ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿಪಟೂರಿನ ಕಾಲೇಜಿನಲ್ಲಿ ಕೋಮಲ್ ನನ್ನ ಸೀನಿಯರ್

ಗಾಣದಾಳು ಶ್ರೀಕಂಠ

ನಟ ಕೋಮಲ್ ನಟನೆಯ ’ಪುಟ್ಟಣ್ಣ ’ ಅಪ್ಪಟ ಮನರಂಜನೆಯ ಚಿತ್ರ. ಚಿತ್ರ ನೋಡಿ ಹೊರ ಹೋಗುವವರೆಗೂ ನಗಿಸುತ್ತಲೇ ಇರುವ ಚಿತ್ರ. ಕೋಮಲ್ ಒಂದು ಮಟ್ಟಿಗೆ ಯಶಸ್ವಿಯಾಗಿದ್ದಾರೆ.

ತಿಪಟೂರಿನ ಕಾಲೇಜಿನಲ್ಲಿ ನಟ ಕೋಮಲ್ ನನ್ನ ಎರಡು ಬ್ಯಾಚ್ ಸೀನಿಯರ್. ಆಗ ಅವರೊಳಗೆ ಇಂಥದ್ದೊಂದು ಕ್ರಿಯಾಶೀಲ, ಹಾಸ್ಯದ ವ್ಯಕ್ತಿತ್ವ ಇದೆ ಎಂದು ಎನಿಸಿರಲಿಲ್ಲ. Any how hat’s up Komal.

‘ಪುಟ್ಟಣ್ಣ’– ವಿಮರ್ಶೆ ಮಾಡುತ್ತಾ ನೋಡಿದರೆ, ‌ಸಣ್ಣ ಪುಟ್ಟ ‘ನೆಗೆಟಿವ್ ತುಣುಕು’ಗಳು ಕಾಣಿಸಬಹುದು. ಸುಮ್ಮನೆ ಒಬ್ಬ ಪ್ರೇಕ್ಷಕನಾಗಿ ನೋಡಿದರೆ, ಸಿಕ್ಕಾಪಟ್ಟೆ ನಗಬಹುದು.

ಸಿನಿಮಾದಲ್ಲಿ ’ಅತ್ಯಾಚಾರ’ದ ಸೀನ್ ಕಟ್ ಮಾಡಿರುವುದು, ’ನಿರ್ಭಯಾ’ ಪ್ರಕರಣದ ಕಾಯ್ದೆಯ ಉಲ್ಲೇಖಿಸಿರುವುದು ಸಕಾಲಿಕವಾಗಿದೆ. ಸಿನಿಮಾದಲ್ಲಿ ಅಲ್ಲಲ್ಲೇ ಸಣ್ಣ ಪುಟ್ಟ ಡಬ್ಬಲ್ ಮೀನಿಂಗ್ ಡೈಲಾಗ್ ಇದ್ದರೂ, ಅದನ್ನು ಗೊತ್ತಾಗದಂತೆ ತೂರಿಸಿ ಪ್ರೇಕ್ಷಕರನ್ನು ನಗಿಸುವುದರಲ್ಲಿ ‘ನಿರ್ದೇಶ’ಕ ಶ್ರೀನಿವಾಸರಾಜು ಯಶಸ್ವಿಯಾಗಿದ್ದಾರೆ..

ಮಹಾನಗರದಲ್ಲಿನ ಮಾಲ್‌ ಗಳ ಪಿವಿಆರ್, ಐನಾಕ್ಸ್ ನಲ್ಲಿ ಚಿತ್ರ ’ಓಡುತ್ತೆ’. (ನಿನ್ನೆ ಮಂತ್ರಿ ಮಾಲ್ ಥಿಯೇಟರ್ ನಲ್ಲಿ ಸಂಖ್ಯೆ ಕಂಡಾಗ ಹಾಗನ್ನಿಸಿತು) ಆದರೆ ಬಿ ಮತ್ತು ಸಿ ಕೇಂದ್ರಗಳಲ್ಲಿ ’ನಡೆಯಬಹುದು’ ಅಲ್ವಾ

‍ಲೇಖಕರು Admin

5 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading