ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೊಟೊ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ…

ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2023 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ. 

ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು (ಓವರ್ಸೀಸ್ ಸಿಟಿಜೆನ್ ಆಫ್‌ಇಂಡಿಯಾ (OCI) ಚೀಟಿ ಉಳ್ಳವರು ಪ್ರವೇಶಕ್ಕೆ ಅರ್ಹರಾಗಿರುವುದಿಲ್ಲ).

ಹಾಗೂ ೧೮ ರಿಂದ ೨೯ ವರ್ಷ ವಯಸ್ಸಿನವರಾಗಿರಬೇಕು. ಅಂದರೆ, ನೀವು ಜನವರಿ ೧, ೧೯೯೩ರ ನಂತರ ಮತ್ತು ಜನವರಿ ೧, ೨೦೦೫ ನಡುವೆ ಹುಟ್ಟಿದವರಾಗಿದ್ದಲ್ಲಿ ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು. 

ಪ್ರವೇಶಗಳನ್ನು ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಕಳಿಸಬಹುದು. ಈ/ಮೂರು/ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. 

ಈ ಆಯ್ಕೆಯನ್ನು ಪ್ರತಿವರ್ಷದಂತೆ ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡಲಿದೆ. 

ಟೊಟೊ ಪುರಸ್ಕಾರವು ೫೦,೦೦೦ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ. 

ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ:  ೧೫ ಸಪ್ಟೆಂಬರ್,  ೨೦೨೨

ಪ್ರವೇಶಗಳನ್ನು ಈ ಕೆಳಗಿನ ಈಮೇಲ್ ವಿಳಾಸಕ್ಕೆ ಕಳಿಸಿರಿ: totokannada@gmail.com ಸಂದೇಹಗಳಿದ್ದಲ್ಲಿ ಇದೇ ವಿಳಾಸಕ್ಕೆ ಬರೆದು ಹೆಚ್ಚಿನ ವಿವರ ಕೇಳಬಹುದು.

ನೀವು ಸಲ್ಲಿಸುವ ಪ್ರತಿ ಪ್ರವೇಶದ ಜೊತೆಗೆ ಅರ್ಜಿಯನ್ನು ಲಗತ್ತಿಸಬೇಕು. ಈ ಅರ್ಜಿಯನ್ನು http://totofundsthearts.blogspot.com ಇಲ್ಲಿಂದ ಕಳಿಸಬಹುದು. ಈ ಅರ್ಜಿ ಇಲ್ಲದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ. 

ನಿಯಮಗಳು:

ನೀವು ೧ನೇ ಜನವರಿ ೧೯೯೩ ರ ನಂತರ ಮತ್ತು ಜನವರಿ ೧, ೨೦೦೫ ನಡುವೆ ಹುಟ್ಟಿದವರಾಗಿದ್ದಲ್ಲಿ ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರಾಗಿರುತ್ತೀರಿ

ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ: ೧೫ ಸಪ್ಟೆಂಬರ್,  ೨೦೨೨. ಈ ದಿನಾಂಕದ ನಂತರ ಬಂದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ.

ಪ್ರವೇಶಗಳನ್ನು MS Word ನಲ್ಲಿ ನುಡಿ, ಬರಹ ಅಥವಾ ಯೂನಿಕೋಡ್ ನಲ್ಲಿ ಮಾತ್ರ ಕಳಿಸಬೇಕು. ಮುದ್ರಿತ ಅಥವಾ ಹಸ್ತಪ್ರತಿಗಳನ್ನು ಸ್ವೀಕರಿಸುವುದಿಲ್ಲ. MS Word ಅಲ್ಲದೇ ಬೇರೆ ಯಾವ ಸಾಫ್ಟವೇರ್ ನಲ್ಲಿಯೂ ಪ್ರವೇಶಗಳನ್ನು ಸ್ವೀಕರಿಸುವುದಿಲ್ಲ.

ಪ್ರವೇಶಗಳನ್ನು ಈ ಈಮೇಲ್ ವಿಳಾಸಕ್ಕೆ ಕಳಿಸಿರಿ: totokannada@gmail.com

ಪ್ರವೇಶಕ್ಕಾಗಿ ಕಳಿಸುವ ಕತೆ, ಕವಿತೆ, ನಾಟಕಗಳ ಮೇಲೆ ಎಲ್ಲಿಯೂ ನಿಮ್ಮ ಹೆಸರು ಬರೆದಿರಬಾರದು. ಇದನ್ನು ಅರ್ಜಿಯಲ್ಲೇ ಬರೆದು, ಪ್ರವೇಶದ ಜೊತೆ ಕಳಿಸಬೇಕು.

ಕವಿತೆಗಳನ್ನು ಕಳುಹಿಸುವವರು  ರಿಂದ ೧೨ ಕವಿತೆಗಳನ್ನು ಕಳಿಸಬಹುದು. ಕತೆಗಳನ್ನು ಕಳಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಬಹುದು, ಆದರೆ ಎಲ್ಲ ಕತೆಗಳೂ 

ಸೇರಿ 7500 ಶಬ್ದಗಳನ್ನು ಮೀರಬಾರದು. ಪ್ರವೇಶಕ್ಕೆ ಕಳಿಸುವ ನಾಟಕಗಳ ಶಬ್ದಮಿತಿ ೧೦,೦೦೦ ಶಬ್ದಗಳು.

ನೀವು ಎಲ್ಲ ಮೂರು ಪ್ರಕಾರಗಳಲ್ಲಿಯೂ ಪ್ರವೇಶಗಳನ್ನು ಕಳಿಸಬಹುದು. ಆದರೆ ಪ್ರತಿಯೊಂದು ಪ್ರಕಾರಕ್ಕೂ ಪ್ರತ್ಯೇಕವಾದ ಪ್ರವೇಶಗಳನ್ನು ಕಳಿಸಬೇಕು. 

ಉದಾಹರಣೆಗೆ ನೀವು ಮೂರೂ ಪ್ರಕಾರಗಳಿಗೆ ಪ್ರವೇಶಗಳನ್ನು ಕಳಿಸಬಯಸಿದರೆ, ನಿಮ್ಮ ಕವಿತೆಗಳನ್ನು ಮೊದಲ ಪ್ರವೇಶವಾಗಿಯೂ, ಕತೆಗಳನ್ನು ಎರಡನೆಯ ಪ್ರವೇಶವಾಗಿಯೂ, ನಾಟಕವನ್ನು ಮೂರನೆಯ ಪ್ರವೇಶವಾಗಿಯೂ ಕಳಿಸಬೇಕು. 

ಪ್ರತಿ ಪ್ರತ್ಯೇಕ ಪ್ರವೇಶಕ್ಕೂ ಪ್ರತ್ಯೇಕ ಅರ್ಜಿ ಕಳಿಸಬೇಕು.

ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಿಡಿ ಕತೆ, ಕವಿತೆ, ನಾಟಕಗಳನ್ನು ಕಳಿಸಬಹುದು. ಆದರೆಎಲ್ಲವೂ ಈಗಾಗಲೇ ಹೇಳಿದಂತೆ ಈಮೇಲ್ ಮೂಲಕ ಮಾತ್ರ ಕಳಿಸಬೇಕು. 

ಈಮೇಲ್ Subject ನಲ್ಲಿ ನಿಮ್ಮ ಕೃತಿಯ ಪ್ರಕಾರವನ್ನು ಸೂಚಿಸಬೇಕು. ಉದಾಹರಣೆಗೆ: ‘ಕನ್ನಡ ಸೃಜನಶೀಲ ಸಾಹಿತ್ಯ – ಕವಿತೆ’,‘ಕನ್ನಡ ಸೃಜನಶೀಲ ಸಾಹಿತ್ಯ – ನಾಟಕ’ ಅಥವಾ‘ ಕನ್ನಡ ಸೃಜನಶೀಲ ಸಾಹಿತ್ಯ – ಕತೆ’.

ಷರತ್ತುಗಳು:

ನೀವು ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಗತ್ಯವಾದಲ್ಲಿ ನೀವು ಸಲ್ಲಿಸಿದ ಬರಹಗಳ ಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವ ಸಂಸ್ಥೆಯ ಬ್ಲಾಗ್’ನಲ್ಲಿ/ಪುರಸ್ಕಾರದ ಪ್ರಚಾರಕ್ಕೆ ಬಳಸಿಕೊಳ್ಳುವ ಹಕ್ಕು ಟಿ.ಎಫ್.ಎ.ಗೆ ಇದೆ. ಉಳಿದಂತೆ ಕೃತಿಯ ಪೂರ್ತಿ ಹಕ್ಕುಸ್ವಾಮ್ಯವು ಬರಹಗಾರರದೇ ಆಗಿರುತ್ತದೆ.

ಈ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ. ಪುರಸ್ಕಾರದ ಕುರಿತು ಟಿ.ಎಫ್.ಎ ಆಯ್ಕೆ ಸಮಿತಿಯನಿರ್ಧಾರವೇ ಅಂತಿಮವಾದುದುಮತ್ತು ಇದನ್ನು ಯಾವ ಬಗೆಯಲ್ಲೂ ಪ್ರಶ್ನಿಸಲಾಗದು. 

ಈ ಪುರಸ್ಕಾರಕ್ಕೆ ಭೂಮಿಜಾಟ್ರಸ್ಟ್ ನೆರವು ನೀಡುತ್ತಿದೆ. ಭೂಮಿಜಾ ಪ್ರದರ್ಶನ ಕಲೆಗಳ ಕಾರ್ಯಕ್ರಮಗಳನ್ನು ಬೆಂಗಳೂರು ಸೇರಿದಂತೆ ವಿಶ್ವಾದ್ಯಂತ ಹಮ್ಮಿಕೊಳ್ಳುತ್ತಿರುವ ಸಂಸ್ಥೆ.

ಟಿ.ಎಫ್.ಎ. ಸಂಸ್ಥೆಯು ಆಂಗೀರಸ ‘ಟೊಟೊ’ ವೆಲ್ಲಾನಿಯ ಸ್ಮರಣಾರ್ಥ ೨೦೦೪ ರಲ್ಲಿ ಸ್ಥಾಪಿತವಾಯಿತು. 

ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ತರುಣ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. 

ಈ ಮೂಲಕ ಯುವ ಪ್ರತಿಭೆಗಳು ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳುವಲ್ಲಿ ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.

‍ಲೇಖಕರು Admin

26 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading