ತೇಜಸ್ವಿಯನ್ನು ನೆನೆಯುತ್ತಾ, ಓತಿಯನ್ನು ಹುಡುಕುತ್ತಾ…

downloadfile-2
ಅವಿನಾಶ್ ಸೂರ್ಯ
Pikalara-Hakki-(Tejaswi-avara-kathegalalli-baruva-bahu-mukya-hakki)ಪೂರ್ಣಚಂದ್ರ ತೇಜಸ್ವಿ ತಮ್ಮ ಬರಹದ ಮುಖಾಂತರ ಇಡಿ ಪ್ರಪಂಚಕ್ಕೆ ಮತ್ತು ಯುವ ಜನಾಂಗಕ್ಕೆ ಸಾಹಿತ್ಯ, ಫೋಟೋಗ್ರಫಿ, ಫಿಶಿಂಗ್, ಟ್ರೆಕಿಂಗ್, ಹಾಡು, ಸುತ್ತ ಮುತ್ತಲಿನ ಪರಿಸರ ಹಾಗು ಅದರ ಸಂರಕ್ಷಣೆ, ತೋಟಗಾರಿಕೆ, ಬಿರಿಯಾನಿ, ಸಾಮಾನ್ಯ ಜನರು, ವಿಜ್ಞಾನ, ಅಡಿಗೆ, ಸಂಗೀತ, ಚಿತ್ರ ಕಲೆ, ಪಕ್ಷಿ ಪ್ರಾಣಿಗಳು ಇದೆಲ್ಲದರ ಹೊಸ ಲೋಕವನ್ನೇ ಪರಿಚಯಿಸಿದವರು.
ತೇಜಸ್ವಿ (ಪ್ರೀತಿಯಿಂದ ) ಎಲ್ಲರಂತೆ ಬದುಕಿದ ಸಾಮಾನ್ಯ ಮನುಷ್ಯರೇ ಸರಿ, ನಾಡು ತೊರೆದು ಕಾಡಿನ ಕಡೆ ಹೆಜ್ಜೆ ಹಾಕಿ , ತಮ್ಮ ಇಡಿ ಜೀವನವನ್ನು ಪ್ರಕೃತಿಯ ಮಡಿಲಲ್ಲಿ ಕಳೆದರು. ಮೊದಲ ಬಾರಿ ಇವರೇ ತೇಜಸ್ವಿ ಎಂದು ಪರಿಚಯವಾಗಿದು ನನ್ನ ಶಾಲಾ ದಿನಗಳಲ್ಲಿ ಅವರ “ಪರಿಸರದ ಕಥೆ” ಪುಸ್ತಕದಿಂದ.
ಆ ಪುಸ್ತಕ ಎಷ್ಟರ ಮಟ್ಟಿಗೆ ನನ್ನೊಳಗೆ ಬದಲಾವಣೆ ಮಾಡಿತು ಎಂದರೆ! ಇವತ್ತಿಗೆ ಫೋಟೋಗ್ರಫಿ, ಕಾಡು ಸುತ್ತುವುದು, ಪಕ್ಷಿಗಳ ಸಂರಕ್ಷಣೆ ಇದೆಲ್ಲದರ ಬಗ್ಗೆ ಅಪಾರ ಪ್ರೀತಿ ಹುಟ್ಟಿಸಿತು. ಅವರ ಬಿರಿಯಾನಿ ಕರಿಯಪ್ಪ, ಕಿವಿ ನಾಯಿ, ಮಂದಣ್ಣ, ಎಂಗಟ ಇವರೆಲ್ಲ ಸಾಮಾನ್ಯರಾದರು, ಓದುಗರಿಗೆ ಮತ್ತು ಪ್ರಪಂಚಕ್ಕೆ ಇಂಟೆರೆಸ್ಟಿಂಗ್ ಪಾತ್ರಗಳೇ ಸರಿ. ಅವರ ಅರ್ಧದಷ್ಟು ಪುಸ್ತಕಗಳು ಇಂತಹ ಪಾತ್ರಗಳಿಂದಲೇ ಓದುಗರನು ಸೆರೆಹಿಡಿಡದು. ರೆಕ್ಕೆ ಪುಕ್ಕ, ಮಾಯೆಯ ಮುಖಗಳು, ಕರ್ವಾಲೋ, ಮಿಸ್ಸಿಂಗ್ ಲಿಂಕ್ಸ್, ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್, ವಿಸ್ಮಯ ವಿಶ್ವ , ನಡೆಯುವ ಕಡ್ಡಿ ಹಾರುವ ಎಲೆ, ಏರೋಪ್ಲೇನ್ ಚಿಟ್ಟೆ, ಕಾಡಿನ ಕಥೆಗಳು ಹಾಗು ಇನ್ನಷ್ಟು ಕಥೆಗಳು ಓದುವುದಕ್ಕೆ ಅದೆಷ್ಟು ಕುತುಹಲವೋ, ಆ ಕೀಟಗಳು, ಪ್ರಾಣಿ ಪಕ್ಷಿಗಳು ಕಣ್ಣು ಮುಂದೆ ಬಂದಾಗ ಅಷ್ಟೇ ಆಶ್ಚರ್ಯ ಆನಂದ ತರುತ್ತದೆ .
Haaruva-othiketha Camouflaged-Haaruva-othiketha
 ಅವರ ಪುಸ್ತಕಗಳಲ್ಲಿ ಬರುವ ಹಾರುವ ಹಲ್ಲಿ , ನಡೆಯುವ ಕಡ್ಡಿಯನ್ನು ಮೊದಲ ಬಾರಿ ಕಂಡು ಅವುಗಳ ಹಿಂದೆ ಹೋದಾಗ ತೇಜಸ್ವಿ ಹೇಳಿದಂತೆ ” ಯೋಚಿಸಿದಷ್ಟು ಪರಿಸರ ರಹಸ್ಯಮಯವಾಗುತ್ತದೆ ಸಂಪೂರ್ಣವಾಗಿ ತಿಳಿಯುತ್ತೇನೆಂದು ಹೊರಡುವುದು ಮೂರ್ಖತನವೇ ಸರಿ ” ಎಂಬ ಮಾತು ನೆನಪಿಗೆ ಬರುತ್ತದೆ.
ಒಬ್ಬ ಸಾಮಾನ್ಯ ಮನುಷ್ಯ ತನ್ನ ಜೀವನದಲ್ಲಿ ಇಷ್ಟೆಲ್ಲಾ ವಿಷಯಗಳನ್ನ, ಆಸಕ್ತಿಗಳನ್ನ ತನ್ನ ಯೋಚನಾ ಲಹರಿಯಲ್ಲಿ ಬೆಳೆಸಿಕೊಂಡು ಮೂಡಿಗೆರೆಯ ಯಾವುದೊ ಮೂಲೆಯಲ್ಲಿ ಸಾಮಾನ್ಯ ಬದುಕು ಬದುಕಿದರು ಎಂದರೆ ಅದೊಂದು ವಿಸ್ಮಯವೇ ಸರಿ. ಜೀವನ ಸಾಗಿಸುವದಕ್ಕೆಅಕ್ಷರವನ್ನು ಸಮಯ ಸಾಗಿಸುವದಕ್ಕೆ ಕಾಡುಫೋಟೋಗ್ರಫಿ ಫಿಶಿಂಗ್ ಎಂಬ ಹಲವರು ಆಸಕ್ತಿಗಳನ್ನ ತುಂಬಿಕೊಂಡು ತೇಜಸ್ವಿ ಯುವ ಜನಾಂಗದ ಮನ ಸೆಳೆದರು. ತೇಜಸ್ವಿಯನ್ನು ಒಮ್ಮೆಯಾದರು ಬೇಟಿಯಾಗಬೇಕು, ಬೇಟಿಯಾದಾಗ ಅವರೊಂದಿಗೆ ಫೋಟೋಗ್ರಫಿ ಮಾಡಬೇಕೆಂಬ ಆಸೆ, ಕೊನೆಗೆ ನಿರಾಸೆ ಆಗಿ ಉಳಿದು ಹೋಗಿತ್ತು.
ಆದರೆ ನಮ್ಮ ತೇಜಸ್ವಿ ಎಲ್ಲ ಕಡೆ ಜೀವಂತವಾಗಿದಾರೆ, ಅವರ ಪುಸ್ತಕಗಳಲ್ಲಿ, ಯೋಚನೆಗಳಲ್ಲಿ, ಸಾಮಾನ್ಯ ಮನುಷ್ಯರಲ್ಲಿ, ಅವರ ಚಿತ್ರ ಪಟಗಳಲ್ಲಿ , ಮನೆ ಅಂಗಳದಲ್ಲಿ ಹಾಡುವ ಹಕ್ಕಿಗಳ ಕಲರವದಲ್ಲಿ, ಅವರು ನಿರಂತರವಾಗಿ ಕಾಣಸಿಗುತ್ತಾರೆ.
“ನೋಡುವವರಿಗಾಗಿ ಎಲ್ಲಿಯೂ ಯಾವುದು ಕಾದು ಕುಳಿತಿರುವುದಿಲ್ಲ. ಇದನೆಲ್ಲ ನೋಡಲು ಎಲ್ಲಿಗಾಗಲ್ಲಿ ಹೋಗುವ ಅಗತ್ಯವೂ ಇಲ್ಲ. ನಾವು ಎಲ್ಲಿದ್ದೇವೋ ಅಲ್ಲೇ ಅತ್ತಿತ್ತ ಕಣ್ಣು ಬಿಟ್ಟು ನೋಡಿದರೆ ಸಾಕು”

‍ಲೇಖಕರು g

April 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗವಿಸಿದ್ಧ ಹೊಸಮನಿ

    ಆಪ್ತವಾದ ಬರೆಹ.. ನಿಮ್ಮ ಮನಸು ಕೂಡ ತೇಜಸ್ವಿಯಂತಹದ್ದೇ.. ನೀವೂ ಅವರಂತೆ ಯಾಕಾಗಬಾರದು?

    ಪ್ರತಿಕ್ರಿಯೆ
  2. vageesha JM

    “ನೋಡುವವರಿಗಾಗಿ ಎಲ್ಲಿಯೂ ಯಾವುದು ಕಾದು ಕುಳಿತಿರುವುದಿಲ್ಲ. ಇದನೆಲ್ಲ ನೋಡಲು ಎಲ್ಲಿಗಾಗಲ್ಲಿ ಹೋಗುವ ಅಗತ್ಯವೂ ಇಲ್ಲ. ನಾವು ಎಲ್ಲಿದ್ದೇವೋ ಅಲ್ಲೇ ಅತ್ತಿತ್ತ ಕಣ್ಣು ಬಿಟ್ಟು ನೋಡಿದರೆ ಸಾಕು”

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: