ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಬ್ಬಿಂಗ್ ವಿರೋಧ ಎನ್ನುವುದು ನಮ್ಮ ಬೆಳವಣಿಗೆಗೆ ಅಡ್ಡವಾಗಿರುವ ದೊಡ್ಡ ಚೀನಾಗೋಡೆ..

ವೀರಣ್ಣ ಮಡಿವಾಳರ್

ಗೆಳೆಯರೆ, ಇಲ್ಲೆಲ್ಲೋ ಇದ್ದು ಹಾಗೆಯೇ ಮತ್ತೆ ಬರದಂತೆ ಎದ್ದು ಹೋಗಿಬಿಟ್ಟ ಕನ್ನಡದ ಪ್ರಖರದನಿಯೊಂದನ್ನು ಇತ್ತೀಚೆಗೆ ಓದಿದೆ. ಅದರ ಕೆಲ ಭಾಗವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಬಿ.ಸಿ.ದೇಸಾಯಿ ಎಂಬ ಹೆಸರಿನ ಈ ಚಿಂತಕ ಬರೆದದ್ದು ಕಡಿಮೆ, ಜ್ಞಾನದ ಸಮೃದ್ಧತೆಯಿಂದ ನೋಡಿದರೆ ಅಗಾಧವಾದದ್ದು. ಹೆಚ್ಚು ಹೇಳಬಯಸದೆ ಈಗ ನಡೆಯುತ್ತಿರುವ ಡಬ್ಬಿಂಗ್ ಕುರಿತ ವಿಚಾರಕ್ಕೆ ಭಾಷಾಪ್ರೇಮವನ್ನು ಜೋಡಿಸಿ ಹಾದಿ ತಪ್ಪಿಸುತ್ತಿರುವವರಿಗೆ ಬಿ.ಸಿ.ದೇಸಾಯಿಯವರ ಭಾಷೆ ಮತ್ತು ಜ್ಞಾನ ಪ್ರಬಂಧದ ಮಾತುಗಳು ಇಂತಿವೆ. “ ಕನ್ನಡದಲ್ಲಿ ಎಷ್ಟು ಜ್ಞಾನ ಸೃಷ್ಟಿಯಾಗಬೇಕಾಗಿತ್ತು ಮತ್ತು ಹಾಗೇಕಾಗಲಿಲ್ಲ ಎಂಬ ಪ್ರಶ್ನೆ ನಮಗೆಲ್ಲ ಕಾಡಬೇಕಾಗಿತ್ತು. ಕೇವಲ ಕನ್ನಡ ಮಾತನಾಡುವ ಪಣ ತೊಡುವುದರಿಂದ ಎಂಥ ಕಚಡಾ ಚಿತ್ರವಿದ್ದರೂ ಅದು ಕನ್ನಡದ್ದೂ ಎಂಬ ಮಮತೆಯಿಂದ ನೋಡುವುದರಿಂದ ನಮ್ಮ ಜನರ ವೈಚಾರಿಕ ಪ್ರಗತಿಯಾಗುವುದಿಲ್ಲ. ಕನ್ನಡದಲ್ಲಿ ಎಷ್ಟು ಜ್ಞಾನ ಉಪಲಬ್ಧವಾಗುತ್ತದೆ ಎಂಬುದರ ಮೇಲೆ ನಾವು ಇತಿಹಾಸದಲ್ಲಿ ಬೆಳೆಯುವ ಸಾಧ್ಯತೆ ಇರುತ್ತದೆ “ ಡಬ್ಬಿಂಗ್ ವಿರೋಧ ಎನ್ನುವುದು ನಮ್ಮ ಬೆಳವಣಿಗೆಗೆ ಅಡ್ಡವಾಗಿರುವ ದೊಡ್ಡ ಚೀನಾಗೋಡೆಯೇ ಅಲ್ಲವೆ?      ]]>

‍ಲೇಖಕರು G

23 June, 2012

2 Comments

  1. Mallesha Belavadi

    ಡಬ್ಬಿಂಗ್ ಬರಲಿ. ಕನ್ನಡಿಗನಿಗೆ ಎಲ್ಲವೂ ಕನ್ನಡದಲ್ಲಿ ಸಿಗಲಿ. ಬೇರೆ ಭಾಶೆಗಳ ಮೇಲಿನ ಅವಲಂಬನೆ ತಪ್ಪಲಿ.

  2. Raghavendra Shetti

    ಡಬ್ಬಿಂಗ್ ವಿರೋಧ ಎನ್ನುವುದು ಸರಿಯಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading