ತುಂಬು ಗರ್ಭಿಣಿ ಅಡಿ ಮೇಲಾಗಿ ಬಿದ್ದಾಗ..

ಎ ಎಂ ಪ್ರಕಾಶ್ 
1995ರ ಸಮಯ. ನನ್ನ ಮಡದಿ ತುಂಬು ಗರ್ಭಿಣಿ. ಸಂಜೆಯ ವಾಯುವಿಹಾರದ ನಡಿಗೆಗೆ ಇಬ್ಬರೂ ಹೋಗುವಾಗ ಅಕಸ್ಮಾತ್ತಾಗಿ ಬೆನ್ನು ಮೇಲಾಗಿ ರಸ್ತೆಯಲ್ಲಿ ಜಾರಿಬಿದ್ದಳು. ಇಬ್ಬರಿಗೂ ಆತಂಕ. ಸುಧಾರಿಸಿಕೊಂಡು ಅವಳು ಮೇಲೆದ್ದಾಗ ಆತಂಕದ ವಾತಾವರಣ.
ವೈದ್ಯರನ್ನು ಸಂಪರ್ಕಿಸಿದಾಗ Abdomen scan ತಕ್ಷಣವೇ ಆಗಬೇಕೆಂದು ಕಾರ್ಯಪ್ರವೃತ್ತರಾದರು. Scanning ವೀಕ್ಷಿಸಿ “ಮಗು ಆರೋಗ್ಯವಾಗಿದೆ, ಏನೂ ತೊಂದರೆ ಇಲ್” ಎಂದರು .
ಇಬ್ಬರೂ ಆಗ ನೆಮ್ಮದಿಯ ನಿಟ್ಟುಸಿರು ಬಿಟ್ಟೆವು.
ವೈದ್ಯರು Monitorನಲ್ಲಿ ಅಮೂರ್ತವಾದ ಕಪ್ಪು ಬಿಳುಪಿನ ಚಿತ್ರಣ ತೋರಿಸಿ ಇದು ಮಗುವಿನ ಕಣ್ಣು, ಮೂಗು, ಮುಖ, ಕೈಕಾಲುಗಳೆಂದು ವಿವರಿಸಿದರು.
ನನಗೆ ಅಸ್ಪಷ್ಟವಾದ ಆಕಾರಗಳು ಗೋಚರವಾದವು.
ಆತಂಕ ಹಾಗೂ ಕುತೂಹಲಕರವಾದ ಈ ಘಟನೆ ಹಾಗೂ ಚಿತ್ರಣಗಳು ನನ್ನ ಮೇಲೆ ಗಾಢ ಪರಿಣಾಮವನ್ನು ಉಂಟುಮಾಡಿದವು.
ಇವು ನಂತರದ ವರ್ಷಗಳಲ್ಲಿ
‘ಸಂಬಂಧಗಳು ‘ ಕಪ್ಪು ಬಿಳುಪಿನ ಚಿತ್ರ ಸರಣಿಗಳಾಗಿ ರೂಪುಗೊಂಡವು.
ಈ ಸಂಬಂಧಗಳು ಚಿತ್ರ ಸರಣಿಯಲ್ಲಿ
ಸುಮಾರು ನಲ್ವತ್ತಕ್ಕೂ ಹೆಚ್ಚು ಕಲಾಕೃತಿಗಳು
ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿತವಾದವು.
ಇದು ನನ್ನ ಮೊದಲ ಏಕವ್ಯಕ್ತಿ ಕಲಾಪ್ರದರ್ಶನ.
Title: Relation
Medium: Charcoal on paper.,
Size: 6×4 feet

‍ಲೇಖಕರು avadhi

May 18, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: