ಕೋಪವನ್ನು ಹೊದ್ದುಕೊಂಡು ಎಲ್ಲರನ್ನು ಎಚ್ಚರಿಸುತ್ತಿದ್ದ ‘ಹೊಸಮನುಷ್ಯ’ದ ಡಿ.ಎಸ್. ನಾಗಭೂಷಣ ಅವರು ಇಂದು ತಡರಾತ್ರಿ ನಮ್ಮನ್ನಗಲಿ ಹೋಗಿದ್ದಾರೆ ನಾಡಿನ ಚಿಂತನಾ ವಲಯಕ್ಕಾದ ಮತ್ತೊಂದು ನಷ್ಟ ಇದು…! ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕ ವಲಯ ಪ್ರತಿರೋಧದ ದೊಡ್ಡ ಧ್ವನಿಯೊಂದನ್ನು ಕಳೆದುಕೊಂಡಿದೆ…!
ಈ ನೋವನ್ನು ಭರಿಸುವ ಶಕ್ತಿ ತಮಗೆ ಸಿಗಲಿ…!
–ಕಿರಣ್ ಗಾಜನೂರು
ತನಗನಿಸಿದ ಸತ್ಯವನ್ನು ಹೊಡೆದಂತೆ ನೇರವಾಗಿ ಹೇಳಬಲ್ಲ ಡಿ ಎಸ್ ಎನ್ ಇಲ್ಲ ಎನ್ನುವುದನ್ನು ನಂಬಲಾಗ್ತಿಲ್ಲ. ತುಂಬಾ ಬೇಸರ
–ಸುಬ್ರಾಯ ಚೊಕ್ಕಾಡಿ
ಕುಪ್ಪಳ್ಳಿಯ ಲೋಹಿಯಾ ಚಿಂತನಾ ಶಿಬಿರಕ್ಕೆ ಬಂದಿದ್ದಾಗ ಅವರನ್ನು ಭೇಟಿಯಾದದ್ದು ಕೊನೆಯ ಭೇಟಿಯಾಯಿತು.
ನಾಡು ಓರ್ವ ಧೀಮಂತ ಚಿಂತಕನನ್ನು ಕಳೆದುಕೊಂಡು ತಬ್ಬಲಿಯಾಯಿತು.
-ಜಗದೀಶ ಕೊಪ್ಪ






0 Comments