ಚಲಂ
ಬದನವಾಳುವಿನಲ್ಲಿ ರಂಗಕರ್ಮಿ ಪ್ರಸನ್ನ ಸುಸ್ಥಿರ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದರ ಬಗ್ಗೆ ನಾಡಿನಾದ್ಯಂತ ಚರ್ಚೆಯಾಗುತ್ತಿದೆ.ಒಂದು ಕಾಲಕ್ಕೆ ಬದನವಾಳು ಕೈಮಗ್ಗ ಕ್ಷೇತ್ರದಲ್ಲಿ ತುಂಬಾ ಮುಂದೆ ಇದ್ದಂತಹಾ ಪ್ರದೇಶವಾಗಿತ್ತು.ನಂತರದ ದಿನಗಳಲ್ಲಿ ಅಲ್ಲಿ ನೇಕಾರಿಕೆ ಇತ್ತೆಂಬುದೂ ಕೂಡ ಮರೆತುಹೋಗುವಷ್ಟು ಬದಲಾಗಿ ಹೋಗಿದೆ.ಅದನ್ನು ಅರಿತ ಪ್ರಸನ್ನ ಅಲ್ಲಿ ಚರಕವನ್ನು ಮತ್ತೆ ಪ್ರತಿಷ್ಟಾಪಿಸುವುದರ ಮೂಲಕ ಗಾಂದೀಜಿಯ ವಿಚಾರಗಳನ್ನು ಮತ್ತೆ ಚಾಲ್ತಿಗೆ ತರಲು ಪ್ರಯತ್ನಿಸುತ್ತಿದ್ದಾರೆ.
ಹೀಗೆ ಒಂದು ಹೋರಾಟ ಶುರುವಾಗಿದೆ.ಜನರು ಈಗ ಯಾವುದೇ ಹೋರಾಟವಿರಲಿ ಹೋಗಿ ಸ್ಪಂದಿಸುವ ಗುಣವನ್ನು ಹೊಂದಿದ್ದಾರೆ.ಅದಕ್ಕೆ ಕಾರಣ ನಮ್ಮ ದೇಶಕ್ಕೆ ಯಾವುದಾದರಿಂದಲಾದರೂ ಒಳ್ಳೆಯದಾಗುತ್ತದಾ ಎಂಬ ಆಶಾವಾದ.ಜನರ ಈ ಆಶವಾದವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಹಲವಾರು ಜನ,ಸಂಘಟನೆಗಳು ತುದಿಗಾಲಿನಲ್ಲಿ ನಿಂತಿವೆ.ಈಗ ಪ್ರಸನ್ನರವರು ಕೂಡ ಮಾಡ ಹೊರಟಿರುವುದು ಕೂಡ ಅಂತದ್ದೇ ಒಂದು ಕೆಲಸ ಎಂಬಂತೆ ಕಾಣಿಸುತ್ತಿದೆ.ಯಾಕೆಂದರೆ ಪ್ರಸನ್ನ ಏನನ್ನು ಹೇಳಲು ಬಯಸುತ್ತಿದ್ದಾರೆ ಎಂಬುದು ತುಂಬಾ ಜನಕ್ಕೆ ಅರ್ಥವಾಗುತಿಲ್ಲ.ಯಾಕೆ ಅರ್ಥವಾಗುತ್ತಿಲ್ಲ ಎಂದರೆ ಈಗಿನ ಜನಕ್ಕೆ ಬೇಕಾದ ಯೋಚನಾ ಲಹರಿ ಪ್ರಸನ್ನರವರಲ್ಲಿ ಇದೆಯೇ ಎಂಬುದನ್ನು ಯೋಚಿಸಬೇಕಾಗುತ್ತದೆ.
ಪ್ರಸನ್ನ ನಮ್ಮ ನಾಡಿನ ಪ್ರಸಿದ್ದ ರಂಗಕರ್ಮಿ. ಕಳೆದ ಎರಡು ದಶಕಗಳಿಂದ ಹೆಗ್ಗೋಡಿನ ಸಮೀಪ ಚರಕಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಜನರಿಗೆ ಚರಕದ ಮಹತ್ವವನ್ನು,ಅದರ ಮೂಲಕ ಸ್ವಾವಲಂಬಿ ಬದುಕನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.ಅದರಲ್ಲಿ ಪ್ರಸನ್ನ ಅದೆಷ್ಟರ ಮಟ್ಟಿಗೆ ಯಶಸ್ವಿಯಾದರು ಎಂಬುದನ್ನು ನಾವು ನೋಡುತ್ತಿದ್ದೇವೆ.ಎಲ್ಲವೂ ಜಾಗತೀಕರಣಗೊಂಡ ಈ ದಿನಗಳಲ್ಲಿ ಪ್ರಸನ್ನ ಮತ್ತೆ ಕುಲಕಸುಬಿನ ಬಗ್ಗೆ ಮಾತನಾಡಿದಂತೆ ಭಾಸವಾಗಿದೆ.ಎಲ್ಲಾ ದೇಶದಲ್ಲೂ,ಎಲ್ಲಾ ಕಾಲದಲ್ಲೂ ಮಾದರಿಗಳು ಬದಲಾದಂತೆ ನಮ್ಮಲ್ಲೂ ಆಗಿದೆ ಎಂಬುದನ್ನು ಪ್ರಸನ್ನರವರು ಮರೆತು ಅವರ ಮನಸ್ಥಿತಿಯ,ಅವರ ಖುಷಿಯ ಸುಸ್ಥಿರತೆಯ ಬಗ್ಗೆ ಮಾತ್ರ ಮಾತನಾಡುತ್ತಾ ಬಂದಿದ್ದರಿಂದ ಜನರಿಗೆ ಪ್ರಸನ್ನರಲ್ಲಿ ವಿಶ್ವಾಸ ಮೂಡಲು ಸಾಧ್ಯವಾಗುತ್ತಿಲ್ಲ.

ಗಾಂಧೀಜಿಯವರ ಗಾಂದೀವಾದದ ಕೆಲವು ಸೈಡ್ ಎಫೆಕ್ಟ್ ಗಳಲ್ಲಿ ಗಾಂದೀಜಿ ನಂಬಿಕೆಯಿಟ್ಟಿದ್ದ ಸನಾತನಿ ನಂಬಿಕೆಯೂ ಒಂದು.ಗಾಂದೀಜಿ ನಾನೊಬ್ಬ ಸನಾತನಿ ಎಂದೇ ಹೇಳುತ್ತಿದ್ದರು.ಅದಕ್ಕೆ ಪೂರಕವಾಗಿ ಭಗವದ್ಗೀತೆಯನ್ನು ತಮ್ಮ ಆದರ್ಶ ಗ್ರಂಥವನ್ನಾಗಿ ಪರಿಗಣಿಸಿದ್ದರು.ಅದರ ಜೊತೆಗೆ ಜಾತಿಪದ್ದತಿಯಲ್ಲಿ ಅಸ್ಪಶ್ಯತೆಯ ಬಗ್ಗೆ ಮಾತ್ರ ವಿರೋದವನ್ನು ಹೊಂದಿದ್ದ ಗಾಂದೀಜಿ ಜಾತಿವಾದದ ಕುರಿತು ಸ್ಪಷ್ಟ ನಿಲುವನ್ನು ಹೊಂದಿರಲಿಲ್ಲ.ಅದೆ ಕಾರಣಕ್ಕೆ ಜಾತಿ ಪದ್ದತಿಯ ಟಿಸಿಲುಗಳಾದ ಹುಟ್ಟಿನಿಂದ ಅನುಸರಿಸಬೇಕಾದ ಕುಲಕಸುಬುಗಳನ್ನು ಪ್ರೋತ್ಸಾಹಿಸುತ್ತಾ ಬಂದರು.ಅದಕ್ಕೆ ಗುಡಿ ಕೈಗಾರಿಕೆ ಎಂಬ ನಾಮಕರಣವನ್ನೂ ಮಾಡಿದರು.ಗಾಂದೀಜಿ ಹೇಳಿದ ಗುಡಿ ಕೈಗಾರಿಕೆ ಸ್ವಾವಲಂಬಿ ಬದುಕಿಗೆ ತುಂಬಾ ಬೇಕಾದ ವ್ಯವಸ್ಥೆಯಾಗಿತ್ತು ನಿಜ.ಆದರೆ ಬದಲಾದ ದಿನಗಳಲ್ಲಿ ಅದನ್ನು ಪುನರ್ ಪರಿಶೀಲಿಸುವ ಕೆಲಸಕ್ಕೆ ಯಾರೂ ಕೈ ಹಾಕಿದಂತೆ ಕಾಣಲಿಲ್ಲ.ಪ್ರಸನ್ನರವರು ಕೂಡ.
ಗಾಂದೀಜಿ ಬದುಕಿದ ಕಾಲದಲ್ಲಿ ಕೆಲವು ವಿಚಾರಗಳು ಬೇಕಾದ್ದವೂ ಆಗಿದ್ದವು.ಬ್ರೀಟಿಷರ ವಿರುದ್ದ ಹೋರಾಡುವುದಕ್ಕೆ ಒಂದು ಸಾಮಾನ್ಯವಾದ ಎಲ್ಲಾ ಜನರಿಗೆ ಒಪ್ಪಿಗೆಯಾಗತಕ್ಕಂತಹ ವಿಷಯಗಳು ಬೇಕಾಗಿದ್ದವು.ಗಾಂದೀಜಿ ಹೇಳುವುದು ಬ್ರೀಟೀಷರ ವಿರುದ್ದ ನಾವೆಲ್ಲಾ ಒಂದಾಗಲು ಇರುವ ಸಾಮಾನ್ಯ ವಿಷಚಾರಗಳು ಎಂದು ಜನರು ಭಾವಿಸಿದರು.ಅದೇ ಕಾರಣಕ್ಕಾಗಿ ಬ್ರೀಟೀಷರ ವಿರುದ್ದ ಹೋರಾಡುವುದು ಮುಖ್ಯವಾಗಿದ್ದ ಕಾಲದ ಗಾಂದೀಜಿಯ ವಿಚಾರಗಳು ಆ ಕಾಲಕ್ಕೆ ಸರಿಯಾಗಿ ಚರ್ಚೆಗೆ ಒಳಗಾಗಲಿಲ್ಲ.ಚರ್ಚೆಗೆ ಒಳಗಾಗಲಿಲ್ಲ ಎಂಬ ಕಾರಣಕ್ಕೆ ಜನರು ಅವರ ವಿಚಾರಗಳನ್ನೆಲ್ಲ ಒಪ್ಪಿಕೊಂಡೇ ಬಿಟ್ಟರು ಎಂದು ಪರಿಗಣಿಸಲಾಯಿತು.
ನಂತರದ ದಿನಗಳಲ್ಲಿ ಗಾಂದೀಜಿಯವರ ಕೆಲ ವಿಚಾರಗಳು ಕೆಲವು ಸಂದರ್ಭಗಳಿಗೆ ಹೇಗೆ ಅಪ್ರಸ್ತುತ ಎಂಬುದನ್ನು ಸಮಾಜ ಗಮನಿಸತೊಡಗಿತು.ಒಂದು ಕಾಲಕ್ಕೆ ಇಡೀ ದೇಶದ ಜನರನ್ನು ಹಿಂದೆ ಕರೆದುಕೊಂಡು ಹೋದ ಗಾಂದೀಜಿಯವರಿಗೆ ನನ್ನ ವಿಚಾರಗಳಿಂದ ನನ್ನ ದೇಶದ ಜನ ಹಿಂದೆಯೇ ಉಳಿದುಬಿಡುತ್ತಾರೆ ಎಂಬುದರ ಕಲ್ಪನೆ ಇರಲಿಲ್ಲ ಎಂದು ಹೇಳುವುದು ಕಷ್ಟ.ಅಲ್ಲಿಯೇ ಗಾಂದೀಜಿ ಅನುಮಾನಕ್ಕೆ ಒಳಗಾಗುತ್ತಾರೆ.ಗಾಂದೀಜಿಯವರ ಪ್ರತಿಯೊಂದು ನಡೆಯ ಬಗ್ಗೆಯೂ ಚರ್ಚೆ ಶುರುವಾಗಿ ಕೆಲವು ಒಳ್ಳೆಯ ಅಂಶಗಳ ಬಗ್ಗೆಯೂ ನಕರಾತ್ಮಕ ದೋರಣೆಯನ್ನು ಹೊಂದಲು ಕಾರಣವಾಗುತ್ತದೆ.
ಒಬ್ಬ ಮನುಷ್ಯ ತನ್ನ ಸಿದ್ದಾಂತ,ವಿಚಾರ,ನಡೆನುಡಿಗಳಿಗೆ ಹೇಗೆ ಬದ್ದನಾಗಿ ಉಳಿಯಬಲ್ಲ ಎಂಬುದಕ್ಕೆ ಗಾಂದೀಜಿಗಿಂತ ಒಳ್ಳೆಯ ಉದಾಹರಣೆ ಬೇಕಾಗಿಲ್ಲ.ಆದರೆ ಅವರು ನಂಬಿದ ವಿಚಾರ,ಸಿದ್ದಾಂತಗಳು ಸರಿಯೋ,ತಪ್ಪೋ ಎಂಬುದರ ಬಗ್ಗೆ ಮಾತನಾಡುವುದು ಕೂಡ ಅಷ್ಟೇ ಮುಖ್ಯವಾದ ವಿಚಾರವಾಗುತ್ತದೆ.
ಮತ್ತೂ ಹೇಳುವುದಾದರೆ ಗಾಂದೀಜಿ ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವಂತಹಾ ವಿಚಾರಗಳ ವ್ಯಕ್ತಿಯಾಗಿದ್ದರು.ಆದರೆ ಯಾವ ವಿಚಾರ ಯಾವ ಕಾಲದಲ್ಲಿ ಹೇಗೆ ಇರಬೇಕು ಎಂಬುದನ್ನು ಕೂಡ ನಾವು ಗಾಂದೀಜಿಯವರನ್ನು ನೋಡಿಯೇ ಕಲಿತುಕೊಳ್ಳಬೇಕು.ಗಾಂದೀಜಿ ಹೇಗೆ ಒಬ್ಬ ಸಂತನಾಗಿದ್ದರೋ ಹಾಗೆಯೇ ಚತುರ ರಾಜಕಾರಣಿಯೂ ಆಗಿದ್ದರು.ಅದೇ ಕಾಲಕ್ಕೆ ಒಬ್ಬ ಹೋರಾಟಗಾರನಾಗಿಯೂ,ಒಬ್ಬ ಮಾದರಿ ಮನುಷ್ಯನಾಗಿಯೂ ಇದ್ದರು.ಇದಕ್ಕೆ ಕಾರಣ ಅವರಿಗೆ ಅವರು ನಂಬಿಕೊಂಡ ವಿಚಾರಗಳ ಬಗೆಗಿನ ಕಾಳಜಿ ಕಾರಣವಾಗಿತ್ತು.
ಈಗ ವಿಷಯವೇನೆಂದರೆ ಗಾಂದೀಜಿಯ ಹಿಂಬಾಲಕರಾದ ರಂಕರ್ಮಿ ಪ್ರಸನ್ನರವರಿಗೆ ಇವುಗಳಲ್ಲಿ ಯಾವ ಕ್ವಾಲಿಟಿಗಳಿವೆ ಎಂಬುದು.ಅದೇ ಸಮಯದಲ್ಲಿ ಪ್ರಸನ್ನ ಮತ್ತು ಅಂತಹವರು ಗಾಂದೀವಾದ ಸಮಾಜಕ್ಕೆ ಮುಖ್ಯವಾದುದೇ ಆಗಿದ್ದರೆ ಅದನ್ನು ಜನಸಮುಧಾಯಕ್ಕೆ ಅದರ ಮೂಲಕ ಯುವಸಮುಧಾಯಕ್ಕೆ ತಲುಪಿಸುವಲ್ಲಿ ಯಾಕೆ ಸೋಲುತ್ತಾರೆ.ಪ್ರಸನ್ನ ಹೇಳುತ್ತಿರುವುದು ಸಮಾಜವಾದವೋ ಗಾಂದೀವಾದವೋ ಎಂಬುದರ ಬಗ್ಗೆ ಅನುಮಾನ ಯಾಕೆ ಮೂಡುತ್ತದೆ.ಚರಕದ ಮೂಲಕ ಸಾಮಾಜಿಕ ಕ್ರಾಂತಿ ಮಾಡಲು ಸಾಧ್ಯ ಎಂಬುದನ್ನು ಜನರು ನಂಬಲು ಯಾವ ರೀತಿಯ ಸಿದ್ದತೆ ಇವರಲ್ಲಿದೆ.ಒಂದು ಊರಿನಲ್ಲಿ ಬಟ್ಟೆ ನೇಯ್ದು ಮಾದರಿ ಎಂಬಂತೆ ನಡೆದುಕೊಂಡು ಬಂದ ಪ್ರಸನ್ನರಿಗೆ ಈಗ ಜಗತ್ತೇ ಒಂದು ಗ್ರಾಮೀಣ ಪರಿಕಲ್ಪನೆಯಲ್ಲಿ ಇದೆ ಅಂತ ಯಾವ ಕಡೆಯಿಂದಲೂ ಅನಿಸುತ್ತಿಲ್ಲವೇ.
ಹೀಗೆ ಹೇಳುತ್ತಾ ಹೋದರೆ ಯಾವುದಕ್ಕೂ ಉತ್ತರ ಸಿಗುವುದಿಲ್ಲ.ಯಾಕೆಂದರೆ ಪ್ರಸನ್ನ ತರದವರು ಅವರ ಮನಸ್ಸಿಗೆ ಬಂದ ವಿಚಾರಗಳಿಗೆ ಮಾತ್ರ ಬದ್ದರಾಗಿರುತ್ತಾರೆ.ನಮ್ಮ ಜನಗಳ ಈಗಿನ ಸಮಸ್ಯೆಗಳು ಬೇರೆಯೆ ಇವೆ ಎಂಬುದನ್ನು ಕಾಣಿಸದಷ್ಟು ಒಂದು ರೀತಿಯ ಸನಾತನ ಮಾದರಿಯ ಪೊರೆ ಕವಿದು ಕೊಂಡು ಬಿಟ್ಟಿರುತ್ತದೆ.ಪ್ರಸನ್ನ ತರದವರು ತುಂಬಾ ಜನರಿದ್ದಾರೆ.
ಇವರಿಗೆ ತಾವು ನಂಬಿದ ಮೌಲ್ಯಗಳು ಮುಖ್ಯವಾಗುತ್ತವೆ ಮತ್ತು ಆ ಮೌಲ್ಯಗಳು ಯಾವ ಕಾಲಕ್ಕೂ ನವೀಕರಣಗೊಳ್ಳುವುದಿಲ್ಲ.ಆ ಮೌಲ್ಯಗಳಿಂದ ಒಂದು ಜನಾಂಗಕ್ಕೆ ಕುತ್ತುಂಟಾಗುತ್ತದೆ ಎಂದರು ಇವರು ಬಿಡುವುದಿಲ್ಲ.ಒಂದುವೇಳೆ ನೇಕಾರ ಸಮಾಜಕ್ಕೆ ಮೋಸವಾಗಿದೆ ಎಂದಾದರೆ ಅದರ ಬಹು ಮುಖ್ಯ ಕಾರಣ ನೇಕಾರರ ಬದುಕನ್ನು ಗುತ್ತಿಗೆಗೆ ಪಡೆದವರಂತೆ ಆಡುವ ಪ್ರಸನ್ನರಂತಹವರೇ ಕಾರಣ.
ಯಾಕೆಂದರೆ ಇಡೀ ದೇಶದ ಅಸಂಖ್ಯ ಜಾತಿ ಸಮುದಾಯಗಳ ಸಮಸ್ಯೆ ಬಗೆಹರಿಸುವುದು ಬೇಡ.ಪ್ರಸನ್ನರವರಿಗೆ ಎರಡು ದಶಕಗಳಿಂದ ನೇಕಾರರ ಒಂದು ಸಮಸ್ಯೆಯನ್ನೂ ಬಗೆಹರಿಸಲಾಗಿಲ್ಲ.ಹಾಗಿರುವಾಗ ಇವರು ಯಾವ ಸುಸ್ಥಿರ ಸಮಾಜದ ಬಗ್ಗೆ ಮಾತನಾಡುತ್ತಾರೆ.ಪ್ರಸನ್ನ ರವರು ಒಳ್ಳೆಯ ಅಭಿರುಚಿಗಳಿರುವ ಮನುಷ್ಯ ಎಂಬುದೇನೋ ನಿಜ.ಆದರೆ ಒಂದು ಸಮಾಜವನ್ನು ಮುನ್ನಡೆಸಿಕೊಂಡು ಹೋಗುವಂತಹಾ ನಾಯಕತ್ವದ ಗುಣ ಇಲ್ಲ.ಯಾಕೆಂದರೆ ಯಾವುದಾರರೂ ಸಮಸ್ಯೆಗೆ ಸರಿಯಾದ,ದೂರದಶರ್ಿತ್ವವಿರುವ ಉತ್ತರವನ್ನು ಕಂಡುಕೊಳ್ಲುವ ನೋಟ ಪ್ರಸನ್ನರಲ್ಲಿ ಇಲ್ಲ ಎಂಬುದು ಸಾಭಿತಾಗಿ ಹೋಗಿದೆ.
ಅಂತಹಾ ಸಮಯದಲ್ಲಿ ನಾಡಿನಿಂದ ತುಂಬಾ ಜನರು ಯಾರೋ ಸಂತನೊಬ್ಬನನ್ನು ನೋಡಲು ಹೋಗುವಂತೆ ಹೋಗಿಬಂದರು.ಎಲ್ಲರಿಗೂ ತಮ್ಮ ವಿಚಾರಗಳ ಅಸ್ಥಿತ್ವದ ಪ್ರಶ್ನೆ.ತಮ್ಮ ಸೊರಗಿದ ವಿಚಾರಗಳಿಗೆ ಎಲ್ಲಿಯಾದರೂ ಹೆಗಲು ಸಿಗಬುದೆಂಬ ಹುಡುಕಾಟ.ಇಂತಹವರಿಂದ ಸಾಮಾನ್ಯರಿಗೆ ತೊಂದರೆಯಾಗದಿರಲಿ.






perfectly said
A very interesting perspective on what is happening around us. These lines speak the universal truth of our contemporary society.
ಎಲ್ಲರಿಗೂ ತಮ್ಮ ವಿಚಾರಗಳ ಅಸ್ಥಿತ್ವದ ಪ್ರಶ್ನೆ.ತಮ್ಮ ಸೊರಗಿದ ವಿಚಾರಗಳಿಗೆ ಎಲ್ಲಿಯಾದರೂ ಹೆಗಲು ಸಿಗಬುದೆಂಬ ಹುಡುಕಾಟ.ಇಂತಹವರಿಂದ ಸಾಮಾನ್ಯರಿಗೆ ತೊಂದರೆಯಾಗದಿರಲಿ.
ನಾನು ಬೆಳೆದ ನನ್ನೂರು ಸುಮಾರು 150 ಕುಟುಂಬಗಳಿರುವ ‘ಅತ್ತಿಚೌಡೇನಹಳ್ಳಿ’ಯಲ್ಲಿ ಈಗ್ಗೆ 20 ವರ್ಷದ ಹಿಂದೆ ನೂರರು ಆಸುಪಾಸು ಕೈಮಗ್ಗಗಳಿದ್ದವು. ನಮ್ಮ ಚಿಕ್ಕದಾದ ಮನೆಯಲ್ಲೇ ಒಂದು ಮಗ್ಗ ಹಾಕಿ ನಮ್ಮಪ್ಪ ನೆಯ್ಯುತ್ತಿದ್ದರು. ಈಗ ಕಾಲ ಎಷ್ಟರ ಮಟ್ಟಿಗೆ ಬದಲಾಗಿದೆ ಎಂದರೆ ಮಗ್ಗ ನೆಯ್ಯುವವನಿಗೆ ಮದುವೆಯಾಗಲು ಯಾರು ಹೆಣ್ಣು ಕೊಡುತ್ತಿಲ್ಲ. ಮಗ್ಗದ ಕೆಲಸ ಬಿಕುಟ್ ಬೇರೆ ಯಾವುದಾದರೂ ಕೆಲಸ ಮಾಡುತ್ತಿರುವವರಿಗೆ ನಿರಾಯಾಸವಾಗಿ ಹೆಣ್ಣು ಸಿಗುತ್ತಿವೆ. ಇದಲ್ಲದೆ ಮಗ್ಗದ ಕೆಲಸದಿಂದ ಹೆಂಡತಿ ಮಕ್ಕಳನ್ನು ಸಾಕುವುದು ಬಹಳ ದುಸ್ತರವಾಗಿದೆ. ಪರಿಸ್ಥಿತಿ ಹೀಗಿರುವಾಗ ಕಾಲ ಬದಲಾಗಿರುವಾಗ ರಂಗಕರ್ಮಿ ಪ್ರಸನ್ನರವರ ನಡೆ ಚಲಂ ರೀತಿ ನನಗೂ ಪ್ರಶ್ನೆಯಾಗಿ ಕಾಡುತ್ತದೆ.
‘ನಾಡಿನಿಂದ ತುಂಬಾ ಜನರು ಯಾರೋ ಸಂತನೊಬ್ಬನನ್ನು ನೋಡಲು ಹೋಗುವಂತೆ ಹೋಗಿಬಂದರು’ , impressed. ask the weaver in north karnataka, most of them changed their handlooms to powerlooms, and are atleast getting two meals of their own, for the first time in independent India, they are afraid of that piece of bread now, to be snached away once again with wrong policies. because they have seen the miserable days with handloom era. thousands of weaver families never cooked rice in thier homes, for their entire life span., never drank tea with sugar…..these are not fictions but utter facts. ….God only can help them.
ಈ ಲೇಖನ ಇದಕ್ಕೆ ಬರೆದಿರುವ ಪ್ರತಿಕ್ರಿಯೆಗಳು ಹೇಳುತ್ತಿರುವ ವಿಷಯವನ್ನು ಅರಗಿಸಿಕೊಳ್ಳಲೆ ಆಗುತ್ತಿಲ್ಲ. ಯಾವುದು ಸರಿ ಅನ್ನುವುದು ಸ್ಪಷ್ಟವಾಗುತ್ತಿಲ್ಲ.
ನಿಮ್ಮ ಲೇಖನ ರೊಮ್ಯಾಂಟಿಕ್ ಗಳ ತಲೆಯ ಮೇಲೆ ಹೊಡೆದಂತಿದೆ. ವ್ಯವಸಾಯದ ಗತಿಯೂ ಕೈಮಗ್ಗದ ದಾರಿಯನ್ನೇ ಹಿಡಿದಂತಿದೆ!
ಇಷ್ಟವಾಯಿತು. ಬಹಳಷ್ಟು ಹರವು ಇರುವ ಒಂದೊಳ್ಳೆ ಲೇಖನ
ಒಂದಂತೂ ನಿಜ.ಪ್ರಸನ್ನ ಅವರು ಏನನ್ನು ಹೇಳಲು ಬಯಸುತ್ತಿದ್ದಾರೆಂದು ಅನೇಕರಿಗೆ ಅರ್ಥವಾಗುವುದಿಲ್ಲ ಎನ್ನುವುದು ಸಾಬೀತಾಯಿತು. ಪ್ರಸನ್ನ ಸೋತಿರಬಹುದು. ಆದರೆ ಅದು ನಮ್ಮ ಗೆಲುವಂತೂ ಖಂಡಿತವಾಗಿ ಅಲ್ಲ.ದೇಶದ ಗೆಲುವೂ ಅಲ್ಲ.
It is an overreading of Prasannas activities reach and approach.I am sure Prasanna is well aware of the direction our times and people are moving.He is realistic enough to know that he canot provide solutions.Yet, such activities make people to think about possible alternatives and their viability.Even the present article is also a response to the activities. If enough discussion and little awareness is promoted it should be welcomed.Unfortunately, even this is also not happening.
ಚಲಂ ತುಂಬ ತುಂಬ ಒಳ್ಳೆ ಲೇಖನ.ನಂಗೂ ಹಾಗೇ ಅನಿಸಿತ್ತು.ಹೋಗೋದು ಅನಾರೋಗ್ಯಪೀಡಿತರನ್ನ ನೋಡಿ ಬರೋ ಹಾಗೆ.ಅವರ ಕೈ ಕುಲುಕಿಬರೋದು.ಯಾರಾದರೂ ಅಲ್ಲಿನ ರೈತರ ಕೈ ಕುಲುಕಿದರಾ?
ಪ್ರಸನ್ನ ಅವರಿಗೆ ಯಾವುದೋ ಒಂದು ಪ್ರಶಸ್ತಿ ಬೇಕಾಗಿದೆ. ಆ ಪ್ರಶಸ್ತಿ ಪಡೆಯಬೇಕಾದರೆ ಯಾವುದಾದರೂ ಸಾಮಾಜಿಕ ಹೋರಾಟದಲ್ಲಿ ತೋಡಗಿರಬೇಕು ಅವರು ಯಾವುದೇ ಹೋರಾಟದಲ್ಲಿ ತೋಡಗಿಲ್ಲದ ಕಾರಣ ಅವರಿಗೆ ಆ ಪ್ರಶಸ್ತಿ ತಪ್ಪಿರ ಬೇಕು ಅದಕ್ಕೆ ಒಂದು ಹೋರಾಟ ರೂಪಿಸಿದರು. ಅದಕ್ಕೆ ಅವರಂತಹವರು ಸಾಥ ಕೋಟ್ಟರು ಫಲಿತಾಂಶ ಮಾತ್ರ ಶೂನ್ಯ. ಚಲಂ ನೀವು ಬರೆದಿರುವ ಲೇಖನ ತುಂಬಾ ಚನ್ನಾಗಿದೆ.