'ದಾವಣಗೆರೆ ನಿನ್ನನ್ನು ನಾನು ಕ್ಷಮಿಸುವುದಿಲ್ಲ'

ಜಿ ಎನ್ ಮೋಹನ್ 

guantanameraದಾವಣಗೆರೆಗೂ, ಕ್ಯೂಬಾಗೂ ಹಾಗೂ ನನಗೂ ಒಂದು ರೀತಿಯ ಸಂಬಂಧವಿದೆ. ನಾನು ಕ್ಯೂಬಾಗೆ ಹೋಗಿ ಬಂದ ಮೇಲೆ ಧಾರವಾಡದಲ್ಲಿ ಸಮುದಾಯ ರಂಗ ತಂಡ ಹಾಗೂ ಇತರ ಸಂಘಟನೆಗಳು ಸೇರಿ ನಮ್ಮ ಪ್ರವಾಸ ಕಥನವನ್ನು ಕೇಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾನೂ ಹಾಗೂ ಸಿದ್ಧನಗೌಡ ಪಾಟೀಲರು ನಮ್ಮ ಕಥನ ಎಲ್ಲರ ಮುಂದೆ ಹರಡಿದ್ದೆವು.
ಅದು ನಮ್ಮ ಕಥನಕ್ಕಿಂತ ಹೆಚ್ಚಾಗಿ ಕ್ಯೂಬಾ ನರಳುವಿಕೆಯ ಕಥನ, ಹೋರಾಟದ ಕೆಚ್ಚಿನ ಕಥನ, ಅದು ಪ್ರೇಮ ಪ್ರೀತಿಯ ಕಥನವಾಗಿತ್ತು. ತುಂಬಾ ಚೆನ್ನಾಗಿ ಮೂಡಿಬಂದ ಕಾರ್ಯಕ್ರಮ. ಅದು ಅದು ಹೇಗೆ ಅದು ಎಲ್ಲರಿಗೂ ಗೊತ್ತಾಯಿತೋ.. ರಾಜ್ಯದ ಬಹುತೇಕ ಕಡೆ ಇಂತಹದೇ ಕಾರ್ಯಕ್ರಮ ಮಾಡಬೇಕು ಎಂದು ಎಲ್ಲರೂ ಮುಗಿಬಿದ್ದರು. ಕಲಬುರ್ಗಿ, ಕೋಲಾರ, ಶಿರಸಿ ಹೀಗೆ ನಮ್ಮ ಯಾತ್ರೆ ನಡೆಯುತ್ತಾ ಹೋಯಿತು. ಹಾಗೆ ನಾವು ದಾವಣಗೆರೆಗೂ ಬಂದೆ.

guantanamera2ದಾವಣಗೆರೆಯಲ್ಲಿ ವಿಧ್ಯಾರ್ಥಿ ಯುವ ಸಂಘಟನೆಗಳೆಲ್ಲಾ ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನಾನು ಕ್ಯೂಬಾದಲ್ಲಿ ಬೀದಿ ಬೀದಿ ಅಲೆದು ಅಲ್ಲಿನ ಸ್ಮರಣಿಕೆಗಳನ್ನು ಸಂಗ್ರಹಿಸಿದ್ದೆ.
ಜೊತೆಗೆ ಚೆ ಗೆವಾರ ಇದ್ದ ನೋಟುಗಳು, ಜೋಸ್ ಮಾರ್ಟಿ ಇದ್ದ ನಾಣ್ಯ, ಚೆ ಫಿಡೆಲ್ ಮಾರ್ಟಿ ಇದ್ದ  ಶುಭಾಶಯ ಪತ್ರಗಳು, ಅದರ ಜೊತೆಗೆ ಕಾಫಿ ಕುಡಿಯದೆ, ತಿಂಡಿ ತಿನ್ನದೇ ಡಾಲರ್ ಗಳನ್ನು ಉಳಿಸಿಕೊಂಡು ಅದರಲ್ಲಿ ಪುಸ್ತಕ ಹಾಗೂ ಎಸ್, ‘ಗ್ವಂತನಮೇರಾ, ಗ್ವಜಿರ ಗ್ವಂತನಮೇರ’ ಹಾಡು ಇದ್ದ, ಕ್ಯೂಬಾದ ಕೇಳಲೇಬೇಕಾದ ಗೀತೆಗಳ ಕ್ಯಾಸೆಟ್ ಕೊಂಡಿದ್ದೆ.
ಜೊತೆಗೆ ಇನ್ನೇನು ಮನೆಯಿಂದ ಹೊರಗೆ ಹೆಜ್ಜೆ ಹಾಕಬೇಕು ಎಂದಾಗ ನಾನಿದ್ದ ಮನೆಯವರು ನೆನಪಿಗಾಗಿ ಕೊಟ್ಟ ಕ್ಯೂಬಾದ ಬಾವುಟ ಹಾಗೂ ಚೆಗೆವಾರನ ಆತ್ಮ ಕಥನವನ್ನು ಹೊತ್ತು ಬಂದಿದ್ದೆ.
ಈ ಎಲ್ಲವನ್ನೂ ನಾನು ಎಲ್ಲೆಲ್ಲಿ ಅನುಭವ ಕಥನ ಹಂಚಿಕೊಳ್ಳಲು ಹೋಗುತ್ತಿದ್ದೆನೋ ಅಲ್ಲೆಲ್ಲಾ ಹೊತ್ತೊಯ್ಯುತ್ತಿದೆ. ಕಾರ್ಯಕ್ರಮಕ್ಕೆ ಮುನ್ನ ಅದನ್ನು ಪ್ರದರ್ಶನಕ್ಕಿಡುತ್ತಿದ್ದೆ. ಕ್ಯೂಬಾದ ಬಾವುಟ, ಸ್ಪಾನಿಶ್ ಭಾಷೆ, ಚೆಗೆವಾರ ಚಿತ್ರ ಹೀಗೆ ಎಲ್ಲವೂ ನೋಡುಗರಲ್ಲಿ ಪುಳಕ ಉಂಟು ಮಾಡುತ್ತಿತ್ತು.
ದಾವಣಗೆರೆಯಲ್ಲೂ ಹಾಗೆ ಮಾಡಿದೆ. ಸರಿ ಕಾರ್ಯಕ್ರಮಕ್ಕೆ ಮುನ್ನ ಪ್ರದರ್ಶನಕ್ಕಿಟ್ಟು ವೇದಿಕೆ ಏರಿದೆ. ನೋಡಿಕೊಳ್ಳಲು ಸಾಕಷ್ಟು ಜನ ಇದ್ದರು. ಭಾಷಣ ಮುಗಿಸಿ ಬಂದಿಳಿದು ನನ್ನ ಆ ಅಮೂಲ್ಯ ವಸ್ತುಗಳತ್ತ ಹೆಜ್ಜೆ ಹಾಕಿದೆ. ಎಲ್ಲವೂ ಸರಿ ಇತ್ತು ಕ್ಯಾಸೆಟ್ ನ ತೂಕವೊಂದನ್ನು ಬಿಟ್ಟು.. ಏಕೆ ಎಂದು ತೆರೆದು ನೋಡಿದರೆ ಅಲ್ಲಿ ಕ್ಯಾಸೆಟ್ ನಾಪತ್ತೆ. ಯಾರೋ ಎಗರಿಸಿದ್ದರು. ಇಡೀ ಕ್ಯಾಸೆಟ್ ಎತ್ತದೆ ಕವರ್ ಮಾತ್ರ ಹಾಗೆ ಬಿಟ್ಟು ಅದರೊಳಗೆ ಇದ್ದದ್ದು ಮಾತ್ರ ಜೋಬಿಗಿಳಿಸಿದ್ದರು.
ನಾನು ಕುಸಿದುಹೋದೆ. ಕಾರಣ ಅದು ನಾನು ಹೊಟ್ಟೆ ಬಟ್ಟೆ ಕಟ್ಟಿ ಹೊತ್ತು ತಂದ ಹಾಡುಗಳಾಗಿತ್ತು. ನನ್ನೊಳಗೆ ಕ್ಯೂಬಾದ ಚೈತನ್ಯವನ್ನು ಆಗೀಗ ಬಡಿದೆಬ್ಬಿಸುತ್ತಿತ್ತು. ಗ್ವಂತನಮೇರಾ ಮಾತ್ರ ಗೊತ್ತಿದ್ದ ನನಗೆ ಹಲವು ಹಾಡುಗಳನ್ನು ಮೊಗೆದುಕೊಟ್ಟಿತ್ತು. ಅಂತಹದರಲ್ಲಿ ‘ವೆನಿಸಿನ ವ್ಯಾಪಾರ’ವನ್ನೂ ಮೀರಿದಂತೆ ಒಂದಿನಿತೂ ರಕ್ತ ಜಿನುಗದಂತೆ ಯಾರೋ ನನ್ನ ಮೈನೊಳಗಿನ ಮಾಂಸ ಮಾತ್ರ ಕೊಯ್ದುಕೊಂಡು ಹೋಗಿದ್ದರು.
ಅಂದಿನಿಂದ ಇಂದಿನವರೆಗೂ ಆ ಕ್ಯಾಸೆಟ್ ಕವರ್ ಮಾತ್ರ ನನ್ನೊಂದಿಗೆ ಹೆಜ್ಜೆ ಹಾಕುತ್ತಲೇ ಬಂದಿದೆ. ನಾನು ದಾವಣಗೆರೆಗೆ ಎಷ್ಟೋ ಬಾರಿ ಹೋಗಿ ಬಂದಿದ್ದೇನೆ. ಪ್ರತೀ ಬಾರಿಯೂ ನಾನು ‘ದಾವಣಗೆರೆ ನಿನ್ನನ್ನು ನಾನು ಕ್ಷಮಿಸುವುದಿಲ್ಲ’ ಎಂದೇ ಹೇಳಿ ಬಂದಿದ್ದೇನೆ
ನನ್ನೊಳಗಿನ ಹಾಡು ಹಾಗೆ ಕದ್ದವರ ಒಳಗೂ ಹಾಡು ಮೂಡಿಸಿದ್ದರೆ ಸಾಕು ಎಂದು ಸಮಾಧಾನ ಮಾಡಿಕೊಂಡು ಸುಮ್ಮನಾಗಿದ್ದೇನೆ..
ಇದೆಲ್ಲಾ ನೆನಪಾಗಿದ್ದು ಉಡುಪಿ ಎಂ ಜಿ ಎಂ ಕಾಲೇಜಿನ ಉಪನ್ಯಾಸಕರಾದ ಸುಚಿತ್ ಕೋಟ್ಯಾನ್
ಫೇಸ್ ಬುಕ್ ನಲ್ಲಿ ‘ಗ್ವಂತನಮೆರಾ’ ಹಾಡಿನ ಬೆನ್ನತ್ತಿ ಹೋಗಿದ್ದನ್ನು ಬರೆದದ್ದು ಓದಿದಾಗ 

‍ಲೇಖಕರು Avadhi

May 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Sangeeta Kalmane

    ಬರಹ ಓದುವಾಗ ಕ್ಯಾಸೆಟ್ ವಿಷಯ ಓದಿ ಬರಹದ ಕೊನೆಯಲ್ಲಿ ನಮಗೂ ಕೇಳಿಸುತ್ತೀರಾ ಅಂತ ಮನದೊಳಗೆ ಖುಷಿ. ಹಾಗೆ ಓದುತ್ತ ಹೋದಂತೆ ಕಳೆದು ಹೋದ ಸಂಗತಿ ನನಗೂ ದುಃಖ ತರಿಸಿತು. ಅವಧಿಯ ಲೇಖನ ಆದಿದ ಮೇಲಾದರೂ ಕದ್ದವನ ಮನ ಪರಿವತ೯ನೆ ಆಗಿ ಕ್ಯಾಸೆಟ್ ನಿಮಗೆ ಸಿಗುವಂತಾಗಲಿ. ಮತ್ತೆ ಅವಧಿಯಲ್ಲಿಯ ನಿಮ್ಮ ಬರಹದ ಕೊನೆಯಲ್ಲಿ ಕೇಳುವಂತಾಗಲಿ.

    ಪ್ರತಿಕ್ರಿಯೆ
  2. Anonymous

    ಹೀಗಾಗೋಯ್ತಾ ದಾವಣಗೆರೆಲಿ….!?
    ನಾನೂ ಮೂಲತಃ ಅದೇ ಊರು. ಬೇಜಾರಾಯ್ತು.
    ಕದ್ದವನು ಯಾರೋ ಒಬ್ಬ ಮುಟ್ಠಾಳ. ಆದರೆ ನಿಮ್ಮೊಟ್ಟಿಗೆ ಹೆಜ್ಜೆ ಹಾಕುವವರೆಷ್ಟೋ ಜನ…
    ನಿಮ್ಮ ನೋವು, ಬೇಸರ,ಸಿಟ್ಟುಗಳೊಂದಿಗೆ ದಾವಣಗೆರೆಯ ಅನೇಕಾನೇಕ ಸಹೃದಯರ ಸಾಂಗತ್ಯವಿದೆ ಸರ್.
    ಅದನ್ನು ಗಮನಿಸಿ ದಾವಣಗೆರೆ ಯನ್ನು ಕ್ಷಮಿಸಲು ಯತ್ನಿಸಿ.
    ಅವನನ್ನು ಮಾತ್ರ ದ್ವೇಷಿಸಿ. ಆ ದ್ಬೇಷದಲ್ಲಿ ನಾವೂ ಜೊತೆಯಾಗಿರ್ತೇವೆ. ಬನ್ನಿ ದಾವಣಗೆರೆಗೆ ಮತ್ತೆ ಮತ್ತೆ…

    ಪ್ರತಿಕ್ರಿಯೆ
  3. shivaprakash hm

    If he gets chance to reads this post, he will understand your pain and might courier you the cassette. 🙂 🙂

    ಪ್ರತಿಕ್ರಿಯೆ
  4. Sudha ChidanandGowd

    ಹೀಗಾಗೋಯ್ತಾ ದಾವಣಗೆರೆಲಿ….!?
    ನಾನೂ ಮೂಲತಃ ಅದೇ ಊರು. ಬೇಜಾರಾಯ್ತು.
    ಕದ್ದವನು ಯಾರೋ ಒಬ್ಬ ಮುಟ್ಠಾಳ. ಆದರೆ ನಿಮ್ಮೊಟ್ಟಿಗೆ ಹೆಜ್ಜೆ ಹಾಕುವವರೆಷ್ಟೋ ಜನ…
    ನಿಮ್ಮ ನೋವು, ಬೇಸರ,ಸಿಟ್ಟುಗಳೊಂದಿಗೆ ದಾವಣಗೆರೆಯ ಅನೇಕಾನೇಕ ಸಹೃದಯರ ಸಾಂಗತ್ಯವಿದೆ ಸರ್.
    ಅದನ್ನು ಗಮನಿಸಿ ದಾವಣಗೆರೆ ಯನ್ನು ಕ್ಷಮಿಸಲು ಯತ್ನಿಸಿ.
    ಅವನನ್ನು ಮಾತ್ರ ದ್ವೇಷಿಸಿ. ಆ ದ್ಬೇಷದಲ್ಲಿ ನಾವೂ ಜೊತೆಯಾಗಿರ್ತೇವೆ. ಬನ್ನಿ ದಾವಣಗೆರೆಗೆ ಮತ್ತೆ ಮತ್ತೆ…

    ಪ್ರತಿಕ್ರಿಯೆ
  5. ಪ್ರಸನ್ನ

    ಛೆ! ನಮ್ಮೂರಲ್ಲಿ ನಿಮ್ಮ ಸ್ಮರಣಿಕೆಯ ಕ್ಯಾಸೆಟ್ ಹೋದ್ರೂ ಪರ್ವಾಗಿಲ್ಲ ಕ್ಷಮಿಸಿಬಿಡಿ… ಈಗ ಹಾಡು ಇಂಟರ್ನೆಟ್ನಲ್ಲಿ ಸಿಕ್ಕುತ್ತೆ ಇಲ್ಲಿ ನೋಡಿ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: