ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಿ ಆರ್ ನೆನಪಿಗಾಗಿ..

ಆತ್ಮಿಯರೇ,

2020 ಫೆಬ್ರವರಿ 20 ಕ್ಕೆ ಕನ್ನಡದ ಶ್ರೇಷ್ಠ ವಿಮರ್ಶಕ, ಪ್ರಾಧ್ಯಾಪಕ ಡಾ.ಡಿ.ಆರ್.ನಾಗರಾಜ್ ಅವರಿಗೆ 65 ವಸಂತಗಳು ತುಂಬಲಿವೆ.

ಈ ಸವಿನೆನಪಿನಲ್ಲಿ ‘ಡಿ.ಆರ್.ಎನ್’65 -ಒಂದು ನೆನಪು’ ಕಾರ್ಯಕ್ರಮವನ್ನು ಫೆಬ್ರವರಿ 23 ರ ಭಾನುವಾರ ‘ಸಂಸ ಥಿಯೇಟರ್’ ಮತ್ತು ಡಿ.ಆರ್.ನಾಗರಾಜ್ ಟ್ರಸ್ಟ್ ವತಿಯಿಂದ ಒಂದು ದಿನದ ಕಾರ್ಯಕ್ರಮ ಹಾಗೂ ವಿಮರ್ಶಾ ಕಮ್ಮಟ ಹಮ್ಮಿಕೊಂಡಿದ್ದೇವೆ.

ಆ ದಿನ ಪುಸ್ತಕ ಬಿಡುಗಡೆ, ವಿಚಾರ ಗೋಷ್ಟಿ ನಡೆಯಲಿದೆ.

ಹಾಗಾಗಿ ಡಿ.ಆರ್.ನಾಗರಾಜ್ ಅವರ ವಿಮರ್ಶೆ, ಸಿದ್ದಾಂತ, ಬೋಧನೆ, ಒಡನಾಟ, ಅವರಪುಸ್ತಕ ಕುರಿತ ಒಂದು ಲೇಖನ ವನ್ನು ಬರೆದು ಕೊಡಲು ಕೋರುತ್ತೇನೆ.

ಅಂದು ಡಿ.ಆರ್.ನಾಗರಾಜ್ ಕುರಿತ ಲೇಖನ ಗಳ ಸಂಪಾದಿತ ಪುಸ್ತಕ ಬಿಡುಗಡೆ ಯಾಗಲಿದೆ.

ತಾವು ಡಿಸೆಂಬರ್ 25 ರ ಒಳಗಾಗಿ ತಮ್ಮ ಲೇಖನ ವನ್ನು drshivarajaoxf@gmail.com ಅಥವಾ ಕೈಬರಹ ದ ಪ್ರತಿಯಾದರೆ ಡಾ.ಶಿವರಾಜ ಬ್ಯಾಡರಹಳ್ಳಿ, ನಂ.66, 5ನೇ ಅಡ್ಡರಸ್ತೆ, 6ನೇ ಮುಖ್ಯ ರಸ್ತೆ, ಜ್ಞಾನ ಜ್ಯೋತಿ ನಗರ, ಮಲ್ಲತ್ತ ಹಳ್ಳಿ, ಬೆಂಗಳೂರು-56005

ಈ ವಿಳಾಸಕ್ಕೆ ಕಳುಹಿಸಿ ಕೊಡಲು ವಿನಮ್ರವಾಗಿ ಕೋರುತ್ತೇನೆ.

ಈ ಮೂಲಕ ಡಿ.ಆರ್. ನೆನಪನ್ನು ಮತ್ತೆ ಮತ್ತೆ ಮನನ ಮಾಡೋಣ. ವಂದನೆಗಳೊಂದಿಗೆ

-ಡಾ.ಶಿವರಾಜ್ ಬ್ಯಾಡರಹಳ್ಳಿ

‍ಲೇಖಕರು avadhi

10 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading