
ರೇಣುಕಾ ಮಂಜುನಾಥ್
ತಮ್ಮ ಆತ್ಮಗೌರವಕ್ಕಾಗಿ ಅವಿರತ ಹೋರಾಡುತ್ತಿರುವ ಮಹಿಳೆಯರಿಗೆ…
ತೇಜಸ್ವಿಯವರ ಅರ್ಪಣೆ…
ಆರತಿ ಎಚ್ ಎನ್ ನಿಮ್ಮ ಹಾಗೂ ಸುಮನ ಕಿತ್ತೂರ್ ಅವರ ಫೋಟೋಗಳನ್ನು ನೋಡಿ ನೆನಪಾಯಿತು. ಇದನ್ನು ಹಂಚಿಕೊಳ್ಳಬೇಕೆನಿಸಿತು.
ನಾನು ಕುಪ್ಪಳಿಯಲ್ಲಿ ನಡೆದ ಕುವೆಂಪು ಸಮಗ್ರ ಸಾಹಿತ್ಯದ ಬಗೆಗೆ ಆಯೋಜಿಸಿದ್ದ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ್ದೆ. ಆಗ ತೇಜಸ್ವಿ ದಂಪತಿಗಳು ಒಂದಿಡೀ ದಿನ ನಮ್ಮೊಡನೆ ಅವರದ್ದೇ ಆದ ನಮ್ಮೆಲ್ಲರ ನೆಚ್ಚಿನ ಕುಪ್ಪಳ್ಳಿ ಮನೆಯಲ್ಲಿದ್ದುದೊಂದು ಸೌಭಾಗ್ಯವೇ ಸೈ.
ಆಗ ಆಯೋಜಿಸಿದ್ದ ‘ತೇಜಸ್ವಿಯೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಎಲ್ಲರ ಪ್ರಶ್ನೆಗಳಿಗೆ ಕೊಟ್ಟ ಉತ್ತರಗಳು ಸ್ಮರಣೀಯ. ಅದರಲ್ಲಿ ನನ್ನ ಒಂದು ಅತಿ ಸಾಮಾನ್ಯ ಪ್ರಶ್ನೆ ಹೀಗಿತ್ತು. ” ಈ ಸ್ತ್ರೀವಾದ, ಸ್ತ್ರೀ ಸಂವೇದನೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು” ಎಂಬುದು.
ಅದಕ್ಕವರು ” ಬದುಕಿನ ಕ್ಯಾನ್ವಾಸ್ ಬಹಳ ದೊಡ್ಡದಿದೆ, ಇಂತಹಾ ವಿಷಯಗಳಿಗೆ ಪ್ರಾಮುಖ್ಯತೆ ಕೊಟ್ಟು ಬದುಕನ್ನು ಅನುಭವಿಸುವ, ಸಂಭ್ರಮಿಸುವ ಅವಕಾಶಗಳನ್ನು ಕಳೆದುಕೊಳ್ಳಬೇಡಿ” ಎಂದರು…
ನಿಜಕ್ಕೂ ಬದುಕಿಡೀ ಬರೆದಿಟ್ಟುಕೊಳ್ಳ ಬಹುದಾದ ಸಾಲುಗಳು. ಅದೇ ತೇಜಸ್ವಿಯವರು ಕಿರಗೂರಿನ ಗಯ್ಯಾಳಿ ಕೃತಿಯನ್ನು ಅರ್ಪಿಸಿರುವುದು ಯಾರಿಗೆಂದು ಗಮನಿಸಿದಾಗ ಅವರ ಮೇಲಿನ ಗೌರವ ಇಮ್ಮಡಿಯಾಯಿತು..







0 Comments