ಶ್ರೀಕಂಠ ಕೂಡಿಗೆ
ಶ್ರೀ ಆರ್ ಕುಮಾರ್, ಆರ್ ಕೆ ಶಿವಮೊಗ್ಗದ ಹೋರಾಟಗಾರ, ಅನೇಕ ಜನಪರ ಚಳುವಳಿಗಳಲ್ಲಿ ಹಣ ಹಾಕಿ ತೊಡಗಿಸಿಕೊಂಡು ಭಾಗಿಯಾಗುತ್ತಾರೆ. ತಮಿಳು ಮನೆ ಮಾತು. 6 ನೇ ತರಗತಿಯವರೆಗೆ ಓದು. ಅನಂತರ ಕನ್ನಡ ಓದು ಬರಹ ಕಲಿತು ಬರೆಹ ಆರಂಭ. “ಅಕ್ಷರ ಸಂಭ್ರಮ” ಮತ್ತು “ಅಂತ:ಕರಣ ಅಕ್ಷರವಾದಾಗ” ಎಂಬ 2 ಕೃತಿ ಪ್ರಕಟಣೆ. ಮಗಳ ಮಂತ್ರ ಮಾಂಗಲ್ಯದಲ್ಲಿ 2ನೇ ಕೃತಿ ಬಿಡುಗಡೆ. ಅವರ “ಮರದ ಧ್ಯಾನದಲ್ಲಿ” ಪ್ರಬಂಧ 8ನೇ ತರಗತಿಗೆ ಪಠ್ಯವಾಗಿದೆ.
ಕನ್ನಡ ಕಂಪ್ಯೂಟರ್ ನಲ್ಲಿಯೂ ಪರಿಣತಿ ಇದೆ. ಒಬ್ಬಂಟಿಯಾಗಿ ಟೈ ಲರ್ ಕೆಲಸ ಆರಂಭಿಸಿ, ನಿಧಾನವಾಗಿ ಆರ್.ಕೆ.ಫ್ಯಾಷನ್ ಅಂಗಡಿ ಆರಂಭಿಸಿ 10-15 ಹೆಣ್ಣು ಮಕ್ಕಳಿಗೆ ಕೆಲಸ ನೀಡಿದ್ದಾರೆ. ಶಾಲೆಗೆ ಸಿದ್ದ ಉಡುಪು ಸರಬರಾಜು, ಮಾರಾಟ ಮಾಡುತ್ತಿದ್ದಾರೆ. “ಕನಸುಗಳಲ್ಲಿ ಬಿಕ್ಕಳಿಕೆ” ಅವರ ಕಥಾ ಸಂಕಲನ.
ತಮಿಳು ಹುಡುಗನೊಬ್ಬ ಕನ್ನಡ ಲೇಖಕನಾಗಿ ಬೆಳೆದು ಬಂದ ಬಗೆ ಇದು. ಅವರ ಅಂಗಡಿಯಲ್ಲಿ ಸಾವಿರಾರು ಸಾಹಿತ್ಯ ಪುಸ್ತಕಗಳಿವೆ. ಸಾಹಿತ್ಯ ಅಭಿರುಚಿಯನ್ನು ತಮ್ಮ ಹತ್ತಿರ ಬಂದವರಿಗೆ ಹೇಳುತ್ತಿರುತ್ತಾರೆ. ನನ್ನ ಎಲ್ಲ ಸಾಧನೆಗೆ ರಹಮತ್ ತರೀಕೆರೆ, ಶ್ರೀಕಂಠ ಕೂಡಿಗೆ, ಕುಂಸಿ ಉಮೇಶ್ ಎಂಬುದಾಗಿ ನೆನಪು ಮಾಡಿಕೊಳ್ಳುತ್ತಾರೆ. ಅದು ಅವರ ಸೌಜನ್ಯ ಅಷ್ಟೆ.







0 Comments