ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಥಟ್ ಅಂತ ಪ್ರಶ್ನೆ : ಥಟ್ ಅಂತ ಉತ್ತರ..

47a4ace3-c720-4d87-b9ec-89b78ef0a8e5
ಥಟ್ ಅಂತ ಹೇಳಿ ಅಂದ ತಕ್ಷಣ ಥಟ್ ಅಂತ ಹೇಳಲು ಇನ್ಯಾರಿಗೆ ತಾನೇ ಸಾಧ್ಯ?
ಹಾಗಾಗಿ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ ನಾ ಸೋಮೇಶ್ವರ ಅವರೊಂದಿಗೆ ಮಾಲಿಕೆ ಆರಂಭಿಸುತ್ತಿದ್ದೇವೆ.
ಇದು ಪುಸ್ತಕ ವಿಮರ್ಶೆ ಖಂಡಿತಾ ಅಲ್ಲ. ಪುಸ್ತಕದ ಒಳಗಿನ ಇಣುಕು ನೋಟವೂ ಅಲ್ಲ. ಯಾವ ಲೇಖಕರು ಏನು ಓದುತ್ತಿದ್ದಾರೆ?, ಅವರ ಅಭಿರುಚಿಗಳೇನು? ಎಂದು ತಿಳಿಸುತ್ತಲೇ ‘ಓದಲು ಎಷ್ಟೊಂದು ಪುಸ್ತಕಗಳಿವೆ ನೋಡಿ’ ಎಂದು ಹೇಳುವ ಪ್ರಯತ್ನ.

ಪ್ರತೀ ದಿನ ಒಂದು ಪುಸ್ತಕವನ್ನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇವೆ.

ಈ ಮಾಲಿಕೆಗೆ ಬಂದ ಪ್ರತಿಕ್ರಿಯೆ ನಮ್ಮನ್ನು ಬೆರಗಾಗಿಸಿದೆ.

ಪುಸ್ತಕ ಎನ್ನುವುದು ಎಲ್ಲರ ಅಂತರಾಳದಲ್ಲಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಪುಸ್ತಕದ ಬಗ್ಗೆ ಬರೆದ ಎಲ್ಲರಿಗೂ ಅವಧಿಯ ವಂದನೆಗಳು.
ಬನ್ನಿ ಪಯಣ ಆರಂಭಿಸೋಣ..
EEGA-1
ನಾ ಸೋಮೇಶ್ವರ
ಥಟ್ ಅಂತ ಉತ್ತರ ಬರೆಯುತ್ತಿದ್ದೇನೆ.

ಸಧ್ಯಕ್ಕೆ ನನ್ನ ಕೈಯಲ್ಲಿರುವುದು ’ಕೊಡಗಿನ ಇತಿಹಾಸ’ ಎನ್ನುವ ಪುಸ್ತಕ. ಲೇಖಕರು ಡಿ.ಎನ್.ಕೃಷ್ಣಯ್ಯ.

ಕರ್ನಾಟಕ ರಾಜವಂಶಗಳ ಬಗ್ಗೆ ಸರಿ ಸುಮಾರು ಮಾಹಿತಿಯನ್ನು ಓದಿದ್ದೇನೆ.

ಆದರೆ ಕೊಡಗಿನ ರಾಜವಂಶಗಳ ಬಗ್ಗೆ ಮಾಸ್ತಿಯವರ ಚಿಕವೀರರಾಜೇಂದ್ರ, ಭಾರತೀಸುತ ಅವರ ಹುಲಿಯ ಹಾಲಿನ ಮೇವು ಹಾಗೂ ಕೊಡಗಿನ ಗೌರಮ್ಮನ ಕತೆಗಳ ಹೊರತು ಮತ್ತೇನೂ ಗೊತ್ತಿಲ್ಲ.

ಕರ್ನಾಟದ ಎಲ್ಲ ಜಿಲ್ಲೆಗಳನ್ನು ನೋಡಿದ್ದೇನೆ. ಕೊಡಗನ್ನು ಮಾತ್ರ ನೋಡಿಲ್ಲ.

ಕೊಡಗಿನ ಬಗ್ಗೆ ನನ್ನ ತಿಳಿವಳಿಕೆ ತೀರಾ ಸೀಮಿತ!

ಹಾಗಾಗಿ ಈ ಪುಸ್ತಕವನ್ನು ಕೈಗೆತ್ತಿಕೊಂಡೆ!…

ನಾ ಸೋಮೇಶ್ವರ ಫೋಟೋ: ಪ್ರಕಾಶ್ ಹೆಗ್ಡೆ

‍ಲೇಖಕರು Admin

8 January, 2016

2 Comments

  1. ಶಮ, ನಂದಿಬೆಟ್ಟ

    Wah…. Beautiful initiative.. Thanks.

    I’ve a file called Good read in my laptop. Today on wards will add all the books to that.

  2. Noorulla thyamagondlu

    ಒಳ್ಳೆಯ ಶುರುವಾತು,ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading