ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತ್ರಿವೇಣಿ ಶಂಕರ್ ಟ್ರಸ್ಟ್ ಪರವಾಗಿ..

ಧ್ವನಿ ನೀಡುವವರು ಬೇಕಾಗಿದ್ದಾರೆ – ಗಂಡಸರು ಹಾಗೂ ಹೆಂಗಸರು ಇಬ್ಬರೂ ಸಹ.

ಆತ್ಮೀಯ ಓದುಗ ಮಿತ್ರರೇ,

ಕನ್ನಡದ ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿಯವರ ಕತೆ ಕಾದಂಬರಿಗಳು ಇಂದಿಗೂ ಜನಮಾನಸದಲ್ಲಿ ಮೆಚ್ಚುಗೆ ಪಡೆದು ಓದುಗರ ಮೊದಲ ಆಯ್ಕೆಯ ಪುಸ್ತಕಗಳಾಗಿವೆ.
ಈಗಾಗಲೇ ಅವರ ಸಮಗ್ರ ಕೃತಿಗಳನ್ನು ಮೈಸೂರಿನ ಭಾರತಿ‌ ಪ್ರಕಾಶನದವರು ಹೊರತಂದಿದ್ದು ಎಲ್ಲ ಪುಸ್ತಕ ಮಳಿಗೆಗಳಲ್ಲಿ ಅವು ಲಭ್ಯವಿದೆ.

ಈ ನಿಟ್ಟಿನಲ್ಲಿ ಇನ್ನೊಂದು ಮಹತ್ವದ ಹೆಜ್ಜೆಯಾಗಿ ತ್ರಿವೇಣಿಯವರ ಸಮಗ್ರ ಕಾದಂಬರಿಗಳನ್ನು ಆಡಿಯೋ ರೂಪದಲ್ಲಿ ತರುವ ಯೋಜನೆಯು ಸದ್ಯ ಆರಂಭಿಕ ಹಂತದಲ್ಲಿದೆ.
ಆ ಮೂಲಕ ವಿಶ್ವದಾದ್ಯಂತ ಇರುವ ಎಲ್ಲ ಕನ್ನಡಿಗರಿಗೂ ಅವರ ಸಾಹಿತ್ಯ ವನ್ನು ಮುಟ್ಟಿಸುವ ಒಂದು ಮಹತ್ವದ ಕಾರ್ಯ ಇದಾಗಿದೆ.

ಈ ಪ್ರಯುಕ್ತ ತ್ರಿವೇಣಿಯವರ ಕಾದಂಬರಿಗಳನ್ನು ಆಡಿಯೋ ರೂಪದಲ್ಲಿ ತರುವ ಯೋಜನೆಗೆ ಒಳ್ಳೆಯ ಧ್ವನಿ ನೀಡುವ ಆಸಕ್ತರು ಬೇಕಾಗಿದ್ದಾರೆ.

ಈ ಒಂದು ಸಾಹಿತ್ಯಿಕ ಸೇವೆಯನ್ನು ಮಾಡಲು ಇಚ್ಚಿಸುವವರು ತಾವು‌ ಓದಿದ ಯಾವುದಾದರೂ ಸಾಹಿತ್ಯಿಕ ಕತೆ/ ಕಾದಂಬರಿಯ ಓದಿದ ( ತ್ರಿವೇಣಿಯವರದ್ದೆ ಆದರೆ ಉತ್ತಮ) ಎರಡು ಅಥವಾ ಒಂದು ಪುಟದ ಆಡಿಯೋ ಸ್ಯಾಂಪಲನ್ನು ಈ ಕೆಳಕಂಡ ಈಮೇಲ್ ಗೆ ಕಳುಹಿಸಬಹುದು.
ನಮಗೆ ಇಷ್ಟವಾದ ಸೂಕ್ತ ಪ್ರತಿಭೆಯನ್ನು ಸಂಪರ್ಕಿಸುತ್ತೇವೆ.

-ಮೀರಾ ಶಂಕರ್ 

trivenishankartrust@gmail.com
ತ್ರಿವೇಣಿ ಶಂಕರ್ ಟ್ರಸ್ಟ್ ಪರವಾಗಿ

‍ಲೇಖಕರು avadhi

7 May, 2020

2 Comments

  1. T S SHRAVANA KUMARI

    ಒಳ್ಳೆಯ ಕಾರ್ಯ

  2. Chandra

    Bangalore navare aagabeka?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading