ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಯಾನಂದ ಕವಿಗೆ 'ಛಂದ' ಬಹುಮಾನ

ಕಥಾ ಸಂಕಲನದ ಹಸ್ತಪ್ರತಿಗೆ ನೀಡಲಾಗುವ ಪ್ರತಿಷ್ಠಿತ ಛಂದ ಪುಸ್ತಕ ಬಹುಮಾನಕ್ಕೆ ಕಥೆಗಾರ ದಯಾನಂದ ಕವಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಸುಧೇಂದ್ರ ತಿಳಿಸಿದ್ದಾರೆ .
‘ಪ್ರಜಾವಾಣಿ’ಯಲ್ಲಿ ಉಪಸಂಪಾದಕರಾಗಿರುವ ದಯಾನಂದ ಅವರು ನಾಗಮಂಗಲ ತಾಲೂಕಿನ ಬೆಳ್ಳೂರಿನವರು. ಬೆಂಗಳೂರು ವಿಶ್ವವಿದ್ಯಾಲದಲ್ಲಿ ಸ್ನಾತಕೋತ್ತರ ಪದವಿ ಪಡೆದ ದಯಾನಂದ್ ಸಮಯ ಚಾನಲ್ ನ ಬಾತ್ಮೀದಾರರಾಗಿದ್ದವರು. ಈಗಾಗಲೇ ಇವರ ಕಥೆಗಳು ಅನೇಕ ಗೌರವಕ್ಕೆ ಪಾತ್ರವಾಗಿದೆ.
ಇವರ ‘ಗ್ರಾಂಟ್’ ಕಥೆ ಇತ್ತೀಚಿಗೆ ತಾನೇ ಕಲಬುರ್ಗಿ ವಿಶ್ವವಿದ್ಯಾಲಯ ನೀಡುವ ರಾಜ್ಯ ಕಥಾ ಪ್ರಶಸ್ತಿಗೆ ಪಾತ್ರವಾಗಿತ್ತು.
ಈ ಸಾಲಿನ ಬಹುಮಾನದ ನಿರ್ಣಯವನ್ನು ಹಿರಿಯ ಸಾಹಿತಿ ನಾ. ಡಿಸೋಜ ಅವರು ಮಾಡಿದ್ದಾರೆ.  ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ೮೦ ಹಸ್ತಪ್ರತಿಗಳು, ಅಂದರೆ ಸುಮಾರು ೬೪೦ ಕತೆಗಳು, ಪ್ರವೇಶ ಕೋರಿ ಬಂದಿದ್ದವು.
‘ಛಂದ ಪುಸ್ತಕ’ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಇಪ್ಪತ್ತೈದು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಫೆಬ್ರವರಿ ೧೨ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

‍ಲೇಖಕರು admin

13 January, 2017

1 Comment

  1. Sangeeta Kalmane

    ಅಭಿನಂನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading