
‘ಸಂಗಾತ ಕಥಾ ಬಹುಮಾನ’ ಫಲಿತಾಂಶ ಪ್ರಕಟ
‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆಯೋಜಿಸಿದ್ದ ಯುವ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ದಾದಾಪೀರ್ ಜೈಮನ್ ಅವರ ಕಥೆ ‘ಜಾಲಗಾರ’ ಕಥಾ ಬಹುಮಾನ ಪಡೆದಿದೆ.
ಒಪ್ಪಿತ ಕಥೆಗಳಾಗಿ ಅಮರೇಶ ಗಿಣಿವಾರ ಅವರ ‘ಹಿಂಡೆಕುಳ್ಳು’ ಮತ್ತು ಸಂಗನಗೌಡ ಹಿರೇಗೌಡ ಅವರ ‘ಗಾಯದ ಬೆನ್ನು’ ಆಯ್ಕೆಯಾಗಿವೆ.
ಬಹುಮಾನಿತ ಕಥೆಗೆ ೧೦,೦೦೦ ರೂ., ಒಪ್ಪಿತ ಎರಡೂ ಕಥೆಗಳಿಗೆ ತಲಾ ೫೦೦೦ ರೂ. ನಗದು ಬಹುಮಾನವಿದೆ.
ಬಹುಮಾನಿತ ಕತೆಗಳು ‘ಸಂಗಾತ’ದ ನವೆಂಬರ್ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿವೆ. ಹಿರಿಯ ಬರಹಗಾರರಾದ ಕೇಶವ ಮಳಗಿ ಹಾಗೂ ವಿನಯಾ ಒಕ್ಕುಂದ ಅವರು ತೀರ್ಪುಗಾರರಾಗಿದ್ದರು.
೨೦೨೦ರ ಜನೇವರಿಯಲ್ಲಿ ಧಾರವಾಡದಲ್ಲಿ ನಡೆಯುವ ಸಂಗಾತ ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದೆಂದು ಸಂಗಾತ ಪತ್ರಿಕೆ ಸಂಪಾದಕ ಟಿ.ಎಸ್.ಗೊರವರ ತಿಳಿಸಿದ್ದಾರೆ.







ಅಭಿನಂದನೆಗಳು