೊಬೈಲ್ ರಿಂಗ್ ಆಗುವುದು ನಿಂತಿಲ್ಲ, ಎಸ್ ಎಂ ಎಸ್ಗಳ ಹೊಳೆ ಬತ್ತಿಲ್ಲ. ಯಾರ ಜತೆಗೂ ಮಾತನಾಡಲಾಗದಷ್ಟು, ಯಾವ ಎಸ್ಸೆಮ್ಮೆಸ್ಗೂ ಉತ್ತರಿಸಲಾಗದಷ್ಟು ಒತ್ತಡ. ಇವೆಲ್ಲ ನನಗೆ ಹೊಸತು. ದಯವಿಟ್ಟು ಯಾರೂ ಬೇಸರಮಾಡಿಕೊಳ್ಳಬೇಡಿ. ಒಂದು ವಾರದ ಅವಧಿಯ ನನ್ನ ವರ್ತನೆನೋಡಿ ನನ್ನ ಬಗ್ಗೆ ತೀರ್ಮಾನಕೈಗೊಳ್ಳಬೇಡಿ. ನೀವು ತೋರಿಸುತ್ತಾ ಬಂದ ಪ್ರೀತಿಗೆ ಮೋಸ ಮಾಡುವುದಿಲ್ಲ, ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ. ಸ್ವಲ್ಪ ಟೈಮ್ ಕೊಡಿ, ಎಲ್ಲರೊಡನೆ ಮಾತನಾಡುತ್ತೇನೆ. ನಿಮ್ಮವನಾಗಿಯೇ ಉಳಿಯುತ್ತೇನೆ. ನಿಮ್ಮ ಪ್ರೀತಿ,ವಿಶ್ವಾಸ ಸದಾ ಇರಲಿ. ಮತ್ತೊಮ್ಮೆ ಎಲ್ಲರಿಗೂ ತುಂಬಿದ ಹೃದಯದ ಕೃತಜ್ಞತೆಗಳು.
ಎಂದೆಂದೂ ನಿಮ್ಮವಲ್ಲೊಬ್ಬ
ದಿನೇಶ್ ಅಮಿನ್ ಮಟ್ಟು.






ಕಣ್ಣು ತುಂಬಿ ಬಂತು ಸರ್. ಪ್ರಾಮಾಣಿಕ ಮನಸು ಮಾತ್ರ ಇಂಥಹ ಪತ್ರ ಬರೆಯಲು ಸಾಧ್ಯ. ಹೆಣ್ಣು ಮಗಳೊಬ್ಬಳು ತವರು ಬಿಟ್ಟು ಹೊರಡುವಾಗಿನ ಸಂಕಟ ಅವಳೊಬ್ಬಳಿಗೇ ಅಥಱವಾಗುವಂಥದ್ದು. ಇದು ಅಂಥದೇ ನೋವು. ನಾವೆಲ್ಲಾ ನಿಮ್ಮ ಬರಹ ಮಿಸ್ ಮಾಡಿಕೊಳ್ಳುತ್ತಿರುವುದು ನಿಜ. ಆದರೆ ನೀವಿರುವ ಹುದ್ದೆಯಲ್ಲಿ, ಜನಪರವಾದ ಕೆಲಸಗಳನ್ನು ನಿಮ್ಮಂಥ ಸಮಾನತೆಯ ಕನಸುಗಳಿರುವ ನಿಷ್ಪಕ್ಷವಾದ ಮನಸಿರುವವರು ಮಾಡಲು ಖಂಡಿತ ಸಾಧ್ಯವಿದೆ.ನೀವು ಎಂದಿಗೂ ತಪ್ಪು ನಿಧಾಱರಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಎಂದಿಗೂ ಬದಲಾಗುವುದಿಲ್ಲ ಎಂಬ ದೃಢ ವಿಶ್ವಾಸ ನನ್ನದು. All the best sir.
ನಮ್ಮ ನಿರ್ಧಾರಗಳು ತಪ್ಪೋ ಒಪ್ಪೋ ಅನ್ನುವ ವಿಚಾರ ಮನದಟ್ಟಾಗುವುದು, ಅದರ ಪ್ರತಿಫಲದಿಂದ, ಪರಿಣಾಮದಿಂದ.
ತಾವು “ಮುಖ್ಯ ಮಂತ್ರಿಯ ಮಾಧ್ಯಮ ಸಲಹೆಗಾರ” ಅನ್ನುವ ಸ್ಥಾನವನ್ನು ಈ ನಾಡಿನ ಜನತೆಯ ನೆನಪಿನಲ್ಲಿ ಉಳಿಸಿಹೋಗುವ ಕೆಲಸ ಮಾಡಿದರೆ, ತಮ್ಮ ನಿರ್ಧಾರ ತಪ್ಪಾಗಿ ಉಳಿಯದು.
ಹಾಗಾಗಿಲ್ಲವಾದರೆ ಆ ಸ್ಥಾನ ತಮ್ಮ ವ್ಯಕ್ತಿ ಪರಿಚಯ ಪತ್ರದಲ್ಲಿ ಒಂದೆರಡು ಸಾಲಿನ ವಿಷಯವಾಗಿ ಉಳಿದುಬಿಡುತ್ತದೆ.
ತಾವು ತಮ್ಮ ಪತ್ರಕರ್ತ ಮನೋಭವವನ್ನು ಉಳಿಸಿಕೊಂಡು, ತಮ್ಮ ಬರವಣಿಗೆಯನ್ನು ಉಳಿಸಿ, ಬೆಳೆಸಿಕೊಂಡು ಮುಂದುವರೆದರೆ, ನಮ್ಮಂಥವರಿಗೆ ತಮ್ಮ ನಿರ್ಧಾರ ಹೆಚ್ಚೇನೂ ತಪ್ಪಾಗಿಲ್ಲ ಅಂತ ಅನಿಸಬಹುದು.
ಹಾಗಾಗದಿದ್ದರೆ, ಐದು ವರುಷಗಳ ನಂತರ (ಐದು ವರುಷಗಳು ಖಾತ್ರಿಯೇ?) ದಿನೇಶ್ ಅಮೀನ್ ಮಟ್ಟು ಜನರ ನೆನಪಿನಿಂದಲೂ ಮರೆಯಾಗಬಹುದು.
ಆಗ, ತಪ್ಪೋ ಸರಿಯೋ ಅನ್ನುವ ಇಂದಿನ ತಮ್ಮ ಈ ಪ್ರಶ್ನೆಗೆ ಉತ್ತರ, ಹುಡುಕದೇ ಸಿಕ್ಕಿಬಿಡಬಹುದು.
olleyadagali,
ತುಂಬಾ ಆಪ್ತ ಮಾತುಕತೆಯಂತೆ ಮನಸ್ಸಿಗೆ ಮಾತುಗಳು ಹತ್ತಿರವಾದವು. ಸಾರ್, ನಿಮ್ಮ ನಡೆಗೆ ಕೆಲವು ಸಿನಿಕ ಪ್ರತಿಕ್ರಿಯೆಗಳು ಇರಬಹುದು. ಆದರೆ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ನಿಮ್ಮಂಥವರ ಅಗತ್ಯವಿತ್ತು ಅನ್ನಿಸುತ್ತೆ. ಮಾಧ್ಯಮ ಪ್ರತಿನಿಧಿ ಎನ್ನುವ ಹುದ್ದೆ ಈ ತನಕ ಸರಕಾರದ ಬಗ್ಗೆ, ಸ್ವತಃ ಮುಖ್ಯಮಂತ್ರಿಗಳ ಬಗ್ಗೆ ನಕಾರಾತ್ಮಕ ಸುದ್ದಿಯಾಗದ ಹಾಗೆ ಕಾಯುವುದೇ ಆಗಿತ್ತು. ಈ ಬಗೆಯ ಕಾಯುವಿಕೆಯೇ ನಿಮ್ಮ ಹುದ್ದೆಯೂ ಆದರೆ ಸಹಜವಾಗಿ ನಮಗೆಲ್ಲಾ ಬೇಸರವಾಗುತ್ತದೆ. ಈ ಹುದ್ದೆಗೆ ಅಂಟಿದ ಈ ಬಗೆಯ ಕಳಂಕವನ್ನು ದಾಟಿಸುವ ಹಾಗೆ ನೀವು ಕೆಲಸಮಾಡಬೇಕೆಂದು ನಮ್ಮ ಬಯಕೆ. ಆದರೂ ನಿಮ್ಮದು ಕತ್ತಿಯಂಚಿನ ದಾರಿ..ಎನ್ನುವುದು ನಮಗೂ ತಿಳಿದಿದೆ. ಇದನ್ನು ಹೇಗೆ ನಿಭಾಯಿಸುತ್ತೀರಿ ಎನ್ನುವ ಕುತೂಹಲವಿದೆ. ಅಂತೆಯೇ ಸಮರ್ಥವಾಗಿ ನಿಭಾಯಿಸುತ್ತೀರಿ ಎನ್ನುವ ಭರವಸೆಯೂ ಇದೆ.
ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಅಂದಮೇಲೆ ಮುಖ್ಯ ಮಂತ್ರಿಗಳ ಹಿತದೃಷ್ಟಿಯಿಂದ ಅವರ image ದೃಷ್ಟಿಯಿಂದ ಅದನ್ನು promote ಮಾಡುವ ಮಾಡುವ ದೃಷ್ಟಿಯಿಂದ ಎಲ್ಲವನ್ನೂ ನೋಡಬೇಕಾಗುತ್ತದೆ ಅಲ್ಲವೇ ?
ಇತ್ತೀಚಿನ ದಿನಗಳಲ್ಲಿ ತುಂಬಿರುವ ಧಿಡೀರ್ ಪತ್ರ ಕರ್ತರ ನಡುವೆ ಅಧ್ಯಯನ ಶೀಲ ರಾದ ನಿಮ್ಮಂತವರು ಪ್ರಜಾವಾಣಿ ಯಿಂದ ವಿರಮಿಸುತ್ತಿರುವುದು ಓದುಗರಿಗೆ ನಸ್ಟ.
ಎಚ್ ವಯ್ ಶಾರದಾ ಪ್ರಸಾದ್ ರ ಆದರ್ಶ ನಿಮಗಿರಲಿ .
dinesh, ನಿಮ್ಮ ತಲ್ಲಣ ಅರ್ಥವಾಗುತ್ತದೆ. ಹೊಸ ಹೊಣೆಗಾರಿಕೆಯಲ್ಲಿಯೂ ನೀವು ಇದುವರೆಗೆ ಪಾಲಿಸಿಕೊಂಡು ಬಂದಿರುವ ಧೋರಣೆಯನ್ನು ಮುಂದುವರಿಸುವುದು ಸಾಧ್ಯ. ಸ್ಥಾನ ಬಲದಿಂದ ಇನ್ನಷ್ಟು ಪರಿಣಾಮಕಾರಿಯಾಗಬಹುದು. ನಿಜಕ್ಕೂ ಹೊಸ ಹುದ್ದೆ ದೊಡ್ಡ ಸವಾಲು. ಅದನ್ನು ಯಾವುದೇ ಅಳುಕಿಲ್ಲದೆ ನಿರ್ವಹಿಸಿ.. ಒಳ್ಳೆಯದಾಗಲಿ…
ಸಾರ್, ತಾವು ಹುದ್ದೆ ಒಪ್ಪಕೊಂಡಿರುವುದು ಸಂತೋಷ. ಬುದ್ದಿವಂತರು ಯಾಕೆ ಅಧಿಕಾರದಿಂದ ದೂರ ಇರಬೇಕು. ನೀವೆನು ಲಾಭಿ ಮಾಡಿ ಹುದ್ದೆ ಪಡೆದಿಲ್ಲ. ಇದೊಂದು ಬೇರೆ ಅನುಭವ. ಅದನ್ನು ತಾವು ನಿಭಾಯಿಸುತ್ತೀರಿ. ಸೋಮವಾರ ತಮ್ಮ ಬರಹ ಓದುವದಿಲ್ಲವಲ್ಲ ಎಂಬ ಬೇಸರ ನಮಗಿದೆ. ಆದರೆ ತಾವು ಆ ಹುದ್ದೆಯ ಮಹತ್ವವನ್ನು ಸಾಬೀತು ಮಾಡುತ್ತೀರಿ ಎಂಬ ವಿಸ್ವಾಸ ನಮಗಿದೆ.ಅಧಿಕಾರ ಇದ್ದಾಗ ಇನ್ನೂ ಒಳ್ಳೆಯ ಕೆಲಸ ಮಾಡಬಹುದು.
ಪ್ರೀತಿಯ ದಿನೇಶ್ ಅಮ್ಮಿನಮಟ್ಟು ಆವರಿಗೆ ಹಾರ್ದಿಕ ಶುಭಾಶಯಗಳು.
ನಿಮ್ಮ ಬರವಣಿಗೆಯ ಮೂಲಕ ಪರಿಚಯವಾಗಿರುವ ನಿಮ್ಮ ವ್ಯಕ್ತಿತ್ವವನ್ನು ಬಲ್ಲವರಿಗೆ
ಇದು ನಿಮಗೆ ದೊರೆತ ದೇಶ ಕಟ್ಟುವ ಇನ್ನೊಂದು ಬಗೆಯ ಅವಕಾಶ ಎಂದೇ ಆರ್ಥವಾಗುತ್ತದೆ.
ನಿಮಗೆ ಎಲ್ಲ ಒಳಿತನ್ನೂ ಹಾರೈಸುತ್ತೇನೆ.
ಪದ ಕುಸಿಯೆ ಪತ್ರಿಕೆ ಇಹುದು ಮಂಕುತಿಮ್ಮ!
ಪಂಡಿತಾರಾಧ್ಯ
ಮೈಸೂರು
nimma ee patrave nimma pramanikate heluthade.mukya mantrigalige nimmahanatavra salehegrara agatya hagoo namma rajyakku hita.
ದಿನೇಶ್ ನಿಮ್ಮ ಅಗತ್ಯ ನೂತನ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗಿದೆ, ಪ್ರಜಾವಾಣಿ ಅದರ ಪಾಡಿಗೆ ಅದಿರುತ್ತೆ, ನಿಮಗೆ ಹಾರ್ದಿಕ ಅಭಿನಂದನೆಗಳು
ಕುಂವೀ
Dear Dinesh, You have taken right decision at right time. With all respect to Prajavani, I must say that this paper is fast changing. There must something very wrong inside, Best wishes
Manorangada hoydata intha sandharbhagalalli sahaja,aa novannu geleyaragi arthamadikonde shubhakoruve.aa dina nimage phone madidde.nivu swikarisalilla…nimma manasthiti avatte tilakonde…
ದಿನೇಶ್ ಸರ್,ತಾವು ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರರಾಗಿ ಹೊಸಹುದ್ಧೆ ವಹಿಸಿಕೊಳ್ಳುವ ನಿರ್ಧಾರದಿಂದ ಒಂದೆಡೆ ಸಂತೋಷವಾದರೂ ಇನ್ನೊಂದೆಡೆ ತಮ್ಮಅನುಪಸ್ಥಿತಿಯಿಂದ ನಿರಂತರ ಪ್ರಜಾವಾಣಿ ಯಲ್ಲಿ ತಮ್ಮ ಲೇಖನ ಗಳನ್ನು ಓದುತ್ತಿದ್ದ ನನಗೆ ಇನ್ನುಮುಂದೆ ಪತ್ರಿಕೆ ಓದುವುದು ಕೊಂಚ ಬೇಸರ ಆಗಬಹುದು. ಈ ಹಿಂದೆ ಖ್ಯಾತ ವ್ಯಂಗ ಚಿತ್ರಕಾರರಾದ ಮಹಮ್ಮದ್ ಅವರು ಪ್ರಜಾವಾಣಿ ಪತ್ರಿಕೆಯಿಂದ ದೂರ ಸರಿದಾಗ ಇದೇ ರೀತಿಯ ಖೇದ ಮನಸ್ಸಿಗೆ ಉಂಟಾಗಿತ್ತು.
ತಮಗೆ ಶುಭವಾಗಲಿ, ವಂದನೆಗಳು. ರಮೇಶ್ ಕಾಮತ್,ರಿಪ್ಪನ್ ಪೇಟೆ.
I hope, you will get success, satisfaction in your new job, and you deserved it too. but still there is a pain in the corner of our hearts as we are missing your articles. but this is the life, ‘prajavani’ was able to fill the vaccume created by ‘TEE YESSAR’ too.
congratulations ಸರ್, ಶುಭವಾಗಲಿ,ನೇವು ಸಮರ್ಥವಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತೀರಿ ಎಂಬ ನಂಬಿಕೆ ನಮಗಿದೆ.-ಬೇಗೂರ್
manya mukhyamanthrigalu uttama kaarya pade aayke madi kolluthiddare.nimma aaykeye udaaharane,abhinandane nimagoo ,mukkhyamanthrigaligoo.shubhavaagali…bharat kumar mumbai
ನಿಮಗೆ ಈಗ ಹೆಚ್ಚಿನ ಅವಕಾಶಗಳಿವೆ. ನೀವು ಮುಖ್ಯ ಮಂತ್ರಿಗಳ ಮಾಧ್ಯಮ ಸಲೆಹಗಾರರಾಗಿ ಅವರಿಗೆ ಮಾಹಿತಿ ನೀಡುತ್ತಾ ಅವರು ಸರಿದಾರಿಯಲ್ಲಿ ನಡೆವಂತೆ ಸೂಚಿಸುವ ಅವಕಾಶ ನಿಮಗಿದೆ. ನಿಮ್ಮ ಪ್ರಾಮಾಣಿಕತೆಯಲ್ಲಿ ನಮ್ಮ ರಾಜ್ಯದ ಹಿತಾಕಾಂಕ್ಷೆಯಿದೆ. ಲೇಖಕರಾಗಿ ನಮ್ಮೆಲ್ಲರ ಮನ ಮುಟ್ಟಿದ ನೀವು ಜನಪರವಾಗಿಯೇ ಇದ್ದವರು. ಆ ಕೆಲಸವನ್ನು ಇನ್ನೂ ಹೆಚ್ಚಾಗಿ ಮುಂದುವರೆಸಬಹುದೆಂದು ನಾನು ಭಾವಿಸಿದ್ದೇನೆ. ನಿಮಗೆ ಶುಭವಾಗಲಿ. ಉದಯಕುಮಾರ ಹಬ್ಬು, ಕಿನ್ನಿಗೋಳಿ
ಪ್ರಿಯ ದಿನೇಶ್
ನಿಮ್ಮನ್ನು ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಂತ ಗುರುತರ ಹುದ್ದೆಯಲ್ಲಿ ನೋಡುವುದು ನನಗೆ ತುಂಬಾ ಇಷ್ಟ. ಬಹಳ ಅಪರೂಪಕ್ಕೆ ಅರ್ಹರಿಗೆ ಯಾವ ವಶೀಲಿಬಾಜಿ ಇಲ್ಲದೆ ಇಂತಹ ಹುದ್ದೆಗಳು ದೊರೆಯುತ್ತವೆ. ಈ ಹುದ್ದೆಗಾಗಿ ಎಷ್ಟು ಜನ ಕಾದಿದ್ದಿರಬಹುದು ಎಂಬುದು ನಿಮಗೆ ಗೊತ್ತಿಲ್ಲದ್ದೇನಲ್ಲ. ಸಿದ್ದರಾಮಯ್ಯನಂತಹವರ ಜೊತೆಗೆ ನಿಮ್ಮಂತಹವರಿದ್ದರೆ ತುಂಬಾ ಒಳ್ಳೆಯದು ಅಂತ ನಮ್ಮಂತಹ ಹಲವರ ಅಭಿಪ್ರಾಯ. ನೀವು ಬದಲಾಗುವುದು, ಕೆಡುವುದು ಎಲ್ಲಾ ಊಹಾಪೋಹದ ಮಾತು. ಕೆಡುವುದಾದರೆ ಈ ಹೊತ್ತಿಗೆಲ್ಲಾ ಕೆಡಲು ನಿಮಗೆ ಬೇಕಾದಷ್ಟು ಅವಕಾಶಗಳಿದ್ದವು. ಕೆಡುವುದು ಬಿಡುವುದು ಅವಕಾಶಗಳ ಮೇಲೆ ನಿಂತಿಲ್ಲ. ವ್ಯಕ್ತಿಯ ಮೇಲೆ ನಿಂತಿದೆ. ಇಷ್ಟರ ಮೇಲೆ ನಿಮಗೇನಾದರೂ ತೊಂದರೆ ಬಂದರೆ ಪ್ರಜಾವಾಣಿ ನಿಮ್ಮನ್ನು ಮತ್ತೆ ಸೇವೆಗೆ ಕರೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ. ಹಾಗಾಗದಿದ್ದರೆ ರಾಜಕೀಯ ವಿಶ್ಲೇಷಣೆಯ ಒಂದು ಮ್ಯಾಗಜೈನ್ ಆರಂಭಿಸಿದರಾಯಿತು. ಖಂಡಿತಾ ಅದು ನಿಮ್ಮ ಬರವಣಿಗೆಯ ಮೇಲೇ ಯಶಸ್ವಿಯಾಗುತ್ತೆ. ನಿಮ್ಮ ನಿಜವಾದ ಸ್ನೇಹಿತರು ಸದಾ ನಿಮ್ಮ ಜೊತೆಗಿರುತ್ತಾರೆ. ಗುಡ್. ವಿಶ್ ಯು ಎ ವೆರಿ ಹ್ಯಾಪ್ಪಿ ಅಂಡ್ ಮೀನಿಂಗ್‍ಫುಲ್ ಎಕ್ಸ್ ಪೀರಿಯನ್ಸ್. ಆಲ್ ದ ಬೆಸ್ಟ್.
-ಬಂಜಗೆರೆ ಜಯಪ್ರಕಾಶ
priyare ,
neevu Prajavaani Bittiruvudu Saandarbhika Anivaaryate. Yene Aagali, Yelladaru iri ,Nimma Hrudaya Prajavaaniyaagirali. Tala Samudaayagala bagge nimma manasu “ANAAVARNA”gollu
-Abhinandane…
good response madam he is capable to do better work for people. I too wish you a great success in new responsibility
Dr H D Prashanth
Kannada University Hampi
ನೀವು ಎಲ್ಲೇ ಇದ್ದರೂ ಜೀವಂತವಾಗಿಯೇ ಇರುತ್ತೀರಿ, ಬರುತ್ತೀರಿ ಎಂಬ ನಮ್ಮ ವಿಶ್ವಾಸಕ್ಕೆ ಚ್ಯುತಿ ಇಲ್ಲ.ಜನರ ಮೇಲಿನ ಪ್ರೀತಿ ಬತ್ತುವುದಿಲ್ಲ. ಹೊರಗಿನಿಂದ ಅಧಿಕಾರದ ರಾಜಕಾರಣವನ್ನು ಕಂಡವರು ಈಗ ಒಳಗಿನಿಂದ ಒಳ-ಹೊರಗನ್ನು ತೀರಾ ಹತ್ತಿರದಿಂದ ಇನ್ನಷ್ಟೂ ನಿಚ್ಚಳವಾಗಿ ನೋಡ ಬಲ್ಲಿರಿ. ಇದೂ ಒಂದು ಹೊಸ ಅನುಭವವೇ.ಅಂತರಾಳದಲ್ಲಿ ನಡೆವ ಹೋರಾಟವೇ. ಆದ್ದರಿಂದ ಅಲ್ಲಿನ ಅನುಭವಗಳನ್ನೂ, ಸಮಕಾಲೀನ ಚಿಂತನೆಗಳನ್ನು ಪ್ರತಿ ವಾರವೂ ಬರೆದಿಡಿ. ಪ್ರಕಟನೆಗೆ ಮುಂದೊಂದು ದಿನ ಇದ್ದೇ ಇದೆ.ಕಾಯಲು ನಮಗಂತೂ ಬೇಸರವಿಲ್ಲ, ಖುಷಿ ಇದೆ.
“ಇತ್ತೀಚೆಗೆ ಮಟ್ಟು ಅವರ ಬರಹ ತುಂಬಾ ಎತ್ತರದ (ಮಾಗಿದ) ಮಟ್ಟ ತಲುಪಿದೆ”-ಎಂಬಿತ್ಯಾದಿ ಪ್ರಶಂಸೆಗೆ ಭಾಜನರಾದವರು- ದಿನೇಶ ಅಮೀನ ಮಟ್ಟು. ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಮೇಲಿನ ಅವರ ಒಳಗಣ ನಿಷ್ಠ ಪತ್ರಕರ್ತನ ಸಾಧನೆಗಳೇನು? ರಾಜಕಾರಣಿಗಳ ನಡುವೆಯೂ ಅವರು ಈ ಮೂರು ವರ್ಷಗಳ ಅವಧಿಯಲ್ಲಿ “ತನ್ನತನ” ಹೇಗೆ ಕಾದುಕೊಂಡಿದ್ದಾರೆ?-ಎಂಬುದರ ಸ್ಪಷ್ಟ ಚಿತ್ರಣ ಕೊಡಲು ಸಾಧ್ಯವೇ?