ಡಬ್ಬಿಂಗ್ ಚರ್ಚೆ:ಅಚ್ಯುತಕುಮಾರ್ ಅವರೇ,
ಜ್ಞಾನ ಕೇವಲ elite ವರ್ಗದ ಸ್ವತ್ತಾಗಬಾರದು, ಜ್ಞಾನ ಎಲ್ಲರಿಗೂ ಸೇರಿದ್ದು ಎಂಬ ಕಾರಣಕ್ಕೇ ನಾನು ಡಬ್ಬಿಂಗ್ ಬೇಕು ಎಂದು ವಾದ ಮಾಡುತ್ತಿರುವವನಾಗಿರುವುದರಿಂದ ಮತ್ತು ಅದೇ ಕಾರಣಕ್ಕೆ ಪುರೋಹಿತಶಾಹಿಯನ್ನ ವಿರೋಧಿಸುವವನಾಗಿರುವುದರಿಂದ, ನಿಮ್ಮ ಮಾತು ಸ್ವಲ್ಪ ಎಡಬಿಡಂಗಿತನದಿಂದ ಕೂಡಿದೆ ಅನಿಸಿತು. ಕನ್ನಡದ ಸಾಮಾನ್ಯ ಜನರಿಗೆ ಜ್ಞಾನ ಕನ್ನಡದಲ್ಲಿ ತಲುಪಬೇಕು ಎಂದು ಹಂಬಲಿಸುವುದರಲ್ಲಿ ಪುರೋಹಿತಶಾಹಿ ಹೇಗೆ ಅಡಗಿದೆ? ಬದಲಾಗಿ ಸಾಮಾನ್ಯ ಜನರನ್ನ ಜ್ನಾನವಂಚಿತರಾಗಿ ಮಾಡುವುದರಲ್ಲೇ ಪುರೋಹಿತಶಾಹಿ ಮನಸ್ಸು ಕೆಲಸ ಮಾಡುತ್ತಿದೆ ಎಂದು ನಿಮಗೆ ಅನಿಸುತ್ತಿಲ್ಲವೇ? ಕನ್ನಡಿಗರಿಗೆ ಜಗತ್ತಿನ ಜ್ಞಾನವೆಲ್ಲ ಬೇಕು, ಹಾಗಾದಾಗ ಮಾತ್ರ ನಾವು ಸಂಕುಚಿತ ಮನಸ್ಸನ ಕಳಚಿ ವಿಶ್ವದ ಜೊತೆ ಸಮಕಾಲೀನರಾಗಿ ಸಾಗಲು ಸಾಧ್ಯ.
ಅದರ ಬದಲು ಭಾರತದಲ್ಲಿ elite ಭಾಷೆಯಾಗಿಯೇ ಉಳಿದಿರುವ ಇಂಗ್ಲಿಷ್ ನಲ್ಲೆ ನೀವು ವಿಷಯವನ್ನ ಹೇಳುತ್ತೀನಿ ಅಂತ ಹೊರಟರೆ ಎಷ್ಟು ಪರ್ಸೆಂಟ್ ಜನ ನಿಜವಾಗಿ ಅರ್ಥ ಮಾಡಿಕೊಳ್ಳಬಲ್ಲರು? ನಿಮ್ಮ ಊರಿನಲ್ಲಿ ಜನರೆಲ್ಲಾ ಇಂಗ್ಲಿಷ್ ನಲ್ಲೇ ಮಾತನಾಡುತ್ತಾರೆಯೇ? ಪ್ರತಿಯೊಬ್ಬ ಕನ್ನಡಿಗನೂ ಇಂಗ್ಲಿಷ್ ಕಲಿತು ಇಂಗ್ಲಿಷ್ ತನ್ನ ಆಡುಭಾಷೆಯಂತೆ ಮಾತನಾಡುವವರಾಗಿ ತಯಾರಾದರೆ ನಮಗೂ ಸಂತೋಷವೇ. ಆದರೆ ಹಾಗೆ ಆಗಲಿಕ್ಕೆ (ಅಕಸ್ಮಾತ್ ಆದರೂ) ಇನ್ನು ೬ ತಲೆಮಾರುಗಳಾದರೂ ಬೇಕು. ಅಲ್ಲೀ ತನಕ ಪ್ರಪಂಚದ ಅರಿವೇ ಇಲ್ಲದೆ ಉಸಿರು ಕಟ್ಟಿಕೊಂಡೇ ಇರೋಣ ಅಂತೀರಾ? ಬುದ್ದಿಜೀವಿಗಳ ಪ್ರಕಾರ ಇಷ್ಟು ದಿನ ಸಂಸ್ಕೃತ ಪುರೋಹಿತಶಾಹಿ ಧೋರಣೆಯಾಗಿತ್ತು ಮತ್ತು ಕನ್ನಡ ಎಲ್ಲರನ್ನೂ ತಲುಪುವ ಮಾರ್ಗ ಆಗಿತ್ತು. ಈಗ ಡಬ್ಬಿಂಗ್ ಬೇಕು ಅಂದ ಕೂಡಲೇ, ಕನ್ನಡ ಪುರೋಹಿತಶಾಹಿ ಆಗಿಬಿಡೋದೇ? ಪುರೋಹಿತಶಾಹಿಗಳಿಂದ ಕನ್ನಡಿಗರ ಮೇಲೆ ಕನ್ನಡದ ಹೇರಿಕೆ! ಹ್ಹ ಹ್ಹ, ಬಹಳ ತಮಾಷೆಯಾಗಿದೆ ಕೇಳೋದಕ್ಕೆ.
]]>






This is a pure commericialy motivated move from people who support Dubbing. people are not understanding the vested interests involved in this, So far only border districts used to have other language movies running in their theaters which constitutes 50-60 % of theaters, now with this move they want spread this to 100% of theaters in the state thus vanishing kannada movies.