ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜು ಎಸ್ ಬಿ ಓದಿದ ‘ನಾವಿಬ್ಬರೇ ಗುಬ್ಬಿ’

ತೇಜು ಎಸ್ ಬಿ

ನಮ್ಮ ಸ್ವಂತಿಕೆಯ ಅರಿವು ಮೂಡಿಸುವ ಪುಸ್ತಕ ನಾವಿಬ್ಬರೇ ಗುಬ್ಬಿ ಸುಮಾರು 35 ಕವನಗಳನ್ನು ಒಳಗೊಂಡ ಈ ಪುಸ್ತಕದಲ್ಲಿ ಕಲಿಯುವುದನ್ನು, ಕಲಿಯಬೇಕಾದದ್ದನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ವಿಕ್ರಮ್ ಬಿ. ಕೆ ರವರು. ಇಲ್ಲಿನ ಬರಹದ ಒಂದೊಂದು ಸಾಲು ಸುದೀರ್ಘವಾಗಿ ಓದಿಸಿಕೊಂಡಿತು…

ವಿಭಿನ್ನ ವಿಚಾರಗಳು, ವೈಚಾರಿಕತೆಯ ನೋಟ, ಕಂಡುಂಡದ್ದನ್ನು ಬರಹದಲ್ಲಿ ಕಟ್ಟಿಕೊಟ್ಟಿರುವ ಧಾಟಿ. ಅದರಿಂದಾಚೆಗೂ ಗುಬ್ಬಿಯ ಒಳಗಿನ ಭಾವ ಓದುಗರನ್ನು ಪ್ರತಿ ಕ್ಷಣ ಮಂತ್ರಮುಗ್ಧರನ್ನಾಗಿ ಮಾಡುವುದಂತೂ ನಿಜ. ಪ್ರತಿ ಪದಗಳು ಜೀವ ತುಂಬಿ ಬಂದಂತೆ ಓದುಗ ಸಹೃದಯರ ಉಸಿರಲ್ಲಿ ಬೆರೆತು ಹೋಗಿವೆ.

ಸಾರ್ಥಕತೆಯ ಸಂತೃಪ್ತಿಯನ್ನು ಮೂಡಿಸುವ ಕವಿತೆಗಳು ಸಫಲತೆಯ ಸಂದೇಶವನ್ನು ಸಹಜವಾಗೇ ಚಿತ್ರಿಸಿವೆ. ಹೇಳಬೇಕಾದದ್ದು ಧೀರ್ಘವಿದ್ದರೂ ಸುಲಲಿತವಾಗಿ ನಾಲ್ಕಾರೂ ಸಾಲುಗಳಲ್ಲಿ ಕಟ್ಟಿಕೊಟ್ಟಿರುವುದೇ ಸೋಜಿಗ. ಹೃದಯದ ಭಾವ ತಣಿಯುವಂತೆ,
ಮೊದಲ ತೊದಲ ಮಾತು ತುಡಿಯುವಂತೆ, ಎಲ್ಲ ಪದ್ಯಗಳು ಬರೆಯಲ್ಪಟ್ಟಿವೆ.

ಪದ್ಯಗಳ ಅನಂತತೆ ಎಂಬುದು ಜ್ಞಾನವನ್ನು ಧ್ಯಾನಿಸುವತ್ತ ಸಾಗಿದಂತೆ ಓದುಗರಿಗೆ ಇದು ಮೊದಲ ಕವನಸಂಕಲನವೆಂದು ಎಲ್ಲಿಯೂ ಅನಿಸಲಿಕ್ಕಿಲ್ಲ.

ಅಕ್ಕ,ಜೋಗತಿ ಮಂಜಮ್ಮ, ಪದವಿ, ಅವ್ವ, ಮಗು, ಸಮಾನಳು ಮುಂತಾದ ಬರಹಗಳು ಜೀವ-ಭಾವ ತುಂಬಿ ಮಹಿಳೆಯರು ಬಗ್ಗೆ ಚಿತ್ರಿಸಿವೆ. ಮುಂತಾಗಿ ನನಗಾರು ಸಾಟಿ, ತಮಟೆ ಕಣ್ಣಾಮುಚ್ಚೆ ಕಾಡೆ ‘ಗೋಡೆ’ ಬೆಂಗಳೂರಿನ ಮಗ ಸಂಭಾಷಣೆಯೇ ಇಲ್ಲದಂತೆ ಕಾಡುವುದಂತೂ ಸಹಜ.

ಪುಸ್ತಕ ಓದಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕು… ಪ್ರತಿ ಕವನಗಳು ಪುಸ್ತಕದ ಜೀವಾಳವೆಂದರೆ ತಪ್ಪಾಗಲಾರದು. ಕೊಂಡು ಓದಿ ಹಂಚಿ ಹಾರೈಸಿ.

ಹೆಚ್ಚೇನು ಹೇಳುವುದು, ಪುಸ್ತಕದ ಶೀರ್ಷಿಕೆಯೇ ಅಚ್ಚುಕಟ್ಟಾಗಿ ಬರಹವನ್ನು ಉತ್ತುಂಗಕ್ಕೇರಿಸಿರುವಾಗ…

ವಿಕ್ರಮ ಬಿ ಕೆ ಅವರ ಕವನ ವಾಚನದ ಬಳಿಕ ಈಗ ಅವರ ಬರಹವಂತೂ ಅಚ್ಚು ಮೆಚ್ಚಾಗಿಬಿಟ್ಟಿತು. ವಿಕ್ರಮ ಅವರ ಮುಂದಿನ ಪುಸ್ತಕದ ನಿರೀಕ್ಷೆಯಲ್ಲಿರುವೆ.

‍ಲೇಖಕರು avadhi

12 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading